»   » ಗೊಂಬೆ ಹಾಡಿಗೆ ಮತ್ತೆ ಜೀವ ತುಂಬಿದ ರಾಘವೇಂದ್ರ ರಾಜ್ ಕುಮಾರ್

ಗೊಂಬೆ ಹಾಡಿಗೆ ಮತ್ತೆ ಜೀವ ತುಂಬಿದ ರಾಘವೇಂದ್ರ ರಾಜ್ ಕುಮಾರ್

Posted By:
Subscribe to Filmibeat Kannada

ರಾಘವೇಂದ್ರ ರಾಜ್ ಕುಮಾರ್ ಕೇವಲ ನಟ, ನಿರ್ಮಾಪಕ ಮಾತ್ರವಲ್ಲದೆ ಉತ್ತಮ ಹಾಡುಗಾರ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರ. ರಾಘವೇಂದ್ರ ರಾಜ್ ಕುಮಾರ್ ಹಾಡಿರುವ ಪ್ರತಿ ಹಾಡುಗಳು ಸೂಪರ್ ಹಿಟ್ ಲೀಸ್ಟ್ ಸೇರಿವೆ. ಅನಾರೋಗ್ಯದ ಕಾರಣದಿಂದ ರಾಘಣ್ಣ ಹಾಡುವುದನ್ನ ನಿಲ್ಲಿಸಿದ್ದರು. ವಿನಯ್ ರಾಜ್ ಕುಮಾರ್ ಅಭಿನಯದ 'ರನ್ ಆಂಟನಿ' ಸಿನಿಮಾದ ಹಾಡೊಂದರಲ್ಲಿ ಯುವ ಗಾಯಕರ ಜೊತೆ ಸೇರಿ ಒಂದೆರೆಡು ಸಾಲುಗಳನ್ನ ಹಾಡಿದನ್ನು ಬಿಟ್ಟರೆ ಮತ್ತೆ ಎಲ್ಲಿಯೂ ಹಾಡುವ ಪ್ರಯತ್ನ ಮಾಡಲೇ ಇಲ್ಲ.

ಆದರೆ ರಾಘವೇಂದ್ರ ರಾಜ್ ಕುಮಾರ್ ಅವರ ಧ್ವನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ 'ಸ್ವಸ್ತಿಕ್', 'ಅನುರಾಗದ ಅಲೆಗಳು' ಚಿತ್ರದ ಹಾಡುಗಳನ್ನ ಕೇಳಿ ಅದೆಷ್ಟೋ ಜನರು ಇವರ ಧ್ವನಿಯ ಮೋಡಿಗೆ ಒಳಗಾಗಿದ್ದರು. ಇತ್ತೀಚಿನ ದಿನಗಳಲ್ಲಿ ಇವರ ಧ್ವನಿ ಮಿಸ್ ಮಾಡಿಕೊಂಡಿದ್ದವರಿಗೆ ರಾಘಣ್ಣ ಖುಷಿಯ ಸುದ್ದಿ ಕೊಟ್ಟಿದ್ದಾರೆ.

14 ವರ್ಷ ವನವಾಸ ಮುಗಿಸಿದ ರಾಘವೇಂದ್ರ ರಾಜ್ ಕುಮಾರ್

Raghavendra Rajkumar has sung the song of the movie Aaduva Gombe

ಹೌದು ರಾಘವೇಂದ್ರ ರಾಜ್ ಕುಮಾರ್ ಮತ್ತೆ ಹಾಡಿದ್ದಾರೆ. ಹಿರಿಯ ನಿರ್ದೇಶಕ ದೊರೆ-ಭಗವಾನ್ ಜೋಡಿ ಭಗವಾನ್ ನಿರ್ದೆಶನ ಮಾಡುತ್ತಿರುವ ಚಿತ್ರಕ್ಕಾಗಿ ರಾಘಣ್ಣ ಹಾಡಿದ್ದಾರೆ. ಆಡುವ ಗೊಂಬೆ ಸಿನಿಮಾದ ಗೊಂಬೆ ಎನ್ನುವ ಹಾಡಿಗೆ ರಾಘವೇಂದ್ರ ರಾಜ್ ಕುಮಾರ್ ಧ್ವನಿ ಆಗಿದ್ದಾರೆ.

ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದೆ ಚಿತ್ರದ ಹಾಡಿನ ಮೇಕಿಂಗ್ ಬಿಡುಗಡೆ ಮಾಡಿದ್ದು ಸಾಕಷ್ಟು ವರ್ಷಗಳ ನಂತರ ರಾಘವೇಂದ್ರ ರಾಜ್ ಕುಮಾರ್ ಅವರ ಧ್ವನಿ ಕೇಳಿ ಅಭಿಮಾನಿಗಳು ಖುಷಿ ಆಗಿದ್ದಾರೆ.

Raghavendra Rajkumar has sung the song of the movie Aaduva Gombe

ಆಡುವ ಗೊಂಬೆ' ಚಿತ್ರದಲ್ಲಿ ಅನಂತ್ ನಾಗ್, ಸಂಚಾರಿ ವಿಜಯ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಕಾದಂಬರಿ ಆಧಾರಿತ ಚಿತ್ರಗಳಿಗೆ ಹೆಸರಾದ ಭಗವಾನ್, ಈ ಬಾರಿ ತಮ್ಮ 50ನೇ ಚಿತ್ರಕ್ಕೆ ತಾವೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. ಚಿತ್ರಕ್ಕೆ ಗಣೇಶ್ ಅವರ ಛಾಯಾಗ್ರಹಣ ಮತ್ತು ಹೇಮಂತ್ ಕುಮಾರ್ ಅವರ ಸಂಗೀತವಿದೆ.

English summary
Kannada Actor, producer Raghavendra Rajkumar has sung the song of the movie Aaduva Gombe. seniour director Bhaghavan directing the movie, Ananth nag , Sanchari vijay are acting in Aaduva Gombe film .

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X