'ನಿನ್ನಿಂದಲೇ' ಆಡಿಯೋ ರಿಲೀಸ್ಗೆ ಮಹೇಶ್ ಬಾಬು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರ ದಿನೇ ದಿನೇ ಸುದ್ದಿ ಮಾಡ್ತಾ ಇದೆ. ಚಿತ್ರದಲ್ಲಿ ತೆಲುಗು ಕಾಮಿಡಿ ನಟ ಬ್ರಹ್ಮಾನಂದಮ್ ನಟಿಸ್ತಾರೆ ಅನ್ನೋ ಸುದ್ದಿಯನ್ನ ನಾವೇ ನಿಮ್ಗೆ ತಿಳಿಸಿದ್ವಿ. ಈಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು 'ನಿನ್ನಿಂದಲೇ' ಚಿತ್ರದ ಆಡಿಯೋ ರಿಲೀಸ್ ಮಾಡೋ ಸುದ್ದಿ ಬಂದಿದೆ.
'ನಿನ್ನಿಂದಲೇ' ಚಿತ್ರದ ನಂತರ ಮಹೇಶ್ ಬಾಬು ಅಭಿನಯದ 'ದೂಕುಡು' ಚಿತ್ರದ ರೀಮೇಕ್ ನಲ್ಲಿ ಪುನೀತ್ ನಟಿಸುತ್ತಿದ್ದು ಈಗ ಪುನೀತ್ ಅವರ 'ನಿನ್ನಿಂದಲೇ' ಚಿತ್ರದ ಆಡಿಯೋ ರಿಲೀಸ್ ಗೆ ಮಹೇಶ್ ಬಾಬು ಬೆಂಗಳೂರಿಗೆ ಬರ್ತಿದ್ದಾರೆ. ['ನಿನ್ನಿಂದಲೇ' ಚಿತ್ರದಲ್ಲಿ ಗಿನ್ನಿಸ್ ದಾಖಲೆಯ ಹಾಸ್ಯನಟ]

ತೆಲುಗಿನ ಯಶಸ್ವಿ ನಿರ್ದೇಶಕ ಜಯಂತ್ ಪರಾಂಜೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಈ ಚಿತ್ರದ ಬಗ್ಗೆ ಮಾತನಾಡಿರುವ ಜಯಂತ್, "ಈ ಚಿತ್ರವನ್ನು ಹಿಂದಿಯಲ್ಲಿ ಮಾಡಬೇಕು ಎಂದುಕೊಂಡಿದ್ದೆ. ಆದರೆ ಪುನೀತ್ ಗೆ ಕಥೆ ಹೇಳಿದಾಗ ಅವರು ಕೂಡಲೆ ಒಪ್ಪಿಕೊಂಡರು".
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ವಿಜಯ್ ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಅಮೆರಿಕಾದಲ್ಲಿ ನೆಲೆನಿಂತ ಭಾರತೀಯ ಕುಟುಂಬ, ಅಲ್ಲಿಗೆ ಬರುವ ಮತ್ತೊಂದು ಕುಟುಂಬದ ನಡುವಿನ ಕಥಾಹಂದರವನ್ನು 'ನಿನ್ನಿಂದಲೇ' ಒಳಗೊಂಡಿದೆ.
ಬಹುತೇಕ ಭಾಗದ ಚಿತ್ರೀಕರಣ ನ್ಯೂಯಾರ್ಕ್ ನಲ್ಲಿ ನಡೆದಿದೆ. ಕೊನೆಯ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಯಲಿದೆ. ಮಣಿಶರ್ಮ ಸಂಗೀತವುಳ್ಳ ಚಿತ್ರವನ್ನು ಕ್ರಿಸ್ಮಸ್ ಅಥವಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದಾರೆ. ಎರಿಕಾ ಫರ್ನಾಂಡೀಸ್ ಚಿತ್ರದ ನಾಯಕಿ.


Click it and Unblock the Notifications











