»   » ಪ್ರಕಾಶ್ ರೈ ಪುತ್ರಿ ಈಗ ಕುಹೂ ಕುಹೂ ಕೋಗಿಲೆ

ಪ್ರಕಾಶ್ ರೈ ಪುತ್ರಿ ಈಗ ಕುಹೂ ಕುಹೂ ಕೋಗಿಲೆ

Posted By: ಉದಯರವಿ
Subscribe to Filmibeat Kannada

ಪ್ರತಿಭಾನ್ವಿತ ನಟ, ನಿರ್ದೇಶಕ ಪ್ರಕಾಶ್ ರೈ ಯಾನೆ ಪ್ರಕಾಶ್ ರಾಜ್ ಅವರು ತಮ್ಮ ಕುಟುಂಬ, ಖಾಸಗಿ ವಿಚಾರಗಳನ್ನು ಹೆಚ್ಚಾಗಿ ಯಾರೊಂದಿಗೂ ಚರ್ಚಿಸಿದವರಲ್ಲ, ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡವರಲ್ಲ. ಈ ವಿಚಾರಗಳಲ್ಲಿ ಮಾತ್ರ ಅವರು ಸದಾ ಅಂತರ್ಮುಖಿ.

ಇದೀಗ ಅವರು ತಮ್ಮ ಮಗಳು ಪೂಜಾ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ತಂದೆಯಂತೆ ಮಗಳೂ ಸಹ ಪ್ರತಿಭಾವಂತೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರ ಮಗಳು ಪೂಜಾ ತನ್ನಲ್ಲಿನ ಕುಹೂ ಕುಹೂ ಕಂಠವನ್ನು ಪ್ರದರ್ಶಿಸುತ್ತಾ ಸ್ನೇಹಿತನೊಂದಿಗೆ ಕೈಜೋಡಿಸಿ ಒಂದು ವಿಡಿಯೋ ತಯಾರಿಸಿದ್ದಾರೆ. [ಕನ್ನಡಿಗ ಪ್ರಕಾಶ್ ರೈ ಈಗ ಮಿಲಿಯನೇರ್ ನಟ]

Prakash Raj

'Death Cab for Cutie' - "I Will Follow You into the Dark" ಎಂಬ ಹಾಡನ್ನು ಇಂಪಾಗಿ ಹಾಡಿರುವ ವಿಡಿಯೋ ಮಾಡಿದ್ದಾರೆ. ಇದನ್ನು ಸ್ವತಃ ಪ್ರಕಾಶ್ ರಾಜ್ ಅವರು ಅಭಿಮಾನಿಗಳೊಂದಿಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟಿಸಿರುವ ಪ್ರಕಾಶ್ ರೈ, "ತನ್ನ ಮುದ್ದಿನ ಮಗಳು ಗೆಳೆಯನೊಂದಿಗೆ ಒಂದು ಹಾಡನ್ನು ಹಾಡಿದ್ದಾರೆ. ತಂದೆಯಾಗಿ ನಾನು ಹೆಮ್ಮೆ ಪಡುವ ಸಮಯವಿದು...ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ...ಚಿಯರ್ಸ್!" ಎಂದಿದ್ದಾರೆ.


ಪ್ರಕಾಶ್ ರೈ ಅವರಿಗೆ ಒಬ್ಬ ಮಗಳಿದ್ದು, ಅವರನ್ನು ತುಂಬಾ ಮುದ್ದಾಗಿ ಬೆಳೆಸಿದ್ದಾರೆ ಎಂಬ ವಿಷಯ ಬಹಳಷ್ಟು ಮಂದಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ. ಪ್ರಕಾಶ್ ರೈ ಅವರ ಮೊದಲ ಪತ್ನಿ ಲಲಿತಾ ಕುಮಾರಿ ಮಗಳು ಈಕೆ. 2009ರಲ್ಲಿ ಲಲಿತಾ ಕುಮಾರಿ ಅವರಿಗೆ ವಿಚ್ಛೇದನ ನೀಡಿದ ಬಳಿಕ ಪೋನಿ ವರ್ಮಾ ಅವರನ್ನು ಪ್ರಕಾಶ್ ರೈ ವರಿಸಿದರು.

ತನ್ನ ಮೊದಲ ಪತ್ನಿಯೊಂದಿಗಿನ ಸಂಬಂಧ ಕಳಚಿದ್ದರೂ ಇಬ್ಬರು ಮಕ್ಕಳೊಂದಿಗಿನ ಅನುಬಂಧನ ಮಾತ್ರ ಮುಂದುವರಿದಿದೆ. ಮೊದಲ ಮಗಳು ಮೇಘನಾ, ಎರಡನೇ ಮಗಳು ಪೂಜಾ. ಇಬ್ಬರಲ್ಲೂ ಕಲಾ ಪ್ರೌಢಿಮೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.

ತಂದೆಯಂತೆ ಮಕ್ಕಳು ಪ್ರತಿಭಾವಂತರು. ತನ್ನ ಎರಡು ಕಣ್ಣುಗಳಂತಿರುವ ಇವರಿಬ್ಬರನ್ನು ರೈ ಚಿತ್ರರಂಗಕ್ಕೆ ಕರೆತರುತ್ತಾರಾ ಇಲ್ಲವೇ ಎಂಬುದನ್ನು ಕಾಲ ನಿರ್ದರಿಸಲಿದೆ. ಸದ್ಯಕ್ಕೆ ಪ್ರಕಾಶ್ ರೈ ಹಲವಾರು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡದಲ್ಲಿ ಮತ್ತೆ ಯಾವ ಚಿತ್ರ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕು.

English summary
Ms Pooja Prakash Raj has enthralled one and all with one of the most popular singles of American rock band 'Death Cab for Cutie' - "I Will Follow You into the Dark". Prakash Raj Tweet "Sharing my darling daughter singing with a friend ...for u all... Ahh !!!! the proud moments of a father...Cheers!"

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada