'ಮಫ್ತಿ'ಯ ಭೈರತಿ ರಣಗಲ್ಲು ವಿಡಿಯೋ ಹಾಡು ರಿಲೀಸ್ ಆಯ್ತು
ಶ್ರೀ ಮುರಳಿ ಮತ್ತು ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಸಿನಿಮಾ ಈಗಾಗಲೇ ಹಿಟ್ ಆಗಿದೆ. ಇದೇ ಸಂತಸದಲ್ಲಿ ಚಿತ್ರತಂಡ ಸಿನಿಮಾದ ಒಂದು ಹಾಡನ್ನು ರಿಲೀಸ್ ಮಾಡಿದೆ. 'ಮಫ್ತಿ' ಚಿತ್ರದಲ್ಲಿ ಎರಡೇ ಎರಡು ಹಾಡು ಇದ್ದು, ಈ ಹಿಂದೆ ಶ್ರೀ ಮುರಳಿ ಹುಟ್ಟುಹಬ್ಬಕ್ಕೆ ಒಂದು ಹಾಡಿನ ವಿಡಿಯೋ ಹೊರಬಂದಿತ್ತು. ಈಗ ಶಿವಣ್ಣನ್ನ ಹಾಡನ್ನು ರಿಲೀಸ್ ಮಾಡಲಾಗಿದೆ.
ಭೈರತಿ ರಣಗಲ್ಲು ಪಾತ್ರದ ಈ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ''ರಾಕ್ಷಸನೂ ನೀನೇನಾ...'' ಎಂಬ ಹಾಡು ಸಿನಿಮಾ ನೋಡಿದ ಪ್ರತಿಯೊಬ್ಬರ ಮನ ಗೆದ್ದಿತ್ತು. ರವಿಬಸೂರ್ ಸಂಗೀತ ನೀಡಿ ಅವರೇ ಈ ಹಾಡನ್ನು ಹಾಡಿದ್ದರು. ಸರ್ವೇಶ್ ಎಂಬುವವರು ಈ ಹಾಡನ್ನು ಬರೆದಿದ್ದಾರೆ.

ಈ ಹಿಂದೆ ಚಿತ್ರದ ನಿರ್ದೇಶಕ ನರ್ತನ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಂದರ್ಶನ ನೀಡಿದ ವೇಳೆ ಈ ಹಾಡಿನ ಬಗ್ಗೆ ಮಾತನಾಡಿದ್ದರು. ''ಈ ಹಾಡನ್ನು ಮೊದಲು 'ರಾಕ್ಷಸನು ನೀನೇನಾ... ರಕ್ಷಕನು ನೀನೇನಾ...' ಎನ್ನುವ ಸಾಲು ಇಟ್ಟುಕೊಂಡು ಶುರು ಮಾಡಿದ್ವಿ. ಬಳಿಕ ಒಂದೊಂದೆ ತೂಕದ ಪದ ಆಯ್ಕೆ ಮಾಡಿ ಒಂದೂವರೆ ತಿಂಗಳು ಈ ಹಾಡನ್ನು ಬರೆಸಿದೆ. ಸಿನಿಮಾದ ಅರ್ಧಭಾಗದಲ್ಲಿಯೇ ಆ ಪಾತ್ರದ ಕೆಟ್ಟ ಕೆಲಸ ಮತ್ತು ಒಳ್ಳೆಯ ತನ ಎರಡನ್ನು ತೋರಿಸಬೇಕಾಗಿತ್ತು. ಅದಕ್ಕೆ ಪ್ಲಾನ್ ಮಾಡಿ ಈ ಹಾಡು ಮಾಡಿದ್ವಿ.'' ಎಂದು ಹೇಳಿದ್ದರು.


Click it and Unblock the Notifications











