»   » 'ರಾಂಬೋ 2' ಹಾಡಿಗೆ ಪವರ್ ಕೊಟ್ಟ ಪುನೀತ್ ರಾಜ್ ಕುಮಾರ್

'ರಾಂಬೋ 2' ಹಾಡಿಗೆ ಪವರ್ ಕೊಟ್ಟ ಪುನೀತ್ ರಾಜ್ ಕುಮಾರ್

Posted By:
Subscribe to Filmibeat Kannada
ರಾಂಬೊ 2 ಸಿನಿಮಾಗೆ ಗಾಯಕನಾದ ನಟ ಪುನೀತ್ ರಾಜ್ ಕುಮಾರ್ | Filmibeat Kannada

'ರಾಂಬೋ 2' ಸಿನಿಮಾ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಸಿನಿಮಾದ ನಾಲ್ಕು ಹಾಡುಗಳು ಸದ್ಯ ಬಿಡುಗಡೆಯಾಗಿದ್ದು, ಆ ನಾಲ್ಕೂ ಹಾಡುಗಳು ಯೂಟ್ಯೂಬ್ ನಲ್ಲಿ ಸಂಚಲನವನ್ನು ಉಂಟು ಮಾಡಿದೆ. ಈಗಾಗಲೇ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ 'ರಾಂಬೋ 2' ಸಿನಿಮಾದ ಆಡಿಯೋಗೆ ಈಗ ಹೊಸ ಪವರ್ ಬಂದಿದೆ.

1 ಮಿಲಿಯನ್ ಹೃದಯ ಗೆದ್ದ ರಾಂಬೋ 2 ಚಿತ್ರದ 'ಚುಟ್ಟು ಚುಟ್ಟು..' ಹಾಡು

'ರಾಂಬೋ 2' ಸಿನಿಮಾದ ವಿಶೇಷ ಹಾಡಿಗೆ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಈ ವಿಷಯವನ್ನು ಸಂಗೀತ ನಿರ್ದೇಶನ ಅರ್ಜುನ್ ಜನ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಡಿನ ರೆಕಾರ್ಡಿಂಗ್ ವೇಳೆ ಅರ್ಜುನ್ ಜನ್ಯ, ಪುನೀತ್ ರಾಜ್ ಕುಮಾರ್, ನಿರ್ದೇಶಕ ಅನಿಲ್ ಮತ್ತು ಚಿತ್ರದ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಇನ್ನು ಶರಣ್ ಹಾಡಿಗೆ ಪುನೀತ್ ಧ್ವನಿ ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ 'ಅಧ್ಯಕ್ಷ' ಸಿನಿಮಾದ ಟೈಟಲ್ ಹಾಡನ್ನು ಪುನೀತ್ ಹಾಡಿದ್ದರು, ಅಷ್ಟೆ ಸೊಗಸಾಗಿ ಶರಣ್ ಹಾಡಿಗೆ ಹೆಜ್ಜೆ ಹಾಕಿದ್ದರು. ಆ ಹಾಡು ಸೂಪರ್ ಹಿಟ್ ಆಗಿತ್ತು.

Puneeth Rajkumar Sings for Rambo 2 kannada movie

ಅಂದಹಾಗೆ, 'ರಾಂಬೋ' ಸಿನಿಮಾದ ಯಶಸ್ವಿನ ಬಳಿಕ 'ರಾಂಬೋ 2' ಹೆಸರಿನಲ್ಲಿ ಶರಣ್ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶರಣ್ ಜೋಡಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಉಳಿದ ಹಾಡುಗಳಿಗೆ ಮೆಹಬೂಬ್ ಸಾಬ್ (ಸರಿಗಮಪ), ಅಧಿತಿ ಸಾಗರ್ (ಅರುಣ್ ಸಾಗರ್ ಪುತ್ರಿ), ವಿಜಯ ಪ್ರಕಾಶ್, ಶಮಿತಾ ಮಲ್ನಾಡ್, ರವೀಂದ್ರ ಸೊಗರ್ವಿ ಧ್ವನಿಯಾಗಿದ್ದಾರೆ.

English summary
Power Star Puneeth Rajkumar Sings for Kannada actor Sharan's Rambo 2 kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X