For Quick Alerts
  ALLOW NOTIFICATIONS  
  For Daily Alerts

  ಮೇಲುಕೋಟೆ ಜನರ ಮೂರನೇ ಕಣ್ಣು ತೆರೆಸಿದ ಹಾಡು

  By Rajendra
  |

  'ಪ್ರೇಮ್ ಅಡ್ಡ' ಚಿತ್ರದ ಹಾಡೊಂದು ಮೇಲುಕೋಟೆ ಹುಡುಗಿಯರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಆದರೆ ಇದೇ ಹಾಡು ಪಡುವಾರಳ್ಳಿ ಹುಡುಗರು ಒಳಗೊಳಗೇ ಖುಷಿಪಡುವಂತೆ ಮಾಡಿದೆ. ನಮ್ಮೂರ ಹುಡುಗೀರು ಹಿಂಗೆಲ್ಲಾ ಇಲ್ಲ. ನೀವು ನೋಡಿದ್ರೆ ಹಿಂಗೆಲ್ಲಾ ಬರ್ದ್ ಬಿಟ್ಟಿದ್ದೀರಲ್ಲಾ ಎಂದು ಪ್ರೇಮ್ ಮೇಲೆ ಮೇಲುಕೋಟೆ ಜನ ಮುರಿದು ಬಿದ್ದಿದ್ದಾರೆ.

  ಆದರೆ ಪಡುವಾರಳ್ಳಿ ಹುಡುಗರು ಮಾತ್ರ ಹಾಡು ಸೂಪರ್ ಎನ್ನುತ್ತಿದ್ದಾರೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಒಂದು ಸ್ಥಳದ ಜನರಿಗೆ ಇಷ್ಟವಾಗದ ಹಾಡು ಮತ್ತೊಂದು ಪ್ರದೇಶದ ಹುಡುಗರಿಗೆ ಸಖತ್ ಖುಷಿ ಕೊಡುತ್ತಿದೆಯಂತೆ.

  ಮಳವಳ್ಳಿ ಸಾಯಿಕೃಷ್ಣ ರಚಿಸಿರುವ ಈ ಹಾಡನ್ನು ಕೈಲಾಶ್ ಖೇರ್, ರಾಜು ತಾಳಿಕೋಟೆ ಹಾಗೂ ಅನುರಾಧಾ ಭಟ್ ಹಾಡಿದ್ದಾರೆ. ಹಾಡಿನ ಸಾಹಿತ್ಯ ಮೇಲುಕೋಟೆಯರನ್ನು ಕೆಣಕುವಂತಿದ್ದರೂ ಕೇಳಲು ಇಂಪಾಗಿದೆ.

  ವಿ. ಹರಿಕೃಷ್ಣ ಅವರ ಸಂಗೀತ ಈ ಹಾಡಿನ ಇಂಪನ್ನು ಹೆಚ್ಚಿಸಿದೆ. ಈ ಹಾಡನ್ನು ಚಿತ್ರದಿಂದ ಕೈಬಿಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಮೇಲುಕೋಟೆ ಜನ ಈಗಾಗಲೆ ತಹಸೀಲ್ದಾರ್ ಅವರಿಗೆ ದೂರು ನೀಡಿದ್ದಾರೆ.

  ಈ ಹಾಡನ್ನು ಕೇಳಿದ ಮೇಲುಕೋಟೆ ಜನರ ಆಕ್ರೋಶ ಎಷ್ಟಿತ್ತೆಂದರೆ, ಈಗಾಗಲೆ ಮೇಲುಕೋಟೆ ಬಂದ್ ಆಚರಿಸಿದ್ದಾರೆ. ಪ್ರೇಮ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪೊರಕೆ ಸೇವೆಯನ್ನೂ ಮಾಡಿ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ. ಈ ಹಾಡಿನ ಸಾಹಿತ್ಯ ಇಲ್ಲಿದೆ ಓದಿ. ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯ ತಿಳಿಸಿ.

  ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
  ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
  ಮಂಡಿಗಂಟ ಲಂಗ ಎತ್ಕೊಂಡ್ ತಳುಕು ಬಳುಕ ಸೊಂಟ
  ಬಿಟ್ಕೊಂಡು ಕುಲುಕಿ ಕುಲುಕಿ ನಡೀತಾಳೆ ಏನ್ ವಯ್ಯಾರ
  ತೋಟಕ್ಕೊಂದು ಮಿಸ್ಸಿನ ಮನೆ, ಆಟಕ್ಕೊಂದು ಬೆಲ್ಲದ ಮನೆ,
  ಊಟಕ್ಕಿಟ್ಕೋ ಒಂದೇ ಮನೆ ಗೂಟದ ರಾಮಣ್ಣ
  ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
  ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ

  ಏನ್ ಹೇಳ್ಲಿ ಅವಳ ಸಿಹಿ ನಗುವಾ..
  ಏನ್ ನಿಮ್ಮವ್ವನಾ.. ಏನ್ ನಿಮ್ಮವ್ವನಾ.. ಅವ್ವನಾ.. ಅವ್ವನಾ..
  ಲೇ ಪಿತೃಪುಳ್ಳಿ ಮಗನಾ.. ನಿಮ್ ಅವ್ವನ ಅಲ್ಲೋ.. ಯಪ್ಪಾ.. ಯೌವ್ವನ.. ಯೌವ್ವನ
  ಅವ್ವನಾ.. ಅವ್ವನಾ... ಅವ್ವನಾ...
  ಏ ನಿದ್ದಿಗಣ್ಣಲ್ಲಿ ಹುಟ್ಟಿದ ನನ್ ಮಗನಾ.. ಸತ್ಯಾ ನಾಶ ಹೋಗ್ಲೇ...

  ಊಟಕ್ಕೆ ಉಪ್ಪಿನಕಾಯಿ, ಆಟಕ್ಕೆ ಕುಂಬಳಕಾಯಿ ನೆಕೊಳ್ಳಿ ಉನ್ಕೊಳ್ಳಿ ಅಂತಾಳೆ...
  ಇವಳು ನಕ್ ಬಿಟ್ರೆ ತೂತ್‌ವಡೆ...
  ಇವಳು ಸಿಕ್ ಬಿಟ್ರೆ ಮೊಸರು ವಡೆ..
  ಕೆಂಪಗಿರೋ ಬತ್ತಾಸು ಬಾಯಿಗಿಟ್ರೆ ಖಲ್ಲಾಸು..
  ಚೀಪ್ಕಳಿ ಚೀಪ್ಕಳಿ ಅಂತಾಳೆ...
  ಇವಳು ಬಚ್ಚಿಟ್ರೆ ಹೊಂಬಾಳೆ..
  ಇವಳು ಬಿಚ್ ಬಿಟ್ರೆ ಬಾಳ್ ಹಾಳೇ
  ಮೈಯೆಲ್ಲ ಮಂಡ್ಯ ಸಕ್ರೆ ಫ್ಯಾಕ್ಟರಿ ಕಣನ್ನಾ..
  ಇವ್ಳು ಮೈಸೂರು ಪಾರ್ಕಿನಂಗೆ ನೈಸು ಕಣನ್ನಾ...
  ವಸಿ ನಾಲಗೆ ಹಾಕಿ ನೆಕ್ಕಿ ಬಿಡೋಣ..
  ಮೇಲುಕೋಟೆ ಹುಡುಗಿ ಒಬ್ಳು...
  ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
  ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
  ಮಂಡಿಗಂಟ ಲಂಗ ಎತ್ಕೊಂಡ್ ತಳುಕು ಬಳುಕ ಸೊಂಟ ಬಿಟ್ಕೊಂಡು
  ಕುಲುಕಿ ಕುಲುಕಿ ನಡೀತಾಳೆ ಏನ್ ವಯ್ಯಾರ

  ನನ್ನ ಮೊರೆಯ ಕ್ಯಾಳದೇನೋ... ಸೀ ಕಿಸ್ನಾ.. ಸೀ ಕಿಸ್ನಾ...
  ಕಿಸ್ನಾ.. ನನ್ನ ಸೀರೆಯನ್ನು ಈ ಧೂರ್ತ ಕೌರವರು ಕಿತ್ತಾಕುತ್ತಿರುವರು..
  ನನ್ನ ಮಾನವನ್ನು ಕಾಪಾಡು ಬಾ...

  ದ್ರೌಪತಿ ನಿನ್ನ ಸೀ ಕಿಸ್ನಾ ನಿಗುರಿಸುತ್ತಿರುವನು..
  ನಿಗುರಿಸುತ್ತಿರುವನು ಅಲ್ಲೋ.. ನಿದ್ರಿಸುತ್ತಿರುವನು...

  ಇವಳು ದೇವರು ಕೊಟ್ಟ ವರದಾನ
  ಮೈಯೇ ಒಂದು ಮೈದಾನ
  ಆಡ್ಕಳ್ಳಿ ಆಡ್ಕಳ್ಳಿ ಅಂತಾಳೆ
  ಬಾರ್ಲ ಕಬಡ್ಡಿ ಆಟ ಆಡುವ
  ಅಲ್ಲಿ ತಗ್ಗಿ ಬಗ್ಗಿ ಕುಣಿಯುವ
  ಇವಳು ಬೇರೆ ಪಕ್ಕದ ಜಮೀನು
  ನಲ್ವತ್ತಾದ ಕೆಮ್ಮಣ್ಣು
  ಉತ್ಕೊಳ್ಳಿ ಉತ್ಕೊಳ್ಳಿ ಅಂತಾಳೆ..
  ಅಲ್ಲಿ ಕಬ್ಬನ್ನಾರ ಬೆಳೆಯುವ
  ಇಲ್ಲ ತೆಂಗಿನ ಸಸಿ ನೆಡುವ
  ಬೇಲಿಯಿಂದ ಬೇಲಿಗಾರೋ ಪಾತರಗಿತ್ತಿನೋ...
  ಗಳಿಗೆ ಗಳಿಗೆಗೊಂದು ಬಣ್ಣ ಹಾಕೋ ಊಸರವಳ್ಳಿನೋ...
  ಇವಳು ಮುಟ್ರೆ ಮುನಿಸೊಪ್ಪು ಕಣನ್ನೋ...

  ಪಡುವಾರಳ್ಳಿ ಜಾತ್ರೇನಾಗ...
  ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
  ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ
  ಮಂಡಿಗಂಟ ಲಂಗ ಎತ್ಕೊಂಡ್ ತಳುಕು ಬಳುಕ ಸೊಂಟ ಬಿಟ್ಕೊಂಡು
  ಕುಲುಕಿ ಕುಲುಕಿ ನಡೀತಾಳೆ ಏನ್ ವಯ್ಯಾರ
  ತೋಟಕ್ಕೊಂದು ಮಿಸ್ಸಿನ ಮನೆ, ಆಟಕ್ಕೊಂದು ಬೆಲ್ಲದ ಮನೆ,
  ಊಟಕ್ಕಿಟ್ಕೋ ಒಂದೇ ಮನೆ ಊಟದ ರಾಮಣ್ಣ
  ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ
  ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ...

  English summary
  A lyrics from Kannada film Prem Adda, "Melkote Hudgi Obbalu Paduvara Halli Jatrenaga inuki Inuki Nodthala en Singara… Mandi tanaka langa etkondu…" disgraced to the community and objectionable words are found against Lord Krishna says the religious people of Melkote. The song written by Malavalli Saikrishna and music by V Harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X