»   » ತುಮಕೂರು, ಮೈಸೂರಲ್ಲಿ 'ಡಿಕೆ' ಆಡಿಯೋ ಸಂಭ್ರಮ

ತುಮಕೂರು, ಮೈಸೂರಲ್ಲಿ 'ಡಿಕೆ' ಆಡಿಯೋ ಸಂಭ್ರಮ

Posted By:
Subscribe to Filmibeat Kannada

ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಅಭಿನಯದ 'ಡಿಕೆ' ಚಿತ್ರ ಆರಂಭದಿಂದಲೂ ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರದ ಆಡಿಯೋ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಇದೇ ಡಿಸೆಂಬರ್ 11ರಂದು ತುಮಕೂರು, ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಆಡಿಯೋ ಬಿಡುಗಡೆ ಮಾಡಲಾಗುತ್ತಿದೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಒಂದು ಹಾಡಂತೂ ಸಿಕ್ಕಾಪಟ್ಟೆ ವಿವಾದ ಆಗುವ ಸಾಧ್ಯತೆಗಳೂ ಇವೆ. ಈ ಹಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕರುಣಾನಿಧಿ, ಜಯಲಲಿತಾ ಹೆಸರುಗಳೂ ಇರುವುದೇ ಇದಕ್ಕೆ ಕಾರಣ. ಇದೊಂದು ಸಿಚ್ಯುಯೇಷನಲ್ ಸಾಂಗ್ ಅಷ್ಟೇ ಎನ್ನುತ್ತಾರೆ ಪ್ರೇಮ್. [ಮಗ ಸೂರ್ಯ, ಪತ್ನಿ ರಕ್ಷಿತಾ ಜತೆ ಪ್ರೇಮ್ ಸ್ಟೆಪ್]

Prem's DK

ಜನವರಿ 2ರಂದು ಅರಮನೆ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ 'ಡಿಕೆ' ಆಡಿಯೋ ಬಿಡುಗಡೆ ಮಾಡಲಾಗುತ್ತದೆ. ಅದಕ್ಕೂ ಮುನ್ನ ಡಿಸೆಂಬರ್ 11ರಂದು ಬೆಳಗ್ಗೆ 10.30ಕ್ಕೆ ಮೆಜೆಸ್ಟಿಕ್ ನ ಅಣ್ಣಮ್ಮ ದೇವಿ ದೇವಸ್ಥಾನದ ಬಳಿ ಆಡಿಯೋ ಬಿಡುಗಡೆಯಾಗುತ್ತಿದೆ.

ಅಲ್ಲಿಂದ ತುಮಕೂರು, ಮಂಡ್ಯ ಹಾಗೂ ಮೈಸೂರಿನಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಆಡಿಯೋ ಬಿಡುಗಡೆ ಮಾಡಲಾಗುತ್ತದೆ. ವಿಶೇಷವೆಂದರೆ ಈ ಚಿತ್ರದಲ್ಲಿ ರಕ್ಷಿತಾ ಮತ್ತು ಪ್ರೇಮ್ ಪುತ್ರ ಸೂರ್ಯ ಪಿ ಗೌಡ ಕೂಡಾ ಸ್ಟೆಪ್ ಹಾಕಿದ್ದಾನೆ.

'ಡಿ ಕೆ' ಚಿತ್ರದ ಮುಹೂರ್ತದ ದಿನ ಕಪಾಲಿ ಚಿತ್ರಮಂದಿರದಲ್ಲಿ ಟ್ರೇಲರ್ ಸಹ ಬಿಡುಗಡೆ ಆಗಿತ್ತು. ಈ ಚಿತ್ರದಿಂದ ಉದಯ ಪ್ರಕಾಶ್ ಅವರು ವಿಜಯ್ ಹಂಪಳಿ ಎಂದು ಹೊಸ ಹೆಸರನ್ನು ನಾಮಕರಣ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ ಜೊತೆಗೆ ಸಂಭಾಷಣೆಯನ್ನೂ ಒದಗಿಸಿದ್ದಾರೆ.

Prem's DK2

ತುಮಕೂರು ಜಿಲ್ಲೆಯ ಸುದರ್ಶನ್ ಅವರು ಅವರು ಮೂರು ಹಾಡುಗಳನ್ನು ರಚಿಸಿದ್ದಾರೆ. ಆನಂದ್, ಮಾಸ್ ಮಾಧ, ಶ್ರೀನಿವಾಸ್ ಪಿ ಬಾಬು, ನಾಗೇಶ್, ಪ್ರಭು, ಭದ್ರಿ, ಡ್ಯಾನಿ, ಬಾಬು, ಸೋಮು, ಮಂಜು, ರವಿ ತಾಂತ್ರಿಕ ವರ್ಗದಲ್ಲಿ ಹಾಗೂ ಸಹಾಯಕರಾಗಿ ಜೊತೆಯಾಗಿದ್ದಾರೆ.

"ಆಬ್ ಕಿ ಬಾರ್ ಮೇರೆ ಸರ್ಕಾರ್" ಎನ್ನುವ 'ಡಿ ಕೆ' ಚಿತ್ರವನ್ನು ಜೆಜೆ ಸಿನಿ ಪ್ರೊಡಕ್ಷನ್ ನ ಗ್ಲೆನ್ ಡಿಯಸ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ. ಪ್ರೇಮ್ ಅವರಿಗೆ ಚೈತ್ರ ಜೋಡಿಯಾಗಿ ನಟಿಸಿದ್ದಾರೆ. ಮಾತ್ರವಲ್ಲದೆ, ಶೋಭರಾಜ್, ಶರತ್ ಲೋಹಿತಾಶ್ವ, ಋಷಿಕುಮಾರ ಸ್ವಾಮೀಜಿ ಹಾಗೂ ಇತರರು ತಾರಾ ಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Prem's ‘DK’ audio release on 11th of December at Tumkuru, Mysuru, Mandya and Bengaluru. The movie has five songs from music director Arjun Janya. The audio CD will be released On 11th of December at 10.30 am in front of the temple of Annamma Devi in Majestic, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada