»   » 'ಕೃಷ್ಣ-ಲೀಲಾ' ಹಾಡಿಗೆ ಪವರ್ ಸ್ಟಾರ್ ಪುನೀತ್ ಧ್ವನಿ

'ಕೃಷ್ಣ-ಲೀಲಾ' ಹಾಡಿಗೆ ಪವರ್ ಸ್ಟಾರ್ ಪುನೀತ್ ಧ್ವನಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಾಲ ಕಲಾವಿದನಾಗಿದ್ದಾಗಲೇ ಗಾಯಕರಾಗಿ ಗುರುತಿಸಿಕೊಂಡವರು. 'ಚಲಿಸುವ ಮೋಡಗಳು' (ಕಾಣದಂತೆ ಮಾಯವಾದನು ಹಾಡು), 'ಬೆಟ್ಟದ ಹೂವು' (ಬಿಸಿಲೇ ಬರಲಿ ಮಳೆಯೇ ಬರಲಿ...) ಚಿತ್ರಗಳಲ್ಲಿ ಹಾಡಿ ಚಿತ್ರರಸಿಕರನ್ನು ರಂಜಿಸಿದವರು.

ಅವರು ಪೂರ್ಣ ಪ್ರಮಾಣದ ನಾಯಕರಾದ ಮೇಲೂ ತಮ್ಮ ಕಂಠಸಿರಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. 'ಅಪ್ಪು' (2001) ಚಿತ್ರದಿಂದ ಆರಂಭವಾದ ಅವರ ಹಾಡುಗಾರಿಗೆ ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ಅರಸು...ಹೀಗೆ ಇದೀಗ ಚಿತ್ರೀಕರಣ ಭರದಿಂದ ಸಾಗಿರುವ 'ರಣ ವಿಕ್ರಮ'ದವರೆಗೂ ಮುಂದುವರೆದಿದೆ. ['ರಣವಿಕ್ರಮ' ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್]


ಕೇವಲ ತಮ್ಮ ಚಿತ್ರಗಳಿಗಷ್ಟೇ ಅಲ್ಲದೆ ಬೇರೆಯವರ ಚಿತ್ರಗಳಿಗೂ ತಮ್ಮ ಕಂಠ 'ದಾನ' ಮಾಡುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಕೃಷ್ಣ ಅಜಯ್ ರಾವ್ ಮುಖ್ಯಭೂಮಿಕೆಯಲ್ಲಿರುವ 'ಕೃಷ್ಣ ಲೀಲಾ' ಚಿತ್ರಕ್ಕೂ ಒಂದು ಹಾಡನ್ನು ಹಾಡಿದ್ದಾರೆ.

ಅಜಯ್ ರಾವ್ ಚೊಚ್ಚಲ ನಿರ್ಮಾಣದ ಶ್ರೀ ಕೃಷ್ಣ ಆಟ್ರ್ಸ್ & ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ‘ಬಚ್ಚನ್' ನಂತರ, ಶಶಾಂಕ್ ನಿರ್ದೇಶಿಸುತ್ತಿರುವ ಅದ್ದೂರಿ ಚಿತ್ರ 'ಕೃಷ್ಣ-ಲೀಲಾ'. ಚಿತ್ರದ ಒಂದು ವಿಶೇಷವಾದ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಧ್ವನಿ ನೀಡುವುದರ ಜೊತೆಗೆ ವಿಶೇಷವಾದ ಪ್ರಶಂಸೆಯನ್ನೂ ವ್ಯಕ್ತಪಡಿಸಿದ್ದಾರೆ.

Puneeth Rajkumar

ಇತ್ತೀಚೆಗೆ ಆಕಾಶ್ ಸ್ಟುಡಿಯೋದಲ್ಲಿ ನಡೆದ ಹಾಡಿನ ಧ್ವನಿಮುದ್ರಣ ಕಾರ್ಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಸಹ ಉಪಸ್ಥಿತರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು. 'ಕೃಷ್ಣ-ಲೀಲಾ' ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಎರಡು ಹಾಡುಗಳು ಮಾತ್ರ ಬಾಕಿ ಉಳಿದಿವೆ.

ವಿ.ಶ್ರೀಧರ್ ಸಂಗೀತವಿರುವ ಈ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿವೆ. ಚಿತ್ರದ ತಾರಾಬಳಗದಲ್ಲಿ ನಾಯಕ ಅಜಯ್ ರಾವ್, ನಾಯಕಿ ಮಯೂರಿ ಜೊತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಶೋಬಾ ರಾಜ್, ತಬಲಾನಾಣಿ, ಬುಲೆಟ್ ಪ್ರಕಾಶ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar sung a song for Ajay Rao starrer 'Krishna Leela' being directed by Shashank. Sridhar Sambhram has composed the songs of the film and Raghavendra Rajkumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada