For Quick Alerts
  ALLOW NOTIFICATIONS  
  For Daily Alerts

  'ರಾಣಾ'ಗಾಗಿ ಹೆಜ್ಜೆ ಹಾಕಲು ಬಂದ 'ತುಪ್ಪದ ಬೆಡಗಿ' ರಾಗಿಣಿ

  |

  ಶರಣ್ ಅವರ 'ಅಧ್ಯಕ್ಷ ಇನ್ ಅಮೆರಿಕಾ' ಚಿತ್ರದ ಬಳಿಕ ನಟಿ ರಾಗಿಣಿ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಡ್ರಗ್ಸ್ ಪ್ರಕರಣದಲ್ಲಿ 140ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿದ್ದ ರಾಗಿಣಿ ಜಾಮೀನು ಪಡೆದು ಹೊರಗೆ ಬಂದಿದ್ದರು. ಈ ದುರ್ಘಟನೆಯಿಂದ ಕುಗ್ಗದ ನಟಿ ಜೈಲಿನಿಂದ ಹೊರಗೆ ಬಂದ್ಮೇಲೆ ಕೊರೊನಾ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುವ ಮೂಲಕ ಗಮನ ಸೆಳೆದರು.

  ಮತ್ತೊಂದೆಡೆ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಬ್ಯುಸಿಯಾಗುವ ಸೂಚನೆ ಕೊಟ್ಟರು. ತಿಲಕ್ ಮತ್ತು ಮೇಘನಾ ಗಾಂವ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಹಾಗೂ ವಿಶಾಲ್ ಶೇಖರ್ ನಿರ್ದೇಶನದ ಕರ್ವ 3 ಎಂಬ ಹೊಸ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಒಪ್ಪಿದರು.

  'ರಾಣಾ' ಚಿತ್ರೀಕರಣ ಸೆಟ್‌ನಲ್ಲಿ ಅವಘಡ: ಫೊಟೊಗ್ರಾಫರ್‌ಗೆ ಗಂಭೀರ ಗಾಯ'ರಾಣಾ' ಚಿತ್ರೀಕರಣ ಸೆಟ್‌ನಲ್ಲಿ ಅವಘಡ: ಫೊಟೊಗ್ರಾಫರ್‌ಗೆ ಗಂಭೀರ ಗಾಯ

  ಇದೀಗ, ನಂದಕಿಶೋರ್ ನಿರ್ದೇಶನದ 'ರಾಣಾ' ಚಿತ್ರದಲ್ಲಿ ರಾಗಿಣಿ ದ್ವಿವೇದಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ಸ್ಟಾದಲ್ಲಿ ಪೋಸ್ಟರ್ ಹಂಚಿಕೊಂಡಿರುವ ರಾಗಿಣಿ, ರಾಣಾ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ. ನವರಾತ್ರಿದ 6ನೇ ದಿನದಲ್ಲಿ ಕೆಂಪು ಬಣ್ಣದ ಸಂಕೇತವಾಗಿ ರಾಣಾ ಪೋಸ್ಟರ್‌ವೊಂದನ್ನು ಶೇರ್ ಮಾಡಿದ್ದಾರೆ.

  ''ಕೆಂಪು ಬಣ್ಣ ನಿರ್ಭಯ ಮತ್ತು ಸೌಂದರ್ಯದ ಸಂಕೇತ. ಈ ವಿಶೇಷ ಸಂದರ್ಭದಲ್ಲಿ ರಾಣಾ ಚಿತ್ರದಲ್ಲಿ ಭಾಗಿಯಾಗಿದ್ದೇನೆ ಎನ್ನುವ ವಿಷಯ ತಿಳಿಸುತ್ತಿರುವುದು ಸಂತಸ ತಂದಿದೆ. ಒಂದು ಅದ್ಭುತ ಹಾಡಿನೊಂದಿಗೆ ನಿಮ್ಮ ಮುಂದೆ ಬರುತ್ತಿರುವುದು ಖುಷಿಯಾಗಿದೆ. ಇಮ್ರಾನ್ ಸರ್ದಾರಿಯಾ ಜೊತೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದು ಹಾಗೂ ನಂದಕಿಶೋರ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಶ್ರೇಯಸ್ ಮಂಜು ನಾಯಕ. ಚಂದನ್ ಶೆಟ್ಟಿ ಜೊತೆ ಮೊದಲ ಸಲ ಕೆಲಸ ಮಾಡುತ್ತಿದ್ದೇನೆ'' ಎಂದು ಮಾಹಿತಿ ನೀಡಿದ್ದಾರೆ.

  ಇದಕ್ಕೂ ಮುಂಚೆ ನಂದಕಿಶೋರ್ ಚಿತ್ರದ ಹಾಡುಗಳಲ್ಲಿ ರಾಗಿಣಿ ಡ್ಯಾನ್ಸ್ ಮಾಡಿದ್ದಾರೆ. 'ಯಕ್ಕಾ ನಿನ್ ಮಗಳು....' ಹಾಡು ಮತ್ತು 'ಐಟಂ ಸಾಂಗ್ ಬ್ಯಾನ್ ಆಗ್ಬೇಕು....' ಹಾಡುಗಳಲ್ಲಿ ರಾಗಿಣಿ ಹೆಜ್ಜೆ ಹಾಕಿದ್ದರು. ಈಗ ರಾಣಾ ಚಿತ್ರದೊಂದಿಗೆ ಮೂರನೇ ಸಲ ನಂದಕಿಶೋರ್ ಜೊತೆ ರಾಗಿಣಿ ಕೆಲಸ ಮಾಡ್ತಿದ್ದಾರೆ. ಅದೇ ರೀತಿ 'ತುಪ್ಪ ಬೇಕಾ ತುಪ್ಪ....' ಹಾಡನ್ನು ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದರು. ಈ ಸಾಂಗ್ ಆದ್ಮೇಲೆ ಈಗ ಮತ್ತೊಮ್ಮೆ ರಾಗಿಣಿಗೆ ಹಾಡಿನ ನಿರ್ದೇಶನ ಮಾಡ್ತಿದ್ದಾರೆ. ರಾಣಾ ಚಿತ್ರದ ಹಾಡಿಗೆ ಚಂದನ್ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದು, 'ಚುಟುಚುಟು' ಖ್ಯಾತಿಯ ಶಿವು ಬೈರಾಗಿ ಗೀತೆರಚಿಸಿದ್ದಾರೆ.

  ರಾಗಿಣಿ ಈಸ್ ಬ್ಯಾಕ್: ತುಪ್ಪದ ಹುಡುಗಿ ಕೈಯಲ್ಲಿರುವ ಚಿತ್ರಗಳು ಯಾವುದು?ರಾಗಿಣಿ ಈಸ್ ಬ್ಯಾಕ್: ತುಪ್ಪದ ಹುಡುಗಿ ಕೈಯಲ್ಲಿರುವ ಚಿತ್ರಗಳು ಯಾವುದು?

  ಗುಜ್ಜಾಲ್ ಪುರುಷೋತ್ತಮ ಈ ಚಿತ್ರ ನಿರ್ಮಿಸುತ್ತಿದ್ದು, ಶ್ರೇಯಸ್ ಮಂಜು ಜೊತೆ ರೀಷ್ಮಾ ನಾನಯ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ರಾಣಾ ಕೇವಲ ಎರಡು ಹಾಡು ಬಾಕಿ ಉಳಿಸಿಕೊಂಡಿದೆಯಂತೆ.

  Ragini Dwivedi to appear in a special song in Raana film

  ರಾಗಿಣಿ ಮುಂದಿನ ಸಿನಿಮಾಗಳು

  ರಘು ಹಾಸನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಗಾಂಧಿಗಿರಿ' ಸಿನಿಮಾ ಕೊನೆಯ ಹಂತದ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಶೇಕಡಾ 80ರಷ್ಟು ಶೂಟಿಂಗ್ ಮುಗಿದ್ದು, ಕೆಲವು ದೃಶ್ಯ ಹಾಗೂ ಎರಡು ಹಾಡುಗಳು ಮಾತ್ರ ಉಳಿದಿದೆ. ಜೋಗಿ ಪ್ರೇಮ್ ಈ ಚಿತ್ರದಲ್ಲಿ ನಾಯಕನಾಗಿದ್ದು, ಈ ಸಿನಿಮಾ ಕೆಲಸ ಮತ್ತೆ ಆರಂಭಿಸಲಿದ್ದಾರೆ ರಾಗಿಣಿ.

  ರಾಗಿಣಿ ನಟನೆಯ 'ನಾನೇ ನೆಕ್ಸ್ಟ್ ಸಿಎಂ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಮುಸ್ಸಂಜೆ ಮಹೇಶ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನಮಾಡಿದ್ದಾರೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  ಇದರ ಜೊತೆಗೆ 'ಜಾನಿ ವಾಕರ್' ಎಂಬ ಸಿನಿಮಾದಲ್ಲೂ ನಟಿ ರಾಗಿಣಿ ಅಭಿನಯಿಸುತ್ತಿದ್ದು, ಖಡಕ್ ಪೊಲೀಸ್ ಆಫಿಸರ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ.

  English summary
  Kannada Actress Ragini Dwivedi to appear in a special song in Shreyas Manju starrer Raana film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X