ಲವ್ ಫೇಲ್ಯೂರ್ ಹುಡುಗರು ನೋಡಲೇ ಬೇಕಾದ ಹಾಡು
ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ರಾಜರಥ ಚಿತ್ರದ ಮೊದಲ ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಕನ್ನಡ ಹಾಗೂ ತೆಲುಗಿನಲ್ಲೂ ರಾಜರಥ ಚಿತ್ರ ಬಿಡುಗಡೆ ಆಗುತ್ತಿದ್ದು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ವಿಡಿಯೋ ಸಾಂಗ್ ರಿಲೀಸ್ ಮಾಡಿದ್ದಾರೆ ನಿರ್ದೇಶಕ ಅನೂಪ್ ಬಂಡಾರಿ.
ನಾಲ್ಕು ವರ್ಷದ ಲವ್ ಸ್ಟೋರಿಯನ್ನ ಕ್ಯೂಟ್ ಕಥೆಯನ್ನ ಹೇಳುವ ಈ ಹಾಡು ಲವ್ ಫೇಲ್ಯೂರ್ ಆಗಿರುವ ಹುಡುಗರು ನೊಡಲೇಬೇಕು. ಅನೂಪ್ ಬಂಡಾರಿ ಬರೆದಿರುವ ಈ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಸುಂದರ ತಾಣಗಳಲ್ಲಿ ಹಾಡನ್ನ ಚಿತ್ರೀಕರಿಸಲಾಗಿದ್ದು ನಟಿ ಅವಂತಿಕಾ ಶೆಟ್ಟಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕಾಲೇಜ್ ಡೇಸ್ ಹಾಡಿನ ಸಂಗೀತ ಕೂಡ ಕೇಳುಗರಿಗೆ ವಿಭಿನ್ನ ಅನ್ನಿಸುತ್ತೆ.

ರಾಜರಥ ಚಿತ್ರದಿಂದ ಬಿಡುಗಡೆ ಆಗಿರುವ ಹಾಡು ಇಂಜನಿಯರಿಂಗ್ ವಿದ್ಯಾರ್ಥಿಯ ನಾಲ್ಕು ವರ್ಷದ ಲವ್ ಸ್ಟೋರಿ ಆಗಿದೆ. ಇದೇ ಕಾರಣದಿಂದ ಸ್ಯಾಂಡಲ್ ವುಡ್ ನ ಕಾಲೇಜ್ ಕುಮಾರ ಅಂತಾನೇ ಫೇಮಸ್ ಆಗಿರುವ ಶಿವರಾಜ್ ಕುಮಾರ್ ಅವರಿಂದಲೇ ಈ ಹಾಡನ್ನ ಬಿಡುಗಡೆ ಮಾಡಿಸಿದೆ ಸಿನಿಮಾತಂಡ.

ಸದ್ಯ ಚಿತ್ರೀಕರಣ ಮುಗಿಸಿರುವ ರಾಜರಥ ಚಿತ್ರತಂಡ ಆದಷ್ಟು ಬೇಗ ಸಿನಿಮಾವನ್ನ ಪ್ರೇಕ್ಷಕರ ಎದುರು ತರಲು ಸಿದ್ದತೆ ನಡೆಸಿದ್ದಾರೆ. ಸಾಕಷ್ಟು ಕುತೂಹಲಗಳೊಂದಿಗೆ ಬೆಳ್ಳೆತೆರೆಗೆ ಬರಲು ತಯಾರಾಗಿರುವ ಚಿತ್ರದ ಹಾಡು ಮಾತ್ರ ಎಲ್ಲರಿಗೂ ಮೆಚ್ಚುಗೆ ಆಗುವ ಲಕ್ಷಣಗಳು ಕಾಣುತ್ತಿದೆ.


Click it and Unblock the Notifications











