»   » ಶೀರ್ಷಿಕೆ ಗೀತೆಗೆ ಇದೀಗ ಬಂತು 'ಮುಗುಳುನಗು'ವ ಯೋಗ.!

ಶೀರ್ಷಿಕೆ ಗೀತೆಗೆ ಇದೀಗ ಬಂತು 'ಮುಗುಳುನಗು'ವ ಯೋಗ.!

Posted By:
Subscribe to Filmibeat Kannada

'ಮುಗುಳುನಗೆ' ಸಿನಿಮಾದ ಆಡಿಯೋ ಬಿಡುಗಡೆ ಆದಾಗ ಸಂಗೀತ ಪ್ರಿಯರಿಗೆ ಅತ್ಯಂತ ಖುಷಿ ಕೊಟ್ಟಿದ್ದು ಸೋನು ನಿಗಂ ಹಾಡಿದ 'ಮುಗುಳುನಗೆ... ನೀ ಹೇಳು...' ಹಾಡು.

ಅತೀವ ಭಾವುಕತೆ ತುಂಬಿರುವ ಈ ಹಾಡು ತೆರೆ ಮೇಲೆ ಹೇಗೆ ಮೂಡಿ ಬಂದಿರಬಹುದು ಎಂಬ ನಿರೀಕ್ಷೆ ಹಾಗೂ ಕುತೂಹಲದೊಂದಿಗೆ ಥಿಯೇಟರ್ ಒಳಗೆ ಹೊಕ್ಕ ಪ್ರೇಕ್ಷಕರಿಗೆ ಕಾಡಿದ್ದು ದೊಡ್ಡ ನಿರಾಸೆ. ಯಾಕಂದ್ರೆ, 'ಮುಗುಳುನಗೆ' ಸಿನಿಮಾದಲ್ಲಿ ಟೈಟಲ್ ಸಾಂಗ್ ಸದ್ಬಳಕೆ ಆಗಿರ್ಲಿಲ್ಲ. ಹಾಡಿನ ಒಂದು ಬಿಟ್ ಮಾತ್ರ ಬಳಸಿಕೊಳ್ಳಲಾಗಿತ್ತು. ಇದರಿಂದ ಸಂಗೀತ ಪ್ರಿಯರು ನಿರಾಸೆಗೊಂಡಿದ್ದು ಮಾತ್ರ ಸುಳ್ಳಲ್ಲ.

'Mugulu Nage' title song which was edited before has been added now

ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'

ಪ್ರೇಕ್ಷಕರ ಅಭಿರುಚಿ ಹಾಗೂ ಪ್ರತಿಕ್ರಿಯೆ 'ಮುಗುಳುನಗೆ' ಚಿತ್ರತಂಡದ ಕಿವಿಗೆ ಬಿದ್ಮೇಲೆ ಇದೀಗ ರಿಪೇರಿ ಕೆಲಸ ನಡೆದಿದೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ಚಿತ್ರದಲ್ಲಿ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಶೀರ್ಷಿಕೆ ಗೀತೆಯನ್ನ ಸೇರಿಸಲಾಗಿದೆ.

'ಮುಗುಳುನಗೆ' ಚಿತ್ರದಲ್ಲಿ ಮೈನಸ್ ಆಗಿದ್ದ 'ಮುಗುಳುನಗೆ... ನೀ ಹೇಳು...' ಹಾಡನ್ನ ನೀವೀಗ ಚಿತ್ರಮಂದಿರದಲ್ಲಿ ನೋಡಬಹುದು.

ಮ್ಯೂಸಿಕಲ್ ಲವ್ ಸ್ಟೋರಿ ಇರುವ 'ಮುಗುಳುನಗೆ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದ್ದರೂ, ಕಲೆಕ್ಷನ್ ನಲ್ಲಿ ಮಾತ್ರ ಸಿನಿಮಾ ಹಿಂದೆ ಬಿದ್ದಿಲ್ಲ. ಹತ್ತು ವರ್ಷಗಳ ನಂತರ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗಣೇಶ್ ಒಂದಾಗಿರುವ 'ಮುಗುಳುನಗೆ' ಗಾಂಧಿನಗರದಲ್ಲಿ ಮೋಡಿ ಮಾಡುತ್ತಿದೆ.

English summary
Those who missed 'Mugulu Nage' title song in the movie, can watch it in the Big screens now. 'Mugulu Nage' title song which was edited before has been added in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada