»   » ಗರ್ಲ್ ಫ್ರೆಂಡ್ ವರ್ಷಾ ಗೌಡ ಕೈಹಿಡಿದ ರಿಕಿ ಕೇಜ್

ಗರ್ಲ್ ಫ್ರೆಂಡ್ ವರ್ಷಾ ಗೌಡ ಕೈಹಿಡಿದ ರಿಕಿ ಕೇಜ್

By: ಉದಯರವಿ
Subscribe to Filmibeat Kannada

ಅಂತಾರಾಷ್ಟ್ರೀಯ ಖ್ಯಾತಿಯ ಯುವ ಸಂಗೀತ ನಿರ್ದೇಶಕ ರಿಕಿ ಕೇಜ್ ಮದುವೆ ಸದ್ದುಗದ್ದಲವಿಲ್ಲದಂತೆ ನಡೆದುಹೋಗಿದೆ. ಕನ್ನಡದ ರಮೇಶ್ ಅರವಿಂದ್ ಅವರ ಆಕ್ಸಿಡೆಂಟ್ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ರಿಕಿ ಕೇಜ್ ಅವರು ತನ್ನ ಬಹುಕಾಲದ ಗರ್ಲ್ ಫ್ರೆಂಡ್ ವರ್ಷಾ ಗೌಡ ಅವರ ಕೈಹಿಡಿದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ನಿರ್ದೇಶಕ, ಸುಗಮ ಸಂಗೀತ ಪರಿಷತ್ತಿನ ರಾಜ್ಯಾಧ್ಯಕ್ಷ, ಗಾಯಕ ವೈ.ಕೆ. ಮುದ್ದುಕೃಷ್ಣ ಅವರ ಮುದ್ದಿನ ಮಗಳು ವರ್ಷಾ ಗೌಡ. 'ಆಕ್ಸಿಡೆಂಟ್' ಚಿತ್ರದ ಬಳಿಕ ರಿಕಿ ಕೇಜ್ ಹಲವಾರು ಟಿವಿ ಧಾರಾವಾಹಿಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕೇವಲ ಚಲನಚಿತ್ರ ಕ್ಷೇತ್ರದಲ್ಲಷ್ಟೇ ಅಲ್ಲದೆ ಜಾಹೀರಾತು ಹಾಗೂ ಜಿಂಗಲ್ಸ್ ನಲ್ಲೂ ತಮ್ಮ ಪ್ರತಿಭೆಯನ್ನು ತೋರಿ ಕಾರ್ಪೊರೇಟ್ ವಲಯದಲ್ಲೂ ದೊಡ್ಡ ಹೆಸರು ಮಾಡಿದಂತಹ ಸಂಗೀತ ನಿರ್ದೇಶಕ. [ರಾಜೇಶ್ವರಿ ಜೊತೆ ಗೀತಸಾಹಿತಿ ಕವಿರಾಜ್ ಸಪ್ತಪದಿ]

ಇನ್ನು ವರ್ಷಾ ಗೌಡ ಅವರು ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ ಮಹಾಪರ್ವ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಇದಕ್ಕೂ ಮುನ್ನ ಅವರು ಜೀ ಕನ್ನಡ ವಾಹಿನಿಯಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದಾರೆ. ಕೆಲವರ್ಷಗಳಿಂದ ರಿಕಿ ಹಾಗೂ ವರ್ಷಾ ಪ್ರೀತಿಸಿಕೊಳ್ಳುತ್ತಿದ್ದರು. ಹಾಗಾಗಿ ಇವರಿಬ್ಬರದ್ದೂ ಲವ್ ಮ್ಯಾರೇಜ್.

ವರ್ಷಾ ಗೌಡ ಜೊತೆಗೆ ರಿಕಿ ಕೇಜ್ ಮದುವೆ

ಇವರಿಬ್ಬರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟದ್ದನ್ನು ಬಹುಶಃ ಮೊದಲು ಬಹಿರಂಗಗೊಳಿಸಿದ್ದೇ ರಿಕಿ ಕೇಜ್. ತಮ್ಮ ಫೇಸ್ ಬುಕ್ ನಲ್ಲಿ ವರ್ಷಾ ಜೊತೆಗಿನ ಫೋಟೋ ಹಾಕುವ ಮೂಲಕ ಮದುವೆಗೆ ಅಡಿಯಿಟ್ಟದ್ದನ್ನು ಜಗಜ್ಜಾಹೀರುಗೊಳಿಸಿದರು.

ಫೇಸ್ ಬುಕ್ ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಜೋಡಿ

ಇವರಿಬ್ಬರೂ ಏನೂ ಕದ್ದುಮುಚ್ಚಿ ಲವ್ ಮಾಡುತ್ತಿರಲಿಲ್ಲ. ತಮ್ಮಿಬ್ಬರ ಫೋಟೋಗಳನ್ನು ಆಗಾಗ ಫೇಸ್ ಬುಕ್ ನಲ್ಲಿ ಹಾಕಿಕೊಂಡು ಸಂಭ್ರಮಿಸುತ್ತಿದ್ದರು.

ಯಾರೂ ಊಹಿಸಿರಲಿಲ್ಲ ಇವರ ಮದುವೆ

ಇಷ್ಟು ಬೇಗ ಇಬ್ಬರೂ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಹುಟ್ಟಿದ್ದು ಯುಎಸ್ಎಯ ನಾರ್ತ್ ಕರೋಲಿನಾ

ಭಾರತೀಯ ಮೂಲಕ ರಿಕಿ ಕೇಜ್ ಹುಟ್ಟಿದ್ದು ಯುಎಸ್ಎಯ ನಾರ್ತ್ ಕರೋಲಿನಾದಲ್ಲಿ. ಕೀಬೋರ್ಡ್ ಹಾಗೂ ಗಿಟಾರ್ ನಲ್ಲಿ ಹಿಡಿತ ಇರುವ ರಿಕಿ ಹಲವಾರು ಉತ್ಪನ್ನಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ರಿಕಿ ಓದಿದ್ದು ದಂತ ವೈದ್ಯಕೀಯ

ಇನ್ನೊಂದು ವಿಶೇಷ ಎಂದರೆ ರಿಕಿ ಓದಿದ್ದು ದಂತ ವೈದ್ಯಕೀಯ. ಆದರೆ ಎಂದೂ ಪ್ರಾಕ್ಟೀಸ್ ಮಾಡಲಿಲ್ಲ. ಅವರ ಗಮನವೆಲ್ಲಾ ಇದ್ದದ್ದು ಸಂಗೀತ ಕ್ಷೇತ್ರದ ಮೇಲೆ.

ದೇಶ ವಿದೇಶಗಳಲ್ಲಿ ರಿಕಿ ಕೇಜ್ ಆಲ್ಬಂಗೆ ಬಲು ಬೇಡಿಕೆ

ಫ್ರಾನ್ಸ್, ಪೋಲೆಂಡ್, ಚೀನಾ, ತೈವಾನ್, ಭಾರತ, ಇಸ್ರೇಲ್ ಹಾಗೂ ಜರ್ಮನಿ ದೇಶಗಳಲ್ಲಿ ಅವರ ಮ್ಯೂಸಿಕ್ ಆಲ್ಬಂಸ್ ಗೆ ಬಲು ಬೇಡಿಕೆ ಇದೆ.

ರಿಕಿ ಕೇಜ್ ಸಂಗೀತ ಸಂಯೋಜಿಸಿದ ಕನ್ನಡ ಚಿತ್ರಗಳು

ಕನ್ನಡದ ಆಕ್ಸಿಡೆಂಟ್, ವೆಂಕಟ ಇನ್ ಸಂಕಟ, ಕ್ರೇಜಿ ಕುಟುಂಬ ಹಾಗೂ ಒಂದು ರೂಪಾಯಲ್ಲಿ ಎರಡು ಪ್ರೀತಿ ಚಿತ್ರಗಳಿಗೆ ರಿಕಿ ಕೇಜ್ ಸಂಗೀತ ಸಂಯೋಜಿಸಿದ್ದಾರೆ.

English summary
Popular music composer Ricky Kej who made his debut as a music composer through Ramesh Aravind's 'Accident' has entered wed lock with Varsha Gowda, daughter of well known singer, drametist Y K Muddukrishna.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada