For Quick Alerts
  ALLOW NOTIFICATIONS  
  For Daily Alerts

  ಗಂಧದ ಗುಡಿ ಚಿತ್ರದ 'ಅಲೆಯ ಕರೆ' ವಿಡಿಯೊ ಸಾಂಗ್ ಬಿಡುಗಡೆ; ನೇತ್ರಾಣಿ ಅಂಡರ್‌ವಾಟರ್‌ನ ಸುಂದರ ಚಿತ್ರಣ

  |

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಅಂತಿಮ ಚಿತ್ರ 'ಗಂಧದ ಗುಡಿ' ಚಿತ್ರಮಂದಿರಗಳಲ್ಲಿ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದೆ. ಅಪ್ಪು ಕೊನೆಯ ಚಿತ್ರ ಎಂಬ ಕಾರಣದಿಂದ ಮಾತ್ರವಲ್ಲದೇ ತನ್ನಲ್ಲಿನ ಕಂಟೆಂಟ್‌ನಿಂದ ವೀಕ್ಷಕರ ಗಮನ ಸೆಳೆದಿರುವ ಗಂಧದ ಗುಡಿ ಚಿತ್ರವನ್ನು ವೀಕ್ಷಿಸಲು ಫ್ಯಾಮಿಲಿ ಆಡಿಯನ್ಸ್ ಹಾಗೂ ಶಾಲಾ ಮಕ್ಕಳು ಮುಗಿಬಿದ್ದಿದ್ದಾರೆ.

  ಇನ್ನು ಚಿತ್ರದ ಅಲೆಯ ಕರೆ ವಿಡಿಯೊ ಹಾಡನ್ನು ಚಿತ್ರತಂಡ ಇಂದು ( ನವೆಂಬರ್ 15 ) ಪಿಆರ್‌ಕೆ ಯುಟ್ಯೂಬ್ ಹಾಡಿನಲ್ಲಿ ಬಿಡುಗಡೆ ಮಾಡಿದೆ. ಅಲ್ಲೇ ಆದಿ ಜೀವಜಾಲ ಎಂಬ ಸಾಲುಗಳಿಂದ ಶುರುವಾಗುವ ಈ ಹಾಡು ಚಿತ್ರ ವೀಕ್ಷಿಸಿದ್ದ ಸಿನಿ ಪ್ರೇಕ್ಷಕರನ್ನು ಕಾಡಿತ್ತು. ಸದ್ಯ ಯುಟ್ಯೂಬ್‌ನಲ್ಲಿ ಹಾಡನ್ನು ವೀಕ್ಷಿಸಿದ ನೆಟ್ಟಿಗರು ಸಹ ಹಾಡಿಗೆ ಮನ ಸೋತಿದ್ದಾರೆ.

  ಹಾಡಿನ ಪೂರ್ತಿ ಮುರುಡೇಶ್ವರದ ಬಳಿ ಇರುವ ನೇತ್ರಾಣಿ ದ್ವೀಪದ ಸುಂದರ ದೃಶ್ಯಗಳಿದ್ದು, ಪ್ರತಿ ದೃಶ್ಯ ಕೂಡ ರಿಚ್ ಆಗಿ ಮೂಡಿಬಂದಿದೆ. ಇನ್ನು ನೇತ್ರಾಣಿಯ ಅತಿಮುಖ್ಯವಾದ ಸ್ಕೂಬಾ ಡೈವಿಂಗ್‌ನಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಅಮೋಘವರ್ಷ ಭಾಗವಹಿಸಿದ್ದು, ಅಂಡರ್‌ವಾಟರ್‌ ಶೂಟ್ ಮೂಲಕ ಇಲ್ಲಿನ ಇಲ್ಲಿನ ಜಲಚರಗಳು, ಸಮುದ್ರದಾಳದ ವಿಸ್ಮಯಗಳನ್ನು ಅತ್ಯದ್ಭುತವಾಗಿ ತೋರಿಸಲಾಗಿದೆ.

  ಹಾಡಿನಲ್ಲಿನ ಪ್ರತೀಕ್ ಶೆಟ್ಟಿ ಕ್ಯಾಮೆರಾ ಕೆಲಸಕ್ಕೆ ನೋಡುಗರು ಮನಸೋತಿದ್ದು, ಇದನ್ನು ಪ್ರತಿಯೊಬ್ಬರೂ ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಅನುಭವಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಾಡಿನ ಮತ್ತೊಂದು ಹೈಲೈಟ್‌ ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನ. ಹಾಡಿಗೆ ಅಮೋಘವರ್ಷ ಹಾಗೂ ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದಾರೆ.

  English summary
  Puneeth Rajkumar Gandhada Gudi's Aleya Kare video song is out now. Take a look
  Tuesday, November 15, 2022, 20:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X