»   » ಶ್ರೇಯಾ ಘೋಷಾಲ್ ಕಂಠದ 'ಮುಗುಳು ನಗೆ' ಹಾಡು ಕೇಳಿ

ಶ್ರೇಯಾ ಘೋಷಾಲ್ ಕಂಠದ 'ಮುಗುಳು ನಗೆ' ಹಾಡು ಕೇಳಿ

Posted By:
Subscribe to Filmibeat Kannada

'ಮುಗುಳು ನಗೆ' ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದೆ. ಈ ಹಾಡನ್ನು ನಿನ್ನೆ ಮೈಸೂರಿನಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ. ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಈ ಹಾಡು ಸಿನಿ ಪ್ರಿಯರ ಮನ ಗೆದ್ದಿದೆ.

'ನಿನ್ನ ಸ್ನೇಹದಿಂದ..' ಎಂಬ ಹಾಡು ಸಖತ್ ಮೆಲೋಡಿ ಆಗಿದೆ. ಸಿಂಪಲ್ ಪದಗಳನ್ನು ಬಳಸಿ ಸೊಗಸಾದ ಹಾಡನ್ನು ಭಟ್ಟರು ಬರೆದಿದ್ದಾರೆ. ಹರಿಕೃಷ್ಣ ವಿಭಿನ್ನವಾದ ಸಂಗೀತ ಹಾಡಿನಲ್ಲಿ ಗಮನ ಸೆಳೆಯುತ್ತದೆ. ಇನ್ನೂ ಈ ಹಾಡು ರಿಲೀಸ್ ಆದ 12 ಗಂಟೆಯ ಒಳಗೆ ಯೂ ಟ್ಯೂಬ್ ನಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ.

'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

'Mugulu Nage' Kannada Movie 3rd Song Released.

ಶ್ರೇಯಾ ಘೋಷಾಲ್ ಹಾಡಿರುವ ಈ ಹಾಡು ಹುಡುಗಿಯರಿಗೆ ತುಂಬ ಹತ್ತಿರವಾಗುವಂತಿದೆ. ಹಾಡಿನಲ್ಲಿ ಗಣೇಶ್ ಮತ್ತು ನಟಿ ಆಶಿಕಾ ಕಾಣಿಸಿಕೊಂಡಿದ್ದಾರೆ. ಇಬ್ಬರ ಲುಕ್ ಕೂಡ ತುಂಬ ಮುದ್ದಾಗಿದೆ. ಸದ್ಯ 'ಮುಗುಳು ನಗೆ' ಚಿತ್ರದ ಸೌಂಡ್ ಹಾಡುಗಳ ಮೂಲಕ ದಿನೇ ದಿನೇ ಜೋರಾಗುತ್ತಿದೆ.

ಮನಸ್ಸನ್ನ ತಲ್ಲಣಗೊಳಿಸುತ್ತಿದೆ 'ಮುಗುಳುನಗೆ'ಯ 'ರೂಪಸಿ' ಹಾಡು

'ಮುಗುಳು ನಗೆ' ಚಿತ್ರದ ಈ ಹಾಡು ಕೇಳುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
'Mugulu Nage' Kannada Movie 3rd Song Released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada