»   » 'ಪಿ ಆರ್ ಕೆ' ಪ್ರೊಡಕ್ಷನ್ಸ್ ನಲ್ಲಿ ಹೊಸಬರ ಸಿನಿಮಾಗಳು

'ಪಿ ಆರ್ ಕೆ' ಪ್ರೊಡಕ್ಷನ್ಸ್ ನಲ್ಲಿ ಹೊಸಬರ ಸಿನಿಮಾಗಳು

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಈಗಾಗಲೇ ಎರಡು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಒಂದು ಚಿತ್ರದಲ್ಲಿ ಹೊಸಬರಿಗೆ ಅವಕಾಶ ಕೊಟ್ಟರೆ ಮತ್ತೊಂದು ಚಿತ್ರದಲ್ಲಿ ಪ್ರತಿಭಾನ್ವಿತರಿಗೆ ನಿರ್ದೇಶನಕ್ಕೆ ಚಾನ್ಸ್ ಕೊಟ್ಟಿದ್ದಾರೆ ಪುನೀತ್ ರಾಜ್ ಕುಮಾರ್. ಸದ್ಯದ ವಿಚಾರ ಅಂದರೆ ಮತ್ತೆರೆಡು ಸಿನಿಮಾಗಳಿಗೆ ಪವರ್ ಸ್ಟಾರ್ ಸಪೋರ್ಟ್ ಮಾಡುತ್ತಿದ್ದಾರೆ.

ಹೊಸ ಚಿತ್ರಗಳಾದ 'ಯಾನ' ಹಾಗೂ '6 ನೇ ಮೈಲಿ' ಸಿನಿಮಾದ ಆಡಿಯೋಗಳನ್ನ ಪಿ ಆರ್ ಕೆ ಆಡಿಯೋ ಕಂಪನಿ ಖರೀದಿ ಮಾಡಿದೆ. ಪಿ ಆರ್ ಕೆ ಆಡಿಯೋ ಕಂಪನಿ ಆರಂಭ ಆದಾಗ ಮೊದಲಿಗೆ ಅಂಜನಿಪುತ್ರ ಹಾಗೂ ಟಗರು ಸಿನಿಮಾ ಬಿಟ್ಟರೆ ಇನ್ಯಾವುದೇ ಸಿನಿಮಾಗಳ ಆಡಿಯೋ ಹಕ್ಕನ್ನು ಖರೀದಿ ಮಾಡಿರಲಿಲ್ಲ.

PRK Audio Company purchased Yana and 6th mile audio rights

ಪುನೀತ್ ಹಾಡಿದ್ರೆ ಆ ಸಾಂಗ್ ಹಿಟ್: ಇನ್ನೊಂದು ಹೊಸ ಹಾಡು ಕೇಳಿ.!

ಇದೇ ಮೊದಲ ಬಾರಿಗೆ ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ 'ಯಾನ' ಸಿನಿಮಾದ ಹಾಡುಗಳ ಹಕ್ಕನ್ನು ಹಾಗೂ ಸಂಚಾರಿ ವಿಜಯ್ ಅಭಿನಯದ 6 ನೇ ಮೈಲಿ ಆಡಿಯೋ ರೈಟ್ಸ್ ಖರೀದಿಸಿದೆ. ಈ ಮೂಲಕ ಒಳ್ಳೆಯ ಸಂಗೀತವಿರುವ ಚಿತ್ರಗಳಿಗೆ ಪಿ ಆರ್ ಕೆ ಆಡಿಯೋ ಕಡೆಯಿಂದ ಬೆಂಬಲವಿದೆ ಎನ್ನುವುದನ್ನ ತಿಳಿಸುತ್ತಿದೆ.

6 ನೇ ಮೈಲಿ ಸಿನಿಮಾದಲ್ಲಿ ಸಂಚಾರಿ ವಿಜಿ ನಾಯಕನಾಗಿ ಅಭಿನಯಿಸುತ್ತಿದ್ದು ಆರ್ ಜೆ ನೇತ್ರಾ, ಹೇಮಂತ್ , ಇನ್ನು ಅನೇಕರು ಅಭಿನಯಿಸಿದ್ದಾರೆ. ಟ್ರಕ್ಕಿಂಗ್ ಕ್ರೈಂ-ಥ್ರಿಲ್ಲರ್ ಕಥೆಯನ್ನ ಚಿತ್ರವನ್ನಾಗಿ ತೆರೆ ಮೇಲೆ ತರುತ್ತಿದ್ದಾರೆ ನಿರ್ದೇಶಕ ಸೀನಿ.

PRK Audio Company purchased Yana and 6th mile audio rights

ಸ್ವೀಟಿ ಸಿನಿಮಾದ ನಂತರ ವಿಜಯಲಕ್ಷ್ಮೀ ಸಿಂಗ್ ನಿರ್ದೇಶನದ ಸಿನಿಮಾ ಯಾನ ತಮ್ಮ ಮೂವರು ಪುತ್ರಿಯರನ್ನ ನಾಯಕಿಯರನ್ನಾಗಿ ಇಂಟ್ರಡ್ಯೂಸ್ ಮಾಡುತ್ತಿರುವ ವಿಜಯಲಕ್ಷ್ಮೀ ಸಿಂಗ್ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.

English summary
PRK Audio Company has purchased the audio rights of the Kannada films Yana and the 6th mile, Yana Film directed by Vijayalakshmi Singh, 6th mile directed by a srini.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X