twitter
    For Quick Alerts
    ALLOW NOTIFICATIONS  
    For Daily Alerts

    ವಿಶ್ವದ ಅತ್ಯಂತ ಶ್ರೀಮಂತ ಗಾಯಕಿ ರಿಹಾನ್ನಾ: ಒಟ್ಟು ಆಸ್ತಿ ಮೌಲ್ಯ ಎಷ್ಟು?

    |

    'ನಾವು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ..' ಎನ್ನುವ ಒಂದು ಮಾತಿನಿಂದ ಭಾರತದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದ್ದವರು ರಿಹಾನ್ನಾ ಎನ್ನುವ ಪಾಪ್ ಗಾಯಕಿ. ಭಾರತದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ 'ನಾವು ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ..' ಎಂದು ಟ್ವೀಟ್ ಮಾಡುವ ಮೂಲಕ ರೈತರ ಹೋರಾಟ ವಿಶ್ವಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡಿದ್ದ ಇದೇ ಗಾಯಕಿ ಇಂದು ವಿಶ್ವದ ಶ್ರೀಮಂತ ಗಾಯಕಿರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ಶ್ರೀಮಂತ ಗಾಯಕಿಯರ ಪಟ್ಟಿಯಲ್ಲಿ ರಿಹಾನ್ನಾ ಮೊದಲ ಸ್ಥಾನದಲ್ಲಿದ್ದಾರೆ. ಈ ಮೂಲಕ ರಿಹಾನ್ನಾ ಅಧಿಕೃತವಾಗಿ ಬಿಲಿಯನೇರ್ ಪಟ್ಟಿ ಸೇರಿದ್ದಾರೆ. ಬಿಲಿಯನೇರ್ ಆಗಿ ಹೊರಹೊಮ್ಮಿರುವ ರಿಹಾನ್ನಾ ಒಟ್ಟು ಆಸ್ತಿಯ ಮೌಲ್ಯ 1.7 ಬಿಲಿಯನ್ ಡಾಲರ್ ಎಂದು ವರದಿಯಾಗಿದೆ. ಇದರಲ್ಲಿ ಬಹುಪಾಲು ಫೆಂಟಿ ಬ್ಯೂಟಿ ಸೌಂದರ್ಯವರ್ಧಕ ಕಂಪೆನಿಯಿಂದ ಬಂದಿದೆ. ಇನ್ನು ಉಳಿದ ಸಂಪತ್ತು ಒಳ ಉಡುಪು ಕಂಪೆನಿ ಸ್ಯಾವೇಜ್ ಎಕ್ಸ್ ಫೆಂಟಿ ಮತ್ತು ತನ್ನ ಗಾಯನ, ನಟನೆಯಿಂದ ಬಂದಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಮುಂದೆ ಓದಿ...

    ಸೌಂದರ್ಯ-ಫ್ಯಾಷನ್ ಬ್ರಾಂಡ್ ನಿಂದ ಅಧಿಕ ಸಂಪಾದನೆ

    ಸೌಂದರ್ಯ-ಫ್ಯಾಷನ್ ಬ್ರಾಂಡ್ ನಿಂದ ಅಧಿಕ ಸಂಪಾದನೆ

    ರಿಹಾನ್ನಾ ಫೆಂಟಿ ಬ್ಯೂಟಿ ಕಂಪೆನಿ ಜೊತೆ ಶೇ. 50ರಷ್ಟು ಪಾಲುಹೊಂದಿದ್ದಾರೆ. ಇದು ಇಂದು ರಿಹಾನ್ನಾರನ್ನು ವಿಶ್ವದ ಅತ್ಯಂತ ಶ್ರೀಮಂತ ಗಾಯಕಿಯನ್ನಾಗಿ ಮಾಡಿದೆ. ರಿಹಾನ್ನಾ ಕೇವಲ ವಿಶ್ವದ ಶ್ರೀಮಂತ ಗಾಯಕಿ ಮಾತ್ರವಲ್ಲ, ಓಪ್ರಾ ವಿನ್ಫ್ರೇ ನಂತರ ಎರಡನೇ ಶ್ರೀಮಂತ ಮಹಿಳಾ ಮನೋರಂಜಕಿಯಾಗಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ. ಗಾಯನಕ್ಕಿಂತ ಹೆಚ್ಚಾಗಿ ರಿಹಾನ್ನಾ ಸೌಂದರ್ಯ ಮತ್ತು ಫ್ಯಾಷನ್ ಬ್ರಾಂಡ್‌ಗಳಿಂದ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

    2005ರಲ್ಲಿ ಮೊದಲ ಆಲ್ಬಂ ಬಿಡುಗಡೆ

    2005ರಲ್ಲಿ ಮೊದಲ ಆಲ್ಬಂ ಬಿಡುಗಡೆ

    ಬಿಲಿಯನೇರ್ ಸ್ಥಾನ ತಂದುಕೊಂಡುವಲ್ಲಿ ರಿಹಾನ್ನಾ ಬ್ಯೂಟಿ ಬ್ರಾಂಡ್‌ಗಳು ಪ್ರಮುಖವಾಗಿವೆ. 33 ವರ್ಷದ ಗಾಯಕಿ ರಿಹಾನ್ನಾ 2005ರಲ್ಲಿ ತನ್ನ ಮೊದಲ ಸ್ಟುಡಿಯೋ ಆಲ್ಬಂ ಅನ್ನು ಬಿಡುಗಡೆ ಮಾಡಿದರು. ನಂತರ ಏಳು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ 103 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟ್ಟರ್‌ನಲ್ಲೂ 10 ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

    ಕಷ್ಟದ ಬಾಲ್ಯ ಕಳೆದ ರಿಹಾನ್ನಾ

    ಕಷ್ಟದ ಬಾಲ್ಯ ಕಳೆದ ರಿಹಾನ್ನಾ

    ಈಗ ಬಹು ದೊಡ್ಡ ಸೆಲೆಬ್ರಿಟಿ, ಶ್ರೀಮಂತ ಗಾಯಕಿಯಾಗಿರುವ ರಿಹಾನ್ನಾ ಹುಟ್ಟಿದ್ದು ಕೆರೆಬಿಯನ್ ದ್ವೀಪ ಸಮೂಹದ ದೇಶ ಬಾರ್ಬೊಡೋಸ್‌ನಲ್ಲಿ. ರಿಹಾನ್ನಾರದ್ದು ಬಹು ಕಷ್ಟದ ಬಾಲ್ಯ. ಕುಡುಕ, ಮಾದಕ ವ್ಯಸನಿ ತಂದೆ ಪ್ರತಿದಿನ ತಾಯಿಯನ್ನು ಹೊಡೆಯುತ್ತಿದ್ದ. ಹಿಂಸೆ, ಮೂದಲಿಕೆಗಳನ್ನು ನೋಡಿಯೇ ಬೆಳೆದರು ರಿಹಾನ್ನಾ. ಬಾಲ್ಯದಲ್ಲಿ ಬಟ್ಟೆ ಮಾರುವ ಕೆಲಸ ಮಾಡುತ್ತಿದ್ದ ರಿಹಾನ್ನಾ. ಬಡತನ, ಹಿಂಸೆ, ಅಪ್ಪನ ಮದುವೆಯಾಗುವ ಚಟ (ಐದು ಮದುವೆಯಾಗಿದ್ದ ರಿಹಾನ್ನಾಳ ತಂದೆ) ಎಲ್ಲವನ್ನೂ ನೋಡಿ ಬಾಲ್ಯದಲ್ಲಿ ವಿಚಿತ್ರ ಖಾಯಿಲೆಗೆ ಗುರಿಯಾಗಿದ್ದರು. ಪ್ರತಿದಿನ ಅಸಾಧ್ಯ ತಲೆ ನೋವು ಬರುತ್ತಿತ್ತು ರಿಹಾನ್ನಾಗೆ. ಹಲವು ಸಿ.ಟಿ ಸ್ಕ್ಯಾನ್ ಗಳಾಯಿತು. ಇದೇನೋ ಮೆದುಳಿನ ಟ್ಯೂಮರ್ ಇರಬಹುದೆಂದು ವೈದ್ಯರು ಅಂದಾಜಿಸಿದರು. ಆದರೆ ರಿಹಾನ್ನಾಳ ತಂದೆ-ತಾಯಿ ಬೇರಾದ ಮೇಲೆ ರಿಹಾನ್ನಾಳ ತಲೆ ನೋವು ಹೊರಟು ಹೋಯಿತು. ತಂದೆಯ ಹಿಂಸಾತ್ಮಕ ಪ್ರವೃತ್ತಿ ಬಾಲಕಿ ರಿಹಾನ್ನಾಳ ಮನಸ್ಸಿನ ಮೇಲೆ ಗಾಢ ಋಣಾತ್ಮಕ ಪರಿಣಾಮ ಬೀರಿಬಿಟ್ಟಿತ್ತು.

    ನೋವು ಮರೆಯಲು ಸಂಗೀತ ಪ್ರಾರಂಭ

    ನೋವು ಮರೆಯಲು ಸಂಗೀತ ಪ್ರಾರಂಭ

    ಬಾಲ್ಯದ ನೋವುಗಳನ್ನು ಮರೆಯಲು, ಸಂಕಟದ ಬದುಕಿನಿಂದ ತಾತ್ಕಾಲಿಕ ನೆಮ್ಮದಿ ಪಡೆಯಲು ಇಬ್ಬರು ಶಾಲಾ ಸಹಪಾಠಿಗಳೊಂದಿಗೆ ಸಂಗೀತ ತಂಡ ಪ್ರಾರಂಭಿಸಿದ ರಿಹಾನ್ನಾ ಹಾಡಲು ಪ್ರಾರಂಭಿಸಿದರು. 2003 ರಲ್ಲಿ ತಂಡ ಪ್ರಾರಂಭಿಸಿದ ರಿಹಾನ್ನಾಳ ಪ್ರತಿಭೆ ಗುರುತಿಸಿದ್ದು ಸಂಗೀತಗಾರ ಇವಾನ್ ರೋಜರ್ಸ್. ಆ ನಂತರ ಆಕೆ ಮುಟ್ಟಿದ್ದೆಲ್ಲವೂ ಚಿನ್ನವಾಗಿ ಪರಿಣಮಿಸಿತು. ಆಕೆಯ ಹಾಡುಗಳು, ಆಲ್ಬಂ ಗಳು ದಾಖಲೆಗಳು ಬರೆದವು.

    ಆರು ಗಿನ್ನೆಸ್ ವಿಶ್ವದಾಖಲೆ, ಒಂಬತ್ತು ಗ್ರಾಮಿ ಪ್ರಶಸ್ತಿ

    ಆರು ಗಿನ್ನೆಸ್ ವಿಶ್ವದಾಖಲೆ, ಒಂಬತ್ತು ಗ್ರಾಮಿ ಪ್ರಶಸ್ತಿ

    ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಹಾಡು ಅಥವಾ ಆಲ್ಬಂ ರಿಹಾನ್ನಾರದ್ದು. ಸಂಗೀತಕ್ಕೆ ನೀಡಲಾಗುವ ವಿಶ್ವ ಶ್ರೇಷ್ಠ ಪ್ರಶಸ್ತಿ ಎಂದು ಪರಿಗಣಿಸ್ಪಟ್ಟಿರುವ ಗ್ರಾಮಿ ಪ್ರಶಸ್ತಿ 9 ಬಾರಿ ರಿಹಾನ್ನಾರನ್ನು ಅರಸಿ ಬಂದಿದೆ. 33 ಬಾರಿ ಗ್ರಾಮಿಗೆ ನಾಮಿನೇಶನ್ ಸಹ ಆಗಿದ್ದಾರೆ. 12 ಬಿಲ್‌ಬೋರ್ಡ್ ಪ್ರಶಸ್ತಿ, 13 ಅಮೆರಿಕನ್ ಮ್ಯೂಸಿಕ್ ಪ್ರಶಸ್ತಿ. 8 ಪೀಪಲ್ ಚಾಯ್ಸ್ ಪ್ರಶಸ್ತಿ, ಇದೆಲ್ಲದರ ಜೊತೆಗೆ ಆರು ಗಿನ್ನೆಸ್ ವಿಶ್ವದಾಖಲೆಗಳು ರಿಹಾನ್ನಾ ಹೆಸರಿನಲ್ಲಿವೆ.

    ರಿಹಾನ್ನಾ ದಿನಾಚರಣೆ

    ರಿಹಾನ್ನಾ ದಿನಾಚರಣೆ

    2008ರ ಫೆಬ್ರವರಿ 22 ರಂದು ಅಂದಿನ ಬಾರ್ಬಡೋಸ್ ಸರ್ಕಾರ ರಿಹಾನಾಗೆ ಗೌರವ ನೀಡಲೆಂದು "ರಿಹಾನ್ನಾ ದಿನಾಚರಣೆ" (ರಿಹಾನಾ ಡೇ) ಆಚರಿಸಿತು. ಅದಾದ ನಂತರ ಪ್ರತಿವರ್ಷ ಫೆಬ್ರವರಿ 22ರಂದು ಬಾರ್ಬಡೋಸ್ ದೇಶದಲ್ಲಿ 'ರಿಹಾನಾ ಡೇ' ಆಚರಿಸಲಾಗುತ್ತಿದೆ. ಇದು ರಿಹಾನ್ನಾಗೆ ದೇಶವೊಂದು ಕೊಡುತ್ತಿರುವ ಗೌರವಕ್ಕೆ ಸಾಕ್ಷಿ.

    ಟ್ರಂಪ್ ವಿರುದ್ಧ ಪ್ರತಿಭಟಿಸಿದ್ದ ರಿಹನ್ನಾ

    ಟ್ರಂಪ್ ವಿರುದ್ಧ ಪ್ರತಿಭಟಿಸಿದ್ದ ರಿಹನ್ನಾ

    ಬಾಲ್ಯದಲ್ಲಿ ಬಡತನ ಕಂಡ ರಿಹನ್ನಾ ಸೆಲೆಬ್ರಿಟಿ ಆದ ಬಳಿಕವೂ ಬಡವರು, ಶೋಷಿತರಗಾಗಿ ದನಿ ಎತ್ತುತ್ತಲೇ ಇರುತ್ತಾರೆ. ಅದರ ಭಾಗವಾಗಿಯೇ ಈಗ ಭಾರತದ ರೈತರ ಪ್ರತಿಭಟನೆ ಬಗ್ಗೆಯೂ ಮಾತನಾಡಿದ್ದಾರೆ ರಿಹಾನ್ನಾ. ಈ ಹಿಂದೆ ಟ್ರಂಪ್ ಸರ್ಕಾರವನ್ನು ಕಟುವಾಗಿ ಟೀಕಿಸಿ, ಟ್ರಂಪ್ ವಿರುದ್ಧ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ನೈಜೀರಿಯಾ, ಸೂಡನ್ ಗಳಲ್ಲಿ ನಡೆದ ಸಾಮಾಜಿಕ ಹೋರಾಟಗಳನ್ನು ಸಹ ರಿಹಾನ್ನಾ ಬೆಂಬಲಿಸಿ ಟ್ವೀಟ್ ಮಾಡಿದ್ದರು.

    English summary
    Pop Singer Rihanna becomes the richest female Singer in the world.
    Tuesday, August 10, 2021, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X