»   » ರಾಕಿಂಗ್ ಸ್ಟಾರ್ 'ರಾಮಾಚಾರಿ' ಮತ್ತೊಂದು ದಾಖಲೆ

ರಾಕಿಂಗ್ ಸ್ಟಾರ್ 'ರಾಮಾಚಾರಿ' ಮತ್ತೊಂದು ದಾಖಲೆ

Posted By: ಉದಯರವಿ
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಬಾಕ್ಸ್ ಆಫೀಸಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಮಾಚಾರ. ಇದೀಗ ಮತ್ತೊಂದು ದಾಖಲೆಗೂ ಈ ಚಿತ್ರ ಪಾತ್ರವಾಗಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಆಡಿಯೋ ಮಾರುಕಟ್ಟೆ ಆಶಾದಾಯಕವಾಗಿಯೇನು ಇಲ್ಲ. ಆದರೆ 'ಮಿ ಅಂಡ್ ಮಿ ರಾಮಾಚಾರಿ' ಚಿತ್ರದ ಹಾಡುಗಳು ಆಡಿಯೋ ಮಾರುಕಟ್ಟೆಗೆ ಹೊಸ ಬಲ ತಂದುಕೊಟ್ಟಿವೆ. [ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರ ವಿಮರ್ಶೆ]

mr-and-mrs-ramachari-songs-super-hit

ಯಶ್ ಅವರ ವೃತ್ತಿ ಬದುಕಿನಲ್ಲಿ ಈ ಚಿತ್ರ ಹೊಸ ವಿಕ್ರಮವನ್ನೇ ಮೆರೆದಿದೆ ಎಂದರೂ ತಪ್ಪಿಲ್ಲ. ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ತೆರೆಯ ಮೇಲೆ ಮತ್ತೆ ಮೋಡಿ ಮಾಡಿದೆ. ಚಿತ್ರದ ಹಾಡುಗಳಿಗಂತೂ ವಿವಿಧ ವೆಬ್ ಸೈಟ್ ಗಳ ಮೂಲಕ ಅತ್ಯಧಿಕ ಸಂಖ್ಯೆಯಲ್ಲಿ ಡೌನ್ ಲೋಡ್ ಆಗುತ್ತಿವೆ.

ಆಡಿಯೋ ಸಿಡಿಗಳು ಸುಮಾರು 15,000ದಷ್ಟು ಮಾರಾಟವಾಗಿದ್ದು, ಮೊಬೈಲ್ ಆಪ್ ಗಳ ಮೂಲಕ ಹಾಗೂ ವಿವಿಧ ಜಾಲತಾಣಗಳಿಂದ 3 ಲಕ್ಷಕ್ಕೂ ಅಧಿಕ ಡಿಜಿಟಲ್ ಡೌನ್ ಲೋಡ್ ಆಗಿರುವುದು ವಿಶೇಷ. ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ಈ ಚಿತ್ರಕ್ಕೆ ಸಂತೋಷ್‌ ಆನಂದ್‌ರಾಮ್‌ ನಿರ್ದೇ ಶಕರು. ಇವರಿಗಿದು ಮೊದಲ ಚಿತ್ರ.

ವಿಶೇಷವೆಂದರೆ ಈ ಚಿತ್ರದಲ್ಲಿ ಯಶ್‌ ಹಾಡಿದ್ದಾರೆ. ಇದು ಯಶ್‌ ಹಾಡಿರುವ ಮೊದಲ ಚಿತ್ರ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಇದ್ದು ಚಿತ್ರ ಬಿಡುಗಡೆಯಾದ ಮೊದಲ ಆರು ದಿನಗಳಲ್ಲಿ ಚಿತ್ರದ ಒಟ್ಟು ಗಳಿಕೆ ರು.14 ಕೋಟಿ. ರಾಜ್ಯದ ಒಟ್ಟು 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. (ಏಜೆನ್ಸೀಸ್)

English summary
Rocking Star Yash's 'Mr & Mrs Ramachari' audio is creating records. V Harikrishna music album had five songs are in the top of download charts in several online and mobile phone app charts, says sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada