For Quick Alerts
  ALLOW NOTIFICATIONS  
  For Daily Alerts

  'ನಟಿಯ ಅಂಗಾಂಗ ತೋರಿಸೋ ಚಪಲಕ್ಕೆ ಹಳೆ ಹಾಡುಗಳ ಹಾಳುಮಾಡದಿರಿ'

  By ಫಿಲ್ಮಿಬೀಟ್ ಡೆಸ್ಕ್
  |

  ರೀಮಿಕ್ಸ್‌ ಸರಿಯೋ ತಪ್ಪೊ ಚರ್ಚೆ ಹೊಸದೇನಲ್ಲ. ಸ್ವಂತದ ಸುಂದರ ಹಾಡು ಕಟ್ಟಲು ಬಾರದವರು ರೀಮಿಕ್ಸ್ ಮಾಡಿ ಕ್ಲಾಸಿಕ್ ಹಾಡುಗಳ ಅಂದಗೆಡಿಸುತ್ತಾರೆ ಎಂಬ ವಾದ ತುಸು ಹಳೆಯ ಸಂಗೀತ ಪ್ರೇಮಿಗಳು ಮಾಡುತ್ತಲೇ ಬಂದಿದ್ದಾರೆ.

  ಅದೇನೇ ಇರಲಿ, ಈಗ ಕನ್ನಡದಲ್ಲಿ ಹೊಸದೊಂದು ರೀಮಿಕ್ಸ್ ಹಾಡು ಬಂದಿದೆ. 1963 ರಲ್ಲಿ ಬಿಡುಗಡೆ ಆದ ಡಾ ರಾಜ್‌ಕುಮಾರ್, ಲೀಲಾವತಿ, ಉದಯ್ ಕುಮಾರ್ ನಟನೆಯ 'ವೀರ ಕೇಸರಿ' ಸಿನಿಮಾದ ಎವರ್‌ಗ್ರೀನ್ ಹಾಡು 'ಮೆಲ್ಲುಸಿರೆ ಸವಿಗಾನ'. ಈ ಹಾಡನ್ನು ಕನ್ನಡದ ಹೊಸ ಸಿನಿಮಾ 'ಸ್ಪೂಕಿ ಕಾಲೇಜ್‌'ನಲ್ಲಿ ರೀಮಿಕ್ಸ್ ಮಾಡಿ ಬಳಸಲಾಗಿದೆ.

  'ಸ್ಪೂಕಿ ಕಾಲೇಜ್' ಸಿನಿಮಾದಲ್ಲಿ ಐಟಂ ಸಾಂಗ್ ಮಾದರಿಯಲ್ಲಿ ಈ ಹಳೆಯ ಕ್ಲಾಸಿಕ್ ಯುಗಳ ಗೀತೆಯನ್ನು ಬಳಸಲಾಗಿದೆ. ಹಾಡಿಗೆ ಮಾದಕವಾಗಿ ಕುಣಿದಿದ್ದಾರೆ ನಟಿ ರೀಷ್ಮಾ. ಹಾಡನ್ನು ಯಥಾವತ್ತಾಗಿ ಬಳಸಲಾಗಿದೆಯಾದರೂ, 'ವೀರ ಕೇಸರಿ' ಸಿನಿಮಾದಲ್ಲಿ ಪ್ರೇಮಿಗಳ ನಡುವಿನ ಸಲ್ಲಾಪವಾಗಿದ್ದ 'ಮೆಲ್ಲುಸಿರೆ ಸವಿಗಾನ' ಹಾಡು 'ಸ್ಪೂಕಿ ಕಾಲೇಜ್'ನಲ್ಲಿ ಉನ್ಮಾದ ಹೆಚ್ಚಿಸಲು, ನಟಿಯ ಅಂಗ ಪ್ರದರ್ಶಿಸಲು ಬಳಕೆಯಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

  ಪದಗಳನ್ನು ತಪ್ಪಾಗಿ ಹಾಡಲಾಗಿದೆ!

  ಪದಗಳನ್ನು ತಪ್ಪಾಗಿ ಹಾಡಲಾಗಿದೆ!

  ಈ ರೀಮಿಕ್ಸ್ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮೂಲ ಹಾಡಿನ ರಾಗವನ್ನೇ ಉಳಿಸಿಕೊಂಡಿದ್ದಾರೆ. ಸಂಗೀತವನ್ನು ತುಸುವಷ್ಟೆ ಬದಲಾಯಿಸಿದ್ದಾರೆ. ಆದರೆ ಹಾಡುವಾಗ ತುಸು ಯಡವಟ್ಟುಗಳಾಗಿವೆ. ಮೂಲ ಹಾಡಿನಲ್ಲಿ ಇದ್ದ ಕೆಲವು ಪದಗಳನ್ನು ತಪ್ಪಾಗಿ ಉಚ್ಛರಿಸಿರುವುದು ಅಥವಾ ತಪ್ಪಾಗಿ ಅರ್ಥ ಮಾಡಿಕೊಂಡು ಹಾಡಿದಂತಿದೆ. 'ಮನದಾಚೆ ದೂಡಿದ ಬಯಕೆ' ಎಂಬುದನ್ನು 'ಮನದಾಸೆ ದೂಡಿದ ಬಯಕೆ' ಎಂದು ಹಾಡಲಾಗಿದೆ. 'ಎದೆ ಝೆಲ್ಲೆನೆ ಹೂವಿನ ಬಾಣ' ಎಂಬುದು 'ಎದೆ ಝಲ್ಲನೆ ಹೂವಿನ ಬಾಣ' ಎಂದು ಹಾಡಲಾಗಿದೆ.

  ಐಟಂ ಹಾಡಿನ ಮಾದರಿಯಲ್ಲಿ ಚಿತ್ರೀಕರಣ

  ಐಟಂ ಹಾಡಿನ ಮಾದರಿಯಲ್ಲಿ ಚಿತ್ರೀಕರಣ

  ಪಕ್ಕಾ ಐಟಂ ಹಾಡಿನ ಮಾದರಿಯಲ್ಲಿಯೇ ಹಾಡಿನ ಚಿತ್ರಿಕರಣ ಮಾಡಲಾಗಿದೆ. ಮೊದಲಿಗೆ ಯುವತಿಯ ಸೊಂಟ, ಎದೆ, ನಿತಂಬ, ಕಣ್ಣುಗಳ ದರ್ಶನ ಮಾಡಿಸಿ ಹಾಡು ಪ್ರಾರಂಭಿಸಲಾಗಿದೆ. ಹಾಡಿನ ಪೂರ ನಟಿಯು ಮಾದಕ ಲುಕ್‌ಗಳನ್ನು ನೀಡುತ್ತಾ, ನೋಡುಗರಲ್ಲಿ ಉನ್ಮಾದ ಭಾವ ಉಕ್ಕುವಂತೆ ಭಾವ ಭಂಗಿಗಳ ಪ್ರದರ್ಶನ ಮಾಡಲಾಗಿದೆ. ಮೂಲ ಹಾಡಿನ ಅಂತ್ಯದಲ್ಲಿ 'ಚಿರನೂತನ, ರೋಮಾಂಚನ ದಾಂಪತ್ಯದನುಸಂಧಾನ' ಎಂಬ ಸಾಲಿದೆ ಅದನ್ನಾದರೂ ಗಮನಿಸಿ ಬೇರೆ ಸನ್ನಿವೇಶದಲ್ಲಾದರೂ ಹಾಡನ್ನು ಬಳಸಬಹುದಿತ್ತೇನೋ ಎನ್ನಿಸದೇ ಇರದು. ನಟಿಯ ಅಂಗಾಂಗ ತೋರಿಸುವ ಚಪಲಕ್ಕೆ ಹಳೆಯ ಕ್ಲಾಸಿಕ್ ಹಾಡನ್ನು ಬಳಸ ಬೇಕಾದ ಅನಿವಾರ್ಯತೆ ಏನಿತ್ತು ಎಂಬುದು ಪ್ರಶ್ನೆ. ಹೊಸ ಹಾಡೊಂದನ್ನು ಮಾಡಿ ಇದೇ ಮಾದರಿಯ ಕೊರಿಯೋಗ್ರಫಿ ಮಾಡಿದ್ದಿದ್ದರೆ ಪ್ರಶ್ನೆಯೇ ಉದ್ಭವಿಸುತ್ತಿರಲಲ್ಲ.

  ಕೆಟ್ಟದಾಗಿ ಚಿತ್ರೀಕರಿಸಿಲ್ಲ ಎಂದ ಚಿತ್ರತಂಡ

  ಕೆಟ್ಟದಾಗಿ ಚಿತ್ರೀಕರಿಸಿಲ್ಲ ಎಂದ ಚಿತ್ರತಂಡ

  ''ಹಾಡಿಗೆ ಅಪಮಾನ ಮಾಡದೆ, ಕೆಟ್ಟದಾಗಿ ಚಿತ್ರೀಕರಿಸದೆ, ಮುದ್ದಾಗಿ ಚಿತ್ರೀಕರಣ ಮಾಡಿದ್ದೇವೆ. ನಟಿ ರೀಷ್ಮಾ ತುಂಬಾ ಚೆನ್ನಾಡಿ ಡ್ಯಾನ್ಸ್ ಮಾಡಿದ್ದಾರೆ, ಮುದ್ದಾಗಿ ಕಾಣುತ್ತಾರೆ'' ಎಂದು 'ಸ್ಪೂಕಿ ಕಾಲೇಜ್' ಸಿನಿಮಾ ತಂಡ ಹೇಳಿದೆಯಾದರೂ ಹಾಡು ನೋಡಿದರೆ ಇದು ಸತ್ಯ ಎನಿಸುವುದಿಲ್ಲ. ಮೂಲ ಸಿನಿಮಾದಲ್ಲಿ ಯುಗಳ ಗೀತೆಯಾಗಿ ಬಳಸಿದ ಹಾಡನ್ನು ಐಟಂ ಹಾಡನ್ನಾಗಿ ಪರಿವರ್ತಿಸುವ ಅವಶ್ಯಕತೆ ಏನಿತ್ತೆಂಬುದು ಪ್ರಶ್ನೆ. ಹಳೆಯ ಕ್ಲಾಸಿಕ್ ಬಿಸ್ಕೋ ಹಾಡುಗಳನ್ನು ರೀಮಿಕ್ಸ್ ಮಾಡಿ ಕೆಲವು ಸಿನಿಮಾಗಳಲ್ಲಿ ಬಳಸಲಾಗಿದೆ. ಆ ಕಾಲದಲ್ಲಿಯೂ ಐಟಂ ನಂಬರ್‌ಗಳೇ ಆಗಿದ್ದ ಆ ಹಾಡುಗಳನ್ನು ರೀಮಿಕ್ಸ್ ಮಾಡಿದಾಗಲೂ ಹಾಗೆಯೇ ಬಳಸಿರುವುದರಿಂದ ಯಾರೂ ಪ್ರಶ್ನೆ ಮಾಡಿಲ್ಲ. ಆದರೆ ಇಲ್ಲಿ ಹಾಗಾಗಿಲ್ಲ. ಅಂದಹಾಗೆ 'ಸ್ಪೂಕಿ ಕಾಲೇಜ್' ಸಿನಿಮಾ ಹಾರರ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ 'ದಿಯಾ' ಖ್ಯಾತಿಯ ಖುಷಿ ನಾಯಕಿ, ವಿವೇಕ್ ಶರ್ಮಾ ನಾಯಕ. ನಿರ್ದೇಶನ ಮಾಡಿರುವುದು ಭರತ್ ಜಿ. ನಿರ್ಮಾಣ ಎಚ್‌.ಕೆ.ಪ್ರಕಾಶ್. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಸಂಕಲನ ಶ್ರೀಕಾಂತ್ ಅವರದ್ದು.

  ರೀಮಿಕ್ಸ್ ಹಾಡು ಬಿಡುಗಡೆ ಆದಾಗಲೆಲ್ಲ ಚರ್ಚೆ

  ರೀಮಿಕ್ಸ್ ಹಾಡು ಬಿಡುಗಡೆ ಆದಾಗಲೆಲ್ಲ ಚರ್ಚೆ

  ರೀಮಿಕ್ಸ್ ಹಾಗೂ ಒರಿಜಿನಲ್ ಹಾಡಿನ ಚರ್ಚೆ ಮುಗಿಯದ್ದು. ಕೆಲವು ದಿನಗಳ ಹಿಂದೆ 'ಕಾಂಟಾ ಲಗಾ' ಹಿಂದಿ ಹಾಡನ್ನು ನೇಹಾ ಕಕ್ಕರ್ ಹಾಡಿದ್ದರು. ಆಗಲೂ ಮೂಲ ಹಾಡಿನ ಅಂದ ಹಾಳು ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. 'ಮೆಲ್ಲುಸಿರೆ ಸವಿಗಾನ' ರೀಮಿಕ್ಸ್ ಹಾಡು ಬಿಡುಗಡೆ ಆಗಿ ಇನ್ನೂ 24 ಗಂಟೆಯೂ ಕಳೆದಿಲ್ಲ ಪ್ರಸ್ತುತವಂತೂ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

  English summary
  Dr Rajkumar Leelavathi's Veera Kesari movie's Mellusire Savigana song's remix released on YouTube. Remix song used in Spooky College Kannada movie.
  Tuesday, November 15, 2022, 14:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X