For Quick Alerts
  ALLOW NOTIFICATIONS  
  For Daily Alerts

  ಯಾವನಿಗೊತ್ತು ಎಂದು ಸಿದ್ದುಜೀ ಹಾಡಿದ್ದು ಹೀಗೆ

  By * ವಿಜಯರಾಜ್ ಕನ್ನಂತ
  |
  ರಾಜ್ಯದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆ ಡ್ಯಾನ್ಸರ್ ಆದರೂ ನಟನೆ ಎಂದರೆ ಮಾರು ದೂರ ಜಿಗಿಯುತ್ತಾರೆ. ಜನತಾ ಪರಿವಾರದ ನಾಯಕರಾಗಿ ಬೆಳೆದ ಸಿದ್ದೂಜೀ ಈಗ ಕಾಂಗ್ರೆಸ್ ಸರ್ಕಾರವನ್ನು ಮುನ್ನಡೆಸುವ ಜನಾದೇಶ ಪಡೆದಿದ್ದಾರೆ.

  ಈ ನಡುವೆ ಹಳೆ ದೋಸ್ತಿ ಕಮ್ ದುಷ್ಮನಿ ಇರುವ ದೇವೇಗೌಡ್ರ ನೆನೆದಾಗ ಪರಮಾತ್ಮ ಚಿತ್ರದ ಹಾಡು ಯಾಕೋ ಅವರಿಗೆ ನೆನಪಿಗೆ ಬಂದಿದೆಯಂತೆ...ಒಂದು ಕಾಲ್ಪಾನಿಕ ರಾಜಕೀಯ ವಿಡಂಬನಾ ಗೀತ ಸಾಹಿತ್ಯ ಇಲ್ಲಿದೆ.. ಓದಿ ಆನಂದಿಸಿ

  ಜೆಡಿಎಸ್ನಾಗೆ ಇದ್ದಿದ್ರೆ ನಾನು... ಗೌಡರ ಮರ್ಜೀಲೇ ಇರಬೇಕಿತ್ತು!! ನನ್ನ ಕುರ್ಚಿಗೂ ನನ್ನ ಕುರ್ಚಿಗೂ... ಫಿಟ್ಟಿಂಗ್ ಇಡಬೌದಾ... ಯಾವನಿಗ್ ಗೊತ್ತು... ಯಾವನಿಗ್ ಗೊತ್ತು

  ಹಿಂದೆ ಯಾರಾದ್ರೂ... ಬತ್ತಿ ಇಡಬೌದಾ... ಯಾವನಿಗ್ ಗೊತ್ತು... ಯಾವನಿಗ್ ಗೊತ್ತು

  ಕಾಂಗೈ ಕೈ ಮೇಲಾಗಿ ಸೀಎಮ್ಮು ಕುರ್ಚಿಯೇರಲು ಸಿದ್ದರಾದ ಸಿದ್ರಾಮಣ್ಣ 'ಪರಮಾತ್ಮ'ದ ಹಾಡು ಹಾಡುತ್ತಿದ್ದಾರೆ 'ಯಾವನಿಗ್ ಗೊತ್ತು' ಧಾಟಿಯಲ್ಲಿ

  ಶ್ಯಾನೆ ಕುಷ್ಯಾತುಸ್ಸಾ... ಇದೇಮೊದಲಾಸರ್ತಿ... ಲಾಭಲಾಭವೋ
  ಕೆಪಿಸಿಸಿನಾ... ಹೈಕಮಾಂಡೇನಾ
  ಗಾಡು ಬ್ಲೆಸ್ಸೇನಾ... ಆರಾಮಾಗ್ ಸಿಕ್ತು

  ನಾನು ಆಗ್ಬೋದು... ಅಂತ ಡೌಟೊಂದು
  ಮನ್ಸಲ್ಲಿ ಇತ್ತು... ಮನ್ಸಲ್ಲಿ ಇತ್ತು
  ಯಾರ್ನೇ ಕೇಳಿದ್ರೂ... ತುಂಬಾ ಫೈಟಂದ್ರು
  ಈಸೀಯಾಗ್ ಸಿಕ್ತು... ಈಸೀಯಾಗ್ ಸಿಕ್ತು

  ಸೀಎಮ್ಎಂಬ ಹಾಲಿ... ಪೀಠಕ್ಕೆ ಬಂದು
  ನನ್ನ ಕನ್ಸು... ನನ್ಸಾಗ್ಹೋಯ್ತು

  ಅಬ್ಬಾ ಸೋತಿದ್ರೆ... ಎಂಡು ಆಗ್ತಿದ್ದೆ
  ಈಸೀಯಾಗ್ ಸಿಕ್ತು... ಈಸೀಯಾಗ್ ಸಿಕ್ತು
  ಅವ್ರು ಸೋತ್ರಲ್ಲ... ಕೈ ಬೆಂಬಲ
  ಈಸೀಯಾಗ್ ಸಿಕ್ತು... ಈಸೀಯಾಗ್ ಸಿಕ್ತು

  ಇದೆ ಮೊನ್ನೆ ಎಂಟ್ನೆ ತಾರೀಕ್... ಮಧ್ಯಾಹ್ನ
  ನೋಡುತ್ತಾ ಕೂತ್ಕೊಂಡಿದ್ದೆ... ರಿಸಲ್ಟ್-ನಾ
  ಯಡ್ಡಿಜೀಗೆ ಹೇಳ್ಬೇಕೊಂದು... ಥ್ಯಾಂಕ್ಸನ್ನ
  ಕ್ಯಾಂಡಿಡೇಟು ಅನಿಸಿಕೊಂಡೆ... ಪಕ್ಕಾ ನಾ

  ದೇವೇಗೌಡ್ರ ಪಕ್ಷ... ನಮ್-ಹತ್ರಕ್ಕೂ ಇಲ್ರೀ
  ಬೀಜೆಪಿಗೆ ಮಾತ್ರ... ಒಳ್ಳೇ ಪಾಠ ಕಣ್ರೀ
  ದಾಟಿಯಾದ ಮೇಲೆ... ಮೆಜಾರ್ಟಿ ಸಂಖ್ಯೆ
  ರಾಜ್ಯಾಧಿಕಾರ... ನಮ್ದಾಗ್ಹೋಯ್ತು

  ಸ್ವಂತಾ ಪಾರ್ಟೀಲೇ... ಫೈಟು ಆಗ್ತಿತ್ತು
  ಆದರೂನೂ ಗೆಲ್ತು... ಆದರೂನೂ ಗೆಲ್ತು
  ವೋಟು ಹಾಕೋರ್ಗೂ... ಬೇರೆ ಚಾಯ್ಸಿತ್ತಾ
  ಅದಕೇನೇ ಗೆಲ್ತು... ಅದಕೇನೇ ಗೆಲ್ತು

  ಭಿನ್ನಮತ ಯಾವಾಗ್ ಹೆಂಗೋ... ಗೊತ್ತಿಲ್ಲ
  ಎಲ್ಲಾರ್ನೂ ಮಂತ್ರಿ ಮಾಡೋ... ಕಾಗಲ್ಲಾ
  ಗುಟ್ಟಾಗಿ ಯಡ್ಡಿ ಸಾಥ್... ಇದ್ಯಲ್ಲಾ
  ಮುಂದೆ ಗೊತ್ತಾಗುತ್ತೆ ನಮ್ಮ... ಬಂಡ್ವಾಳ

  ಮತ್ತೆ ಗೆದ್ದು ಬಂದು... ಅಸೆಂಬ್ಲೀಲೊಂದು ವಿಕ್ಟರಿ
  ತುಂಬಾ ಒಳ್ಳೇ ಕೆಲಸ... ಮಾಡೋಕೈತೆ ಕಣ್ರಿ
  ಜೆಡಿಎಸ್ನಾಗೆ... ಇದ್ದಿದ್ರೆ ನಾನು
  ಗೌಡರ ಮರ್ಜೀಲೇ... ಇರಬೇಕಿತ್ತು

  ನನ್ನ ಕುರ್ಚಿಗೂ... ಫಿಟ್ಟಿಂಗ್ ಇಡಬೌದಾ
  ಯಾವನಿಗ್ ಗೊತ್ತು... ಯಾವನಿಗ್ ಗೊತ್ತು
  ಹಿಂದೆ ಯಾರಾದ್ರೂ... ಬತ್ತಿ ಇಡಬೌದಾ
  ಯಾವನಿಗ್ ಗೊತ್ತು... ಯಾವನಿಗ್ ಗೊತ್ತು

  ________________________________________
  ಮೂಲ ಹಾಡು: 'ಪರಮಾತ್ಮ' ಚಿತ್ರದ 'ಯಾವನಿಗ್ ಗೊತ್ತು... ಯಾವನಿಗ್ ಗೊತ್ತು'

  ನಾನೇ ಜೀನಿಯಸ್ಸಾ... ಹ್ರುದೆಸೀರಿಸೇಲಾತಿ... ಲಬಬಾವೂ
  ಎಬಿಸೀಡಿನಾ... ಆಲೂಗಡ್ದೆನಾ
  ಗೋಡೆ ಹಲ್ಲೀನಾ... ಯಾವಾನಿಗ್ ಗೊತ್ತು

  ಏನು ಮಾಡೋದು... ಒಂಟಿ ಹೂವೊಂದು
  ರೋಡಲ್ಲಿ ಸಿಕ್ತು... ರೋಡಲ್ಲಿ ಸಿಕ್ತು
  ಏನು ಹೇಳೋದು... ಇಂಥಾ ಟೈಮಲ್ಲಿ
  ಯಾವನಿಗ್ ಗೊತ್ತು... ಯಾವನಿಗ್ ಗೊತ್ತು

  ಎದೆಯಂಬ ಖಾಲಿ... ಡಬಕ್ಕೆ ಒಂದು
  ಸಣ್ಣ ಕಲ್ಲು... ಬಿದ್ದಂಗಾಯ್ತು

  ಡಬ್ಬ ಯಾತಕ್ಕೆ... ಸೌಂಡು ಮಾಡುತ್ತೊ
  ಯಾವನಿಗ್ ಗೊತ್ತು... ಯಾವನಿಗ್ ಗೊತ್ತು
  ಇವ್ಳು ಸಿಕ್ತಾಳ... ಕೈ ಕೊಡ್ತಾಳ
  ಯಾವನಿಗ್ ಗೊತ್ತು... ಯಾವನಿಗ್ ಗೊತ್ತು

  ಅದು ಯಾವ್ದೋ ಒಂಟಿ ಹಕ್ಕಿ... ಸದ್ದನ್ನಾ
  ಕೇಳುತ್ತಾ ಮಲ್ಕೊಂಡಿದ್ದೆ... ಮಧ್ಯಾಹ್ನ
  ಕಾಲ್ ಕೇಜಿ ಪ್ರೀತಿಗೊಂದು... ಪದ್ಯಾನಾ
  ಬರೆದಿಟ್ಟು ಕೆರೆದುಕೊಂಡೆ... ಗಡ್ಡಾನಾ

  ಕಾಳಿದಾಸ ಕಾವ್ಯ... ನಮಪ್ಪನ್ನ ಕೇಳ್ರಿ
  ಕಾಲಿ ಹಾಳೆಗಿಂತ... ಒಳ್ಳೆ ಕಾವ್ಯ ಇಲ್ರಿ
  ಹೃದಯದ ಮೇಲೆ... ಹೈ-ಹೀಲ್ಡು ಹಾಕಿ
  ರಾಜಕುಮಾರಿ... ನಿಂತಂಗಾಯ್ತು

  ಇಂಥಾ ಟೈಮಲ್ಲಿ... ಹಾಡು ಬೇಕಿತ್ತಾ
  ಯಾವನಿಗ್ ಗೊತ್ತು... ಯಾವನಿಗ್ ಗೊತ್ತು
  ದೇವ ದಾಸಾನೂ... ಎಣ್ಣೆ ಬಿಟ್ಟಿದ್ನಾ
  ಯಾವನಿಗ್ ಗೊತ್ತು... ಯಾವನಿಗ್ ಗೊತ್ತು

  ಕನಸಲ್ಲಿ ಯಾಕೊ ಯಾವ್ದೂ... ಸಾಲಲ್ಲ
  ಮೋಡಾನ ಮುದ್ದು ಮಾಡೋ... ಕಾಗಲ್ಲಾ
  ಚಿಟ್ಟೆಗೆ ಚಡ್ಡಿ ಹಾಕೋ... ಕಾಗ್ಲಿಲ್ಲ
  ನಿಮ್ಗೆ ಗೊತ್ತಲ್ವಾ ನಾನು... ಮುಟ್ಟಾಳ

  ಮತ್ತೆ ಮತ್ತೆ ಬಂತು... ಎದೆಯಲ್ಲೊಂದು ಲಹರಿ
  ತುಂಬಾ ಒಳ್ಳೆ ಕನ್ನಡ... ಮಾತಾಡ್ಬಿಟ್ಟೆ ಕಣ್ರಿ
  ಮೂಗು ಬೊಟ್ಟಾಗಿ... ಹುಟ್ಟಿದ್ರೆ ನಾನು
  ಇವಳ ಮೂತೀಲೆ... ಇರಬೌದಿತ್ತು

  ನನ್ನ ಆಸೆಗೂ... ಮೀನಿಂಗ್ ಇರಬೌದಾ
  ಯಾವನಿಗ್ ಗೊತ್ತು... ಯಾವನಿಗ್ ಗೊತ್ತು
  ಮುಂದೆ ಎಲ್ಲಾದ್ರು... ತಿಂಡಿ ಸಿಗಬೌದಾ
  ಯಾವನಿಗ್ ಗೊತ್ತು... ಯಾವನಿಗ್ ಗೊತ್ತು

  English summary
  Puneet Starrer Kannada Movie Paramathma movie song Yavanigottu...in political satire style by Vijayaraj Kannatha. Imagine how Karnataka CM Siddaramaiah fears influence, trouble from then Janata Parivar leader and Former PM HD Deve Gowda

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X