»   » ಪುನೀತ್ ರಾಜ್ ಕುಮಾರ್ ಧ್ವನಿಯಲ್ಲಿ 'ಅಲೆ' ಹಾಡು

ಪುನೀತ್ ರಾಜ್ ಕುಮಾರ್ ಧ್ವನಿಯಲ್ಲಿ 'ಅಲೆ' ಹಾಡು

Posted By:
Subscribe to Filmibeat Kannada
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಂಠಸಿರಿಯಲ್ಲಿ ಮತ್ತೊಂದು ಹಾಡು ಮೂಡಿಬಂದಿದೆ. 'ಅಲೆ' ಚಿತ್ರಕ್ಕಾಗಿ ಹಾಡೊಂದನ್ನು ಆಡಿರುವ ಪುನೀತ್ ರಾಜ್ ಕುಮಾರ್, ಈ ಮೂಲಕ ಮತ್ತೊಂದು ಹಾಡಿಗೆ ಧ್ವನಿಯಾಗಿ ಸಿನಿಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಖುಷಿಯ ಸಮಾಚಾರ ನೀಡಿದ್ದಾರೆ. ಯೋಗರಾಜ್ ಭಟ್ ಅವರು ಬರೆದಿರುವ 'ಸೋಲು ನನಗಾಗೋದಿಲ್ಲ.. ಅದಕ್ಕೇ ಗೆಲ್ತೀನಪ್ಪಾ.. ಸುಮ್ನಿದ್ರೆ ಆಗೋದಿಲ್ಲ.. ಅದಕ್ಕೇ ಹಾಡ್ತೀನಪ್ಪಾ..ಎಂಬ ಮೊದಲ ಸಾಲಿನ ಗೀತೆಯಿದು.

ಕೆಕೆ ಆರ್ ಮೂವೀಸ್ ಹೌಸ್ ಲಾಂಛನದಲ್ಲಿ ಕಿರಣ್ ಕುಮಾರ್ ರೆಡ್ಡಿ ಅವರು ನಿರ್ಮಿಸುತ್ತಿರುವ 'ಅಲೆ' ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ಮನೋಮೂರ್ತಿ ಸ್ಟುಡಿಯೋದಲ್ಲಿ ಪುನೀತ್ ಹಾಡಿದ್ದಾರೆ. "ಯೋಗರಾಜ್ ಭಟ್ ಬರೆದ ಈ ಗೀತೆ ತುಂಬಾ ಚೆನ್ನಾಗಿದೆ. ಪುನೀತ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡು ಎಲ್ಲರ ಮೆಚ್ಚುಗೆ ಗಳಿಸಲಿರುವುದು ಖಂಡಿತ" ಎಂದಿದ್ದಾರೆ ಅಲೆ ಚಿತ್ರದ ನಿರ್ದೇಶಕ ಆದತ್.

ಆದತ್ ನಿರ್ದೇಶನದ 'ಅಲೆ' ಚಿತ್ರದ ನಾಯಕರು ತನುಷ್ ಹಾಗೂ ನಾಯಕಿ ಹರ್ಷಿಕಾ ಪೂಣಚ್ಚ. ಚಂದ್ರಶೇಖರ್, ರಾಮಕೃಷ್ಣ, ಶಕೀಲಾ, ಸುಮನ್ ಶೆಟ್ಟಿ, ಜೊಸೈಮನ್, ಪದ್ಮಜಾರಾವ್, ತಬಲ ನಾಣಿ, ಭವಾನಿಪ್ರಕಾಶ್, ಪಿ.ಎನ್.ಸತ್ಯ, ಸುರೇಶ್ಚಂದ್ರ, ಹರೀಶ್ರಾಯ್, ಮಿತ್ರ, ಕೆಂಪೇಗೌಡ, ಬಿರಾದಾರ್, ವಿಜಯಸಾರಥಿ, ದುಬೈ ರಫೀಕ್, ಪ್ರಸಾದ್ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶಕ ಆದತ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ವಿಜಯ್ ಭರಮಸಾಗರ ಸಂಭಾಷಣೆ, ಎ.ಕೆ.ಎನ್ ಸೆಬಾಸ್ಟೇನ್ ಛಾಯಾಗ್ರಹಣ ಚಿತ್ರಕ್ಕಿದೆ. ಮನೋಮೂರ್ತಿಯವರ ಸಂಗೀತ ಚಿತ್ರಕ್ಕಿದ್ದು ಸಂಕಲನಕಾರರು ಕೆ. ಎಂ.ಪ್ರಕಾಶ್. ಅಲ್ಟಿಮೆಟ್ ಶಿವು ಸಾಹಸ ಹಾಗೂ ಬಾಬುಖಾನ್ ಕಲಾ ನಿರ್ದೇಶನ 'ಅಲೆ' ಚಿತ್ರಕ್ಕಿದೆ. ಒಟ್ಟಿನಲ್ಲಿ ಈ ಚಿತ್ರದ ಹಾಡೊಂದಕ್ಕೆ ಯೋಗರಾಜ್ ಭಟ್ ಸಾಹಿತ್ಯ ಹಾಗೂ ಪುನೀತ್ ರಾಜ್ ಕುಮಾರ್ ಧ್ವನಿಯ 'ಪವರ್' ಸಿಕ್ಕಿದೆ. ಚಿತ್ರದ ಬಿಡುಗಡೆಗೆ ಸದ್ಯಕ್ಕೆ ಪಕ್ಕಾ ಆಗಿಲ್ಲ. (ಒನ್ ಇಂಡಿಯಾ ಕನ್ನಡ)

English summary
Power Star Puneeth Rajkumar sing a somg for Kannada movie 'Ale'. This song is written by Yogaraj Bhat and Manomurthy composed the Music. Tanush and Harshika Poonachcha are in the Lead Role for this Adath directed movie.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada