»   » ಅನಿಶ್ ಗಾಗಿ ಮತ್ತೆ ಹಾಡಿದ ಪವರ್ ಸ್ಟಾರ್

ಅನಿಶ್ ಗಾಗಿ ಮತ್ತೆ ಹಾಡಿದ ಪವರ್ ಸ್ಟಾರ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಅನಿಶ್ ಸಿನಿಮಾದಲ್ಲಿ ಹಾಡಿದ್ದಾರೆ. ಟೈಟಲ್ ಮತ್ತು ಟೀಸರ್ ನಿಂದ ಸಾಕಷ್ಟು ಸುದ್ದಿ ಮಾಡಿದ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾಗೆ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ .ಅಕಿರ ಸಿನಿಮಾದ ನಂತರ ಮತ್ತೆ ಪುನೀತ್ ರಾಜ್ ಕುಮಾರ್ ರೊಮ್ಯಾಂಟಿಕ್ ಸಾಂಗ್ ಅನ್ನು ಹಾಡಿದ್ದಾರೆ .

ಕಿರಣ್ ಕಾವೇರಪ್ಪ ಬರೆದಿರುವ ಸಾಹಿತ್ಯಕ್ಕೆ ಪುನೀತ್ ರಾಜ್ ಕುಮಾರ್ ಹಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರವನ್ನು ಅಜಿತ್ವಾಸನ್ ಉಗ್ಗಿನಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅನೀಶ್ ನಾಯಕನಾಗಿ ಅಭಿನಯಿಸಿದೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಅಭಿನಯ ಮಾಡಿದ್ದಾರೆ.

ಅಕಿರ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ್ದ ಹಾಡು ಸಾಕಷ್ಟು ಹಿಟ್ ಆಗಿತ್ತು ಈಗ ಅದೇ ಸಾಲಿಗೆ ರಂಗೇರಿದೆ ಹಾಡು ಸೇರುವ ಎಲ್ಲ ಸೂಚನೆ ಸಿಕ್ಕಿದೆ.

Puneeth Rajkumar sings for Vaasu Naan Pakka comarcial

ಹಾಡಿನ ಲಿರಿಕಲ್ ವಿಡಿಯೋ ಜೊತೆ ಮೇಕಿಂಗ್ ಕೂಡ ಬಿಡುಗಡೆ ಮಾಡಿದೆ ಚಿತ್ರತಂಡ .ಪವರ್ ಸ್ಟಾರ್ ಜೊತೆಯಲ್ಲಿ ಸಿ ಆರ್ ಬಾಬಿ ಕೂಡ ಹಾಡಿಗೆ ಧ್ವನಿಯಾಗಿದ್ದಾರೆ.

Puneeth Rajkumar sings for Vaasu Naan Pakka comarcial

ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ರಂಗೇರಿದೆ ಹಾಡನ್ನು ನಾರ್ವೆ ಹಾಗೂ ಸ್ವೀಡನ್ನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ .ಒಂದೊಂದೇ ಹಾಡಿನ ಮೇಕಿಂಗ್ ಅನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾ ತಂಡ ವಿಭಿನ್ನವಾದ ರೀತಿಯಲ್ಲಿ ಚಿತ್ರ ಪ್ರಮೋಷನ್ ಮಾಡುತ್ತಿದೆ. ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾ ತಂಡ ಆದಷ್ಟು ಬೇಗ ಚಿತ್ರವನ್ನು ತೆರೆ ಮೇಲೆ ತರಲಿದ್ದಾರೆ.

English summary
Upcoming Kannada film Vaasu Naan Pakka comarcial , starring Anish and Nishvitha Naidu has got itself a new star backing the project with his voice. Kannada star Puneeth Rajkumar took time off to record a romantic number that was shot in Norway .

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X