»   » ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!

ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ 'ರಾಜಕುಮಾರ'ನ ಬೊಂಬೆ.!

Posted By:
Subscribe to Filmibeat Kannada

ಕರ್ನಾಟಕ ರಾಜ್ಯದ ಮೂಲೆಮೂಲೆಯಲ್ಲೂ 'ರಾಜಕುಮಾರ'ನ ರಾಜ್ಯಭಾರ ಜೋರಾಗಿ ನಡೆಯುತ್ತಿದೆ. ಕಮರ್ಶಿಯಲ್ ಎಂಟರ್ ಟೇನ್ಮೆಂಟ್ ಜೊತೆಗೆ ಉತ್ತಮ ಸಂದೇಶ ಇರುವ ಪುನೀತ್ ರಾಜ್ ಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಸಿನಿಮಾ ಫ್ಯಾಮಿಲಿ ಪ್ರೇಕ್ಷಕರನ್ನ ಹೆಚ್ಚಾಗಿ ಸೆಳೆಯುತ್ತಿದೆ.

ಕಲೆಕ್ಷನ್ ವಿಚಾರದಲ್ಲಿ ರೆಕಾರ್ಡ್ ಮೇಲೆ ರೆಕಾರ್ಡ್ ಕ್ರಿಯೇಟ್ ಮಾಡುತ್ತಿರುವ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ.. ನೀನೇ ರಾಜಕುಮಾರ' ಹಾಡು ಕೂಡ ಯೂಟ್ಯೂಬ್ ನಲ್ಲಿ ಹೊಸ ದಾಖಲೆ ಬರೆದಿದೆ.[ದಾಖಲೆಗಳನ್ನೆಲ್ಲ ಬೆಚ್ಚಿಬೀಳಿಸಿದ ರಾಜರತ್ನ 'ರಾಜಕುಮಾರ']

'Raajakumara' making video creates new record in Youtube

'ರಾಜಕುಮಾರ' ಚಿತ್ರದ ಮೇಕಿಂಗ್ ತುಣುಕುಗಳಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ 'ಬೊಂಬೆ ಹೇಳುತೈತೆ' ಹಾಡಿನ ಆಡಿಯೋ ಮ್ಯಾಚ್ ಮಾಡಿ ಮಾರ್ಚ್ 9 ರಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು.

ಇಲ್ಲಿಯವರೆಗೂ 'ರಾಜಕುಮಾರ' ಚಿತ್ರದ ಮೇಕಿಂಗ್ ('ಬೊಂಬೆ ಹೇಳುತೈತೆ..' ಆಡಿಯೋ) ವಿಡಿಯೋಗೆ 5,389,180 ವ್ಯೂ ಲಭಿಸಿದೆ. ಸ್ಯಾಂಡಲ್ ವುಡ್ ಮಟ್ಟಿಗೆ ಒಂದು ಮೇಕಿಂಗ್ ವಿಡಿಯೋಗೆ ಇಷ್ಟೊಂದು ರೆಸ್ಪಾನ್ಸ್ ಸಿಕ್ಕಿರುವುದು ಇದೇ ಮೊದಲು. ಇದು ಒನ್ಸ್ ಅಗೇನ್ 'ಬೊಂಬೆ' ಮ್ಯಾಜಿಕ್ ಅಂದ್ರೆ ಖಂಡಿತ ತಪ್ಪಾಗಲ್ಲ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

ಬರೀ 'ಬೊಂಬೆ' ಹಾಡು ಮಾತ್ರ ಅಲ್ಲ. 'ರಾಜಕುಮಾರ' ಟ್ರೈಲರ್, 'ಅಪ್ಪು ಡ್ಯಾನ್ಸ್' ವಿಡಿಯೋ ಸಾಂಗ್ ಕೂಡ ಯೂಟ್ಯೂಬ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ನೀವಿನ್ನೂ 'ರಾಜಕುಮಾರ' ಚಿತ್ರದ ಮೇಕಿಂಗ್ ವಿಡಿಯೋ ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡಿಕೊಳ್ಳಬೇಡಿ....

English summary
'Raajakumara' making video with 'Bombe helutaithe..' audio created a new record in Youtube.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada