For Quick Alerts
  ALLOW NOTIFICATIONS  
  For Daily Alerts

  ಶ್ರದ್ಧೆ ಮತ್ತು ತಾಳ್ಮೆ ಇದ್ದಲ್ಲಿ ಸಂಗೀತ ಒಲಿಯುತ್ತದೆ : ಶ್ರೀನಾಥ್

  By Rajendra
  |

  ತಾಳ್ಮೆ ಮತ್ತು ಶ್ರಧ್ಧೆ ಇದ್ದರೆ ಮಾತ್ರವೇ ಸಂಗೀತ ಸರಸ್ವತಿ ಒಲಿಯುತ್ತಾಳೆ. ಗುರುಕುಲ ಪಧ್ಧತಿಯಲ್ಲಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದವರು ಎಂದಿಗೂ ಈ ಕ್ಷೇತ್ರದಲ್ಲಿ ಗಟ್ಟಿಯಾಗಿ ಬೇರೂರುತ್ತಾರೆ ಎಂದು ಖ್ಯಾತ ಚಲನಚಿತ್ರ ನಟ ಪ್ರಣಯರಾಜ ಡಾ. ಶ್ರೀನಾಥ್ ಹೇಳಿದರು.

  ಅವರು ನಗರದ ಕನ್ನಡ ಭವನದಲ್ಲಿರುವ ಕರ್ನಾಟಕ ನಾಟಕ ಅಕಾಡೆಮಿ ಚಾವಡಿಯಲ್ಲಿ ಕಿಕ್ಕಿರಿದು ಸೇರಿದ ಸಂಗೀತಾಸಕ್ತರನ್ನು ಉದ್ದೇಶಿಸಿ "ಸ್ವರಸಂಪದ" ಟ್ರಸ್ಟನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಈ ಮಾತನ್ನು ಹೇಳಿದರು.

  ಕನ್ನಡ ಭವನದಲ್ಲಿರುವ ಕರ್ನಾಟಕ ನಾಟಕ ಆಕಾಡೆಮಿ ಚಾವಡಿಯಲ್ಲಿ ಜರುಗಿದ ಸ್ವರಸಂಪದ ಟ್ರಸ್ಟ್ ನಿರ್ಮಿಸಿದ "ಕೃಷ್ಣಾರ್ಪಣ" (ಕೊಂಕಣಿ ಭಕ್ತಿಗೀತೆಗಳ ಧ್ವನಿಸುರುಳಿ) ಯನ್ನು ಖ್ಯಾತ ಉದ್ಯಮಿ ಡಾ. ದಯಾನಂದ ಪೈರವರು ಬಿಡುಗಡೆಗೊಳಿಸಿದರು. ಗಾಯಕಿ ಡಾ. ಸಂಪದ ಭಟ್ಟ ಮರಬಳ್ಳಿಯವರ ಸಂಗೀತ ಪಾಂಡಿತ್ಯದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದರು.

  ಮುಂದಿನ ದಿನಗಳಲ್ಲಿ ಅವರು ಮಾಡುವ ಸಂಗೀತದ ಎಲ್ಲ ಪ್ರಾಕಾರಗಳಿಗೆ ತಾನು ಹಾರ್ದಿಕವಾಗಿ ಸಹಕರಿಸುತ್ತೇನೆ ಎಂದು ಹೇಳಿದರಲ್ಲದೇ ಡಾ. ಸಂಪದ ಭಟ್ಟ ಮರಬಳ್ಳಿ ಮತ್ತು ಪ್ರಕಾಶ್ ಮರಬಳ್ಳಿ ಇವರಿಗೆ ಕಾಣಿಕೆ ನೀಡುವುದರ ಮೂಲಕ ಆಶೀರ್ವದಿಸಿದರು.

  ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್, ಚಲನಚಿತ್ರ ನಟರಾದ ರಾಮಕೃಷ್ಣ, ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ್, ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ದತ್ತಣ್ಣ ಮತ್ತು ನಟಿ ಗಿರಿಜಾ ಲೋಕೇಶ್ ಮುಂತಾದ ಗಣ್ಯರು ಸ್ವರಸಂಪದ ತಂಡಕ್ಕೆ ಶುಭ ಹಾರೈಸಿದರು.

  ಡಾ. ಸಂಪದ ಭಟ್ಟ ಮರಬಳ್ಳಿಯವರ ಸಂಗೀತದ ಗುರುಗಳಲ್ಲೊಬ್ಬರಾದ ಹೊನ್ನಾವರದ ಪಂ. ಜಿ ಆರ್.ಭಟ್ಟರವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದ್ದಲ್ಲದೇ ಗುರುಕಾಣಿಕೆಯನ್ನು ಸಮರ್ಪಿಸಲಾಯಿತು. ಅಧ್ಯಕ್ಷತೆಯನ್ನು ಕಾಸರಗೋಡು ಚಿನ್ನಾರವರು ವಹಿಸಿದರು. (ಒನ್ಇಂಡಿಯಾ ಕನ್ನಡ)

  English summary
  Kannada actor Pranaya Raja Dr.Srinath inaugurates 'Swara Sampada' for lights the lamp at Kannada Bhavana. If anyone practice music patiently definitely it'll knuckle down says Srinath. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X