»   » ಪ್ರೀತಿಗೆ, ಅವರ ರೀತಿಗೆ - ಹಂಸಲೇಖಗೆ ಶುಭಾಶಯಗಳು

ಪ್ರೀತಿಗೆ, ಅವರ ರೀತಿಗೆ - ಹಂಸಲೇಖಗೆ ಶುಭಾಶಯಗಳು

Posted By:
Subscribe to Filmibeat Kannada

ತಮ್ಮ ವಿಶಿಷ್ಠ ಶೈಲಿಯ ಮ್ಯೂಸಿಕ್ ನಿಂದಲೇ ಸ್ಯಾಂಡಲ್ ವುಡ್ ನಲ್ಲಿ ಹೊಸ ಭಾಷ್ಯ ಬರೆದ ಟ್ರೆಂಡ್ ಸೆಟರ್, ಹಿಂದುಸ್ತಾನಿ ಮತ್ತು ಕರ್ನಾಟಿಕ್ ಸಂಗೀತಕ್ಕೆ ತನ್ನ ದೇಸಿ ಸೊಬಗನ್ನ ಬೆರಸಿ, ಪ್ರೇಕ್ಷಕರಿಗೆ ಮಸ್ತ್ ಮ್ಯೂಸಿಕ್ ನೀಡುತ್ತಿರುವ ಮೆಲೊಡಿ ಮಾಸ್ಟರ್ ಹಂಸಲೇಖ. ಇಂತಹ ಮ್ಯೂಸಿಕ್ ಮಾಂತ್ರಿಕನಿಗೆ ಇಂದು 64ನೇ ಹುಟ್ಟುಹಬ್ಬದ ಸಂಭ್ರಮ.

ಪ್ರೀತಿಗೆ, ಅದರ ರೀತಿಗೆ ಹೊಸ ವ್ಯಾಖ್ಯಾನ ಕೊಟ್ಟು ನಾದ ಬ್ರಹ್ಮ ಹಂಸಲೇಖ ಸಂಯೋಜಿಸಿರುವ ಹಾಡುಗಳು ಇಂದಿಗೂ ಮಧುರ...ಸುಮಧುರ. [ನಟರನ್ನು ಕನ್ನಡದ ಕಣ್ಮಣಿಯಾಗಿಸಿದ ಗೀತೆಗಳಿವು]

music-director-hamsalekha-celebrates-64th-birthday

ಇವರ 'ಪ್ರೇಮಲೋಕ' ಚಿತ್ರದ ಹಾಡುಗಳು ಈಗಲೂ ಪ್ರೀತ್ಸೋರ ಪಾಲಿನ ಸುಪ್ರಭಾತ, ರೋಮಿಯೋಗಳ ರಾಷ್ಟ್ರಗೀತೆ ಅಂದ್ರೆ ಅದು ಅತಿಶಯೋಕ್ತಿ ಅಲ್ಲ. ಅವರ ಸ್ವರ ಸಂಯೋಜನೆಯಲ್ಲಿನ ಗಮ್ಮತ್ತು ಅಂಥದ್ದು.

ಪ್ರೇಮಕಥೆ ಇಂದ ಹಿಡಿದು ಭಕ್ತಿಪ್ರಧಾನ ಸಿನಿಮಾ ವರೆಗೆ, ಆಕ್ಷನ್ ಸಿನಿಮಾದಿಂದ ಹಿಡಿದು ಕಲಾತ್ಮಕ ಚಿತ್ರದ ವರೆಗೆ ಒಂದಕ್ಕಿಂತ ಒಂದು ವೈವಿಧ್ಯಮಯವಾದ ಸಂಗೀತ ಸಂಯೋಜನೆ ಹಂಸಲೇಖ ರದ್ದು. ['ಹಂಸಲೇಖ'ನಿಯಲ್ಲಿ ಮೂಡಿದ ಒಂದು ಪ್ರೇಮಗೀತೆ]

300ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಹಂಸಲೇಖ ಅವರಿಗೆ ನೆಚ್ಚಿನ ಗೀತೆ ಯಾವುದು? ಈ ಪ್ರಶ್ನೆಗೆ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಉತ್ತರ ಇದೆ. ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ನೆಚ್ಚಿನ ಗೀತೆ ಇಲ್ಲಿದೆ...ನೋಡಿ...ಕೇಳಿ...ಆನಂದಿಸಿ....ಹ್ಹಾ...ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡೋದನ್ನ ಮರೀಬೇಡಿ...


English summary
Kannada Music Director Hamsalekha is celebrating his 64th birthday today. On this occasion, here is the most favorite song of Music Master. Watch the song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada