For Quick Alerts
  ALLOW NOTIFICATIONS  
  For Daily Alerts

  'ZOOಮ್' ಚಿತ್ರಕ್ಕೆ 'ಗಾನ ಕೋಗಿಲೆ' ಆದರು ನಟಿ ರಾಧಿಕಾ ಪಂಡಿತ್!

  By Harshitha
  |

  ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹತ್ತು ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ಸ್ ನೀಡುತ್ತಾ ಬಂದಿರುವ ಮುದ್ದು ಮುಖದ ಚೆಲುವೆ ನಟಿ ರಾಧಿಕಾ ಪಂಡಿತ್ ಇದೀಗ ನಟನೆಯಿಂದ ಒಂದು ಸ್ಟೆಪ್ ಮೇಲಕ್ಕೆ ಹೋಗಿದ್ದಾರೆ.

  ತಾವು ಅಭಿನಯಿಸುತ್ತಿರುವ 'ZOOಮ್' ಚಿತ್ರದಲ್ಲಿ ನಟಿ ರಾಧಿಕಾ ಪಂಡಿತ್ ಗಾನ ಸುಧೆಯನ್ನ ಹರಿಸಿದ್ದಾರೆ. ನೀವು ನಂಬಲ್ಲ ಅಂದ್ರೆ, ರಾಧಿಕಾ ಪಂಡಿತ್ ಮೈಕ್ ಮುಂದೆ ನಿಂತಿರುವ ಈ ಫೋಟೋ ನೋಡಿ...

  ಗೋಲ್ಟನ್ ಸ್ಟಾರ್ ಗಣೇಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಆಗಿ ನಟಿಸುತ್ತಿರುವ 'ZOOಮ್' ಚಿತ್ರಕ್ಕಾಗಿ ರಾಧಿಕಾ ಪಂಡಿತ್ ಜೊತೆ ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಗಾನ ಬಜಾಯಿಸಿರುವುದು ವಿಶೇಷ. ['ಇಟಲಿ' ದಿನಪತ್ರಿಕೆಯಲ್ಲಿ ಗಣೇಶ್-ರಾಧಿಕಾ ಪಂಡಿತ್ ಸುದ್ದಿ!]

  ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ಥಮನ್ ಸ್ವರ ಸಂಯೋಜನೆಯಲ್ಲಿ ರಾಧಿಕಾ ಪಂಡಿತ್ ಮತ್ತು ಶ್ರೀಮುರಳಿ ಹಾಡಿದ್ದಾರೆ. ಇಬ್ಬರ ರೋಮ್ಯಾಂಟಿಕ್ ನಂಬರ್ ಹೇಗೆ ಮೂಡಿ ಬಂದಿದೆ ಅನ್ನೋದನ್ನ ಕಿವಿಯಾರೆ ಕೇಳಿ, ಕಣ್ಣಾರೆ ನೋಡಲು ಕೆಲವೇ ದಿನಗಳು ಬಾಕಿ. [ಈ ಜೋಡಿ ಯಾರು ಗೊತ್ತಾಯ್ತಾ..? 'ZOOಮ್' ಮಾಡಿ ನೋಡಿ...]

  ಅಂದ್ಹಾಗೆ, 'ZOOಮ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಪ್ರಶಾಂತ್ ರಾಜ್. 'ZOOಮ್' ಚಿತ್ರದಲ್ಲಿ ಗಣೇಶ್ ಮತ್ತು ರಾಧಿಕಾ ಪಂಡಿತ್ ಸೂಪರ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವುದು ಮತ್ತೊಂದು ಹೈಲೈಟ್. ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

  English summary
  Kannada Actress Radhika Pandit and Kannada Actor Sri Murali has crooned a tapping number for Kannada Movie 'Zoom'. The movie features Golden Star Ganesh and Radhika Pandit directed by Prashanth Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X