For Quick Alerts
  ALLOW NOTIFICATIONS  
  For Daily Alerts

  ತಾವೇ ಹಾಡಿದ ಹಾಡನ್ನ ರಿಲೀಸ್ ಮಾಡಿದ ಪವರ್ ಸ್ಟಾರ್ ಪುನೀತ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್... ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಾಡುಗಳನ್ನ ಹಾಡಿ ಅಭಿಮಾನಿಗಳನ್ನ ಇಂಪ್ರೆಸ್ ಮಾಡುತ್ತಲೇ ಬರ್ತಿದ್ದಾರೆ. ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಸಿನಿಮಾದ ಒಂದು ಹಾಡನ್ನ ಪವರ್ ಸ್ಟಾರ್ ಹಾಡಿದ್ರು.

  ಈ ಹಿಂದೆ ಅದರ ಮೇಕಿಂಗ್ ರಿಲೀಸ್ ಮಾಡಿದ್ದ ಚಿತ್ರತಂಡ ಇಂದು ಆ ಹಾಡಿನ ವಿಡಿಯೋ ಸಾಂಗ್ ಅನ್ನ ರಿಲೀಸ್ ಮಾಡಿದೆ. ವಿಶೇಷ ಅಂದ್ರೆ ಸ್ವತಃ ಪವರ್ ಸ್ಟಾರ್ ಅವ್ರೇ ಈ ಹಾಡನ್ನ ಬಿಡುಗಡೆ ಮಾಡಿದ್ದಾರೆ.

  ''ರೋ ರೋ ರೋಮಿಯೋ...'' ಅಂತ ಶುರು ಆಗುವ ಈ ಹಾಡಿನಲ್ಲಿ ಆಂಕರಿಂಗ್ ನಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚ್ತಿರೋ ಅನುಶ್ರೀ ಕಾಣಿಸಿಕೊಂಡಿದ್ದಾರೆ. ಅನುಶ್ರೀ ಜೊತೆಯಾಗಿ ಶರತ್ ನಾಯಕನಾಗಿ ಮಿಂಚಿದ್ದಾರೆ. ಅಷ್ಟೇ ಅಲ್ಲದೆ ಸಖತ್ತಾಗಿ ಸ್ಟೆಪ್ಸ್ ಕೂಡ ಹಾಕಿದ್ದಾರೆ.

  ನಿರ್ದೇಶಕ ಎಪಿ ಅರ್ಜುನ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸಂಗೀತ ನಿರ್ದೇಶಕ ಪ್ರಜ್ವಲ್ ಪೈ ಹಾಡಿಗೆ ಟ್ಯೂನ್ ಹಾಕಿದ್ದಾರೆ. ತಾವೇ ಹಾಡಿದ್ದ ಹಾಡನ್ನ ಇಂದು ಪುನೀತ್, ಸಿನಿಮಾ ಟೀಂ ಜೊತೆ ಸೇರಿ ತಮ್ಮ ಮನೆಯಲ್ಲಿ ಬಿಡುಗಡೆ ಮಾಡಿದ್ದಾರೆ.

  ನ್ಯೂಯಾರ್ಕ್ ನ ಸುಂದರ ತಾಣದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿದ್ದು ಖುದ್ದು ಇಮ್ರಾನ್ ಸರ್ದಾರಿಯಾ ಅವ್ರೇ ಈ ಹಾಡನ ನೃತ್ಯ ಸಂಯೋಜನೆ ಮಾಡಿದ್ದಾರೆ. ಅನುಶ್ರೀ ನಾಯಕಿಯಾಗಿ ಅಭಿನಯಿಸುತ್ತಿರುವ ಮೂರನೇ ಚಿತ್ರ ಇದಾಗಿದ್ದು ಸಿನಿಮಾದಲ್ಲಿ ಅನುಶ್ರೀ ಔಟ್ ಅಂಡ್ ಔಟ್ ಕಮರ್ಷಿಯಲ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಸಾನಿಯಾ ಸರ್ದಾರಿಯಾ ಡಿಸೈನ್ ಮಾಡಿರೋ ಕಾಸ್ಟ್ಯೂಮ್ಸ್ ನಲ್ಲಿ ಅನುಶ್ರೀ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ.

  ಸಖತ್ ಯೂಥ್ ಫುಲ್ ಲಿರಿಕ್ಸ್ ಇರೋ ಸಾಂಗ್ ಈಗಿನ ಯುವಕರಿಗೆ ಇಷ್ಟ ಆಗೋದ್ರಲ್ಲಿ ಅನುಮಾನವಿಲ್ಲ ಅನ್ನೋದು ಈ ಹಾಡನ್ನ ಕೇಳಿದವ್ರ ಅಭಿಪ್ರಾಯ. ಈ ಹಿಂದೆ ಗಣೇಶ ಹಬ್ಬಕ್ಕಾಗಿ ಕಿಚ್ಚ ಸುದೀಪ್ ಹಾಡಿದ ಹಾಡನ್ನ ರಿಲಿಸ್ ಮಾಡಲಾಗಿತ್ತು. ಈಗ ಪವರ್ ಸ್ಟಾರ್ ಹಾಡಿರೋ ಹಾಡನ್ನ ಕೇಳಿ ಎಂಜಾಯ್ ಮಾಡೋ ಟೈಂ ಬಂದಿದೆ.

  English summary
  Power Star Puneeth Rajkumar launched Kannada Movie 'Uppu Huli Khara' film second song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X