For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮಲಯಾಳಂಗೆ ಹೊರಟ ರವಿ ಬಸ್ರೂರು

  |

  'ಉಗ್ರಂ', 'ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಭಾರಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರು ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

  ಹಿಂದಿಯಲ್ಲಿ ಸಲ್ಮಾನ್ ಖಾನ್ ಸಿನಿಮಾಕ್ಕೂ ಸಂಗೀತ ನೀಡಿರುವ ರವಿ ಬಸ್ರೂರು, ತೆಲುಗು, ತಮಿಳು ಸಿನಿಮಾಗಳಿಗೂ ಸಂಗೀತ ನೀಡಿ ಸೈ ಎನಿಸಿಕೊಂಡಿದ್ದಾರೆ.

  'ಮಡ್ಡಿ' ಹೆಸರಿನ ಮಲಯಾಳಂ ಸಿನಿಮಾ ಒಂದಕ್ಕೂ ಸಂಗೀತ ನೀಡಿದ್ದ ರವಿ ಬಸ್ರೂರು ಇದೀಗ ಮತ್ತೆ ಮಲಯಾಳಂ ಸಿನಿಮಾ ಒಂದಕ್ಕೆ ಸಂಗೀತ ನೀಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಅದರಲ್ಲಿಯೂ ಮಲಯಾಳಂನ ಸ್ಟಾರ್ ನಟನ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ.

  ಮಲಯಾಳಂ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ

  ಮಲಯಾಳಂ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ

  ಮಲಯಾಳಂನ ಪೃಥ್ವಿರಾಜ್ ಸುಕುಮಾರನ್‌ರ ಹೊಸ ಮಲಯಾಳಂ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ. ಹಲವು ಭಿನ್ನ-ಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿರುವ ಪೃಥ್ವಿರಾಜ್ ಸುಕುಮಾರನ್ ಇದೀಗ ಪೌರಾಣಿಕ ಸಿನಿಮಾಕ್ಕೆ ಕೈ ಇಟ್ಟಿದ್ದು, 'ಕಾಲಿಯನ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  ರವಿ ಬಸ್ರೂರು ಚಿತ್ರ ಹಂಚಿಕೊಂಡ ಪೃಥ್ವಿರಾಜ್ ಸುಕುಮಾರನ್

  ರವಿ ಬಸ್ರೂರು ಚಿತ್ರ ಹಂಚಿಕೊಂಡ ಪೃಥ್ವಿರಾಜ್ ಸುಕುಮಾರನ್

  ಈ ವಿಷಯವನ್ನು ಸ್ವತಃ ಪೃಥ್ವಿರಾಜ್ ಸುಕುಮಾರನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರವಿ ಬಸ್ರೂರು ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹಂಚಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, 'ಕಾಲಿಯನ್' ರವಿ ಬಸ್ರೂರು' ಎಂದು ಬರೆದುಕೊಂಡಿದ್ದಾರೆ. ಪೃಥ್ವಿರಾಜ್ ಹಂಚಿಕೊಂಡಿರುವ ಚಿತ್ರದಲ್ಲಿ ರವಿ ಬಸ್ರೂರು ಜೊತೆಗೆ ಸಿನಿಮಾದ ನಿರ್ದೇಶಕ ಎಸ್ ಮಹೇಶ್, ನಿರ್ಮಾಪಕ ರಾಜೀವ್ ಗೋವಿಂದನ್ ಸಹ ಇದ್ದಾರೆ.

  ಸಿನಿಮಾದಿಂದ ಹಿಂದೆ ಸರಿದ ಶಂಕರ್-ಎಹಸಾನ್-ಲಾಯ್

  ಸಿನಿಮಾದಿಂದ ಹಿಂದೆ ಸರಿದ ಶಂಕರ್-ಎಹಸಾನ್-ಲಾಯ್

  'ಕಾಲಿಯನ್' ಸಿನಿಮಾಕ್ಕೆ ಬಾಲಿವುಡ್‌ನ ಶಂಕರ್-ಎಹಸಾನ್-ಲಾಯ್ ಸಂಗೀತ ನೀಡುತ್ತಾರೆ ಎನ್ನಲಾಗಿತ್ತು. ಆದರೆ ಈ ಸಿನಿಮಾ ತಡವಾಗುತ್ತಲೇ ಸಾಗಿದ್ದರಿಂದ ಸಿನಿಮಾದಿಂದ ಹೊರಗುಳಿದರು ಶಂಕರ್-ಎಹಸಾನ್-ಲಾಯ್. ಸಿನಿಮಾವು 17ನೇ ಶತಮಾನದ ಕತೆ ಹೊಂದಿದ್ದು, ವೇನಾಡ್‌ನ 'ಕಾಲಿಯನ್' ಹೆಸರಿನ ಯೋಧನೊಬ್ಬ ಅಪಾಯಕಾರಿ ಕಾರ್ಯವೊಂದನ್ನು ಸಾಧಿಸಲು ಹೊರಡುವ ಕತೆಯನ್ನು ಸಿನಿಮಾ ಒಳಗೊಂಡಿದೆ.

  ಹಲವು ಸಿನಿಮಾಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಪೃಥ್ವಿರಾಜ್ ಸುಕುಮಾರನ್ ಬ್ಯುಸಿ

  ಈ ಸಿನಿಮಾದಲ್ಲಿ ತಮಿಳಿನ ಸತ್ಯರಾಜ್ ಸಹ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಇನ್ನೂ ಖಾತ್ರಿಯಾಗಿಲ್ಲ. ಸಿನಿಮಾದ ನಾಯಕಿ ಯಾರಾಗುತ್ತಾರೆ, ಇತರೆ ಪಾತ್ರವರ್ಗಗಳ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ. ಪೃಥ್ವಿರಾಜ್ ಸುಕುಮಾರನ್ ಬಹಳ ಬ್ಯುಸಿ ನಟ ಮತ್ತು ನಿರ್ದೇಶಕ ಆಗಿದ್ದಾರೆ. ತೆಲುಗಿನ 'ಸಲಾರ್' ಮಲಯಾಳಂನ 'ಗೋಲ್ಡ್', 'ರೈಲ್ವೆ ಗಾರ್ಡ್', 'ಕಾಪ', 'ಬರೋಜ್', ಹೊಂಬಾಳೆ ನಿರ್ಮಿಸುತ್ತಿರುವ 'ಟೈಸನ್', 'ಎಂಪುರಾನ್', 'ತೀರ್ಪು' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Ravi Basruru will give music to Malayalam movie Kaaliyan. Prithviraj Sukumaran acting in lead role in the movie.
  Friday, July 22, 2022, 13:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X