»   » ಅರುಣ್ ಸಾಗರ್ ಮಗಳ ಹಾಡು ಈಗ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್

ಅರುಣ್ ಸಾಗರ್ ಮಗಳ ಹಾಡು ಈಗ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್

Posted By:
Subscribe to Filmibeat Kannada

ನಟ ಅರಣ್ ಸಾಗರ್ ಪುತ್ರಿ ಅದಿತಿ ಸಾಗರ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. 'ರಾಂಬೋ 2' ಚಿತ್ರದ ''ಧಮ್ ಮಾರೋ ಧಮ್..'' ಎಂಬ ಹಾಡನ್ನು ಅದಿತಿ ಸಾಗರ್ ಹಾಡಿದ್ದು, ಈ ಹಾಡಿನ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಈ ಹಾಡು ಈ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ.

ಚಿತ್ರರಂಗಕ್ಕೆ ಕಾಲಿಟ್ಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ !

ತಮ್ಮ ಮೊದಲ ಹಾಡಿನಲ್ಲಿಯೇ ಅವರ ಗಾಯನ ಪ್ರತಿಭೆಯನ್ನು ಅದಿತಿ ಸಾಗರ್ ಸಾಬೀತು ಮಾಡಿದ್ದಾರೆ. ಅವರ ಧ್ವನಿ ನಿಜಕ್ಕೂ ಬೇರೆ ಗಾಯಕರಿಗಿಂತ ತುಂಬ ವಿಭಿನ್ನವಾಗಿತ್ತು. ಇನ್ನು ಈ ಹಾಡು ಯೂಟ್ಯೂಬ್ ನಲ್ಲಿ ಈಗ ಟ್ರೆಂಡಿಂಗ್ ಆಗಿದೆ. ಅಂದಹಾಗೆ, ಅರ್ಜುನ್ ಜನ್ಯ ಸಂಗೀತ ನೀಡಿದ್ದ ಈ ಹಾಡನ್ನು ಮತು ಎಂಬುವವರು ಬರೆದಿದ್ದರು.

Rambo 2 kannada movie song trending in youtube

ಅಂದಹಾಗೆ, ಮಗಳ ಗಾಯಕದ ಬಗ್ಗೆ ಮಾತನಾಡಿರುವ ಅರುಣ್ ಸಾಗರ್ ''ಇವತ್ತು ನನಗೆ ಬಹಳ ಖುಷಿ ಆದ ದಿನ. ಎಲ್ಲ ಟೆಕ್ನಿಷಿಯನ್ ಗಳು ಸೇರಿ ನಿರ್ಮಾಣ ಮಾಡುತ್ತಿರುವ 'ರಾಂಬೋ 2'. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅವರ ಮ್ಯೂಸಿಕ್ ಗೆ ನನ್ನ ಮಗಳು ಹಾಡುತ್ತಿದ್ದಾಳೆ. ನನ್ನ ಮಗಳಿಗೆ ಹಾಡುವುದಕ್ಕೆ ಅವಕಾಶ ಮಾಡಿ ಕೊಟ್ಟ ಸ್ನೇಹಿತರಿಗೆ ಪ್ರತಿಯೊಬ್ಬರಿಗೆ ಧನ್ಯವಾದ ಹೇಳುತ್ತೇನೆ. ನಮ್ಮನ್ನು ಹೇಗೆ ನೀವು ಆರ್ಶಿವದಿಸಿದ್ರಿ ಅದೇ ರೀತಿ ನನ್ನ ಮಗಳನ್ನು ಆಶಿರ್ವಾದ ಮಾಡಿ ಬೆಳಸಿ ಅಂತ ಕೇಳಿಕೊಳ್ಳುತ್ತೇನೆ. ರಾಂಬೋ 2 ತಂಡಕ್ಕೆ ಒಳ್ಳೆಯದಾಗಲಿ.'' ಎಂದು ಹೇಳಿದ್ದಾರೆ.

'ರಾಂಬೋ 2' ಚಿತ್ರಕ್ಕೆ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಲಡ್ಡು ಸಿನಿಮಾ ಹೌಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ನಟ ಶರಣ್ ಮತ್ತು ನಟಿ ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

English summary
'Rambo 2' kannada movie song trending in youtube. Kannada actor Arun Sagar's daughter Aditi Sagar Aditi Sagar sang a song to Arjun Janya musical 'Rambo 2' kannada movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X