»   » ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಅಮೋಘ ದಾಖಲೆ

ಕ್ರೇಜಿಸ್ಟಾರ್ ರವಿಚಂದ್ರನ್ 'ಅಪೂರ್ವ' ಅಮೋಘ ದಾಖಲೆ

Posted By:
Subscribe to Filmibeat Kannada

ಕ್ರೇಜಿಸ್ಟಾರ್, ಕನಸುಗಾರ ರವಿಚಂದ್ರನ್ ಅವರ 'ಅಪೂರ್ವ' ಬಿಡುಗಡೆ ಮುನ್ನವೇ ಭಾರಿ ಕುತೂಹಲ ಹುಟ್ಟುಹಾಕಿರುವ ಚಿತ್ರ. ಈ ಚಿತ್ರದ ಆಡಿಯೋ ರೈಟ್ಸ್ ಅಮೋಘ ಬೆಲೆಗೆ ಮಾರಾಟವಾಗಿದೆ. ಮೂಲಗಳ ಪ್ರಕಾರ ರು.72 ಲಕ್ಷಕ್ಕೆ ಆಡಿಯೋ ರೈಟ್ಸ್ ಲಹರಿ ಆಡಿಯೋ ಸಂಸ್ಥೆಯ ತೆಕ್ಕೆ ಸೇರಿದೆ.

'ಪ್ರೇಮಲೋಕ' (1987) ಚಿತ್ರದ ಹಾಡುಗಳೂ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿದ್ದವು. ಇದೀಗ ಮತ್ತೊಮ್ಮೆ ಲಹರಿ ಆಡಿಯೋ ಸಂಸ್ಥೆ ಮತ್ತು ರವಿಚಂದ್ರನ್ ಮ್ಯೂಸಿಕ್ ಮ್ಯಾಜಿಕ್ ಸೃಷ್ಟಿಸಲು ಹೊರಟಿದ್ದಾರೆ. ಪ್ರೇಮಲೋಕ ದಿನಗಳು ಮರುಕಳಿಸಿದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ['ಮಾಣಿಕ್ಯ' ಬಳಿಕ ನಲ್ಲ-ಮಲ್ಲರ 'ಅಪೂರ್ವ' ಸಂಗಮ]

Ravichandran's Apoorva audio rights sold for a fancy price

ಪ್ರೇಮಲೋಕ ಚಿತ್ರ ತೆರೆಕಂಡಾಗ 35 ಲಕ್ಷಕ್ಕೂ ಅಧಿಕ ಕ್ಯಾಸೆಟ್ ಗಳು ಮಾರಾಟವಾಗಿ ದಾಖಲೆ ಬರೆದಿತ್ತು. ಎರಡು ದಶಕಗಳ ಬಳಿಕವೂ ಆ ಸುಮಧುರ ಹಾಡುಗಳಿಗೆ ಈಗಲೂ ಬೇಡಿಕೆ ಇದೆ. ಲಹರಿ ಸಂಸ್ಥೆಗೂ ಈಶ್ವರಿ ಬ್ಯಾನರ್ ಚಿತ್ರಗಳಿಗೂ ಬಿಡಿಸಲಾರದ ನಂಟು ಎಂದೇ ಹೇಳಬೇಕು. ಇದೀಗ ಮತ್ತೊಮ್ಮೆ 'ಅಪೂರ್ವ' ಸಂಗಮದ ಸಮಯ.

ಚಿತ್ರದಲ್ಲಿನ ರವಿಚಂದ್ರನ್ ಗೆಟಪ್, ಕಥೆ ಅಪೂರ್ವ ಚಿತ್ರದ ಪ್ರಮುಖ ಆಕರ್ಷಣೆ. ಎರಡು ಪಾತ್ರಗಳ ಸುತ್ತುವ ಕಥೆ ಇದಾಗಿದೆ. ಎಪ್ಪತ್ತರ ಆಸುಪಾಸಿನ ನಾಯಕ ಹಾಗೂ ಹತ್ತೊಂಬತ್ತರ ಹರೆಯದ ಯುವತಿ ನಡುವೆ ಲಿಫ್ಟ್ ಒಂದರಲ್ಲಿ ನಡೆಯುವ ಸನ್ನಿವೇಶಗಳೇ ಚಿತ್ರದ ಕಥಾವಸ್ತು.

ರವಿಚಂದ್ರನ್ ಅವರ ಮನೆಯಲ್ಲೇ ಲಿಫ್ಟ್ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಈ ರೀತಿಯ ಚಿತ್ರ ನಾನು ಹಿಂದೆ ಮಾಡಿಲ್ಲ ಮುಂದೆ ಮಾಡುತ್ತೇನೆ ಎಂಬ ನಂಬಿಕೆ ಇಲ್ಲ ಎನ್ನುವ ರವಿ, ಚಿತ್ರ ನೋಡಿದರೆ ನೀಮಗೂ ಥಿಯೇಟರ್ ನಿಂದ ಹೊರ ಬರುವ ಮನಸ್ಸು ಬರಲ್ಲ. ಪ್ರೇಕ್ಷಕರ ಕಣ್ಣಂಚಲಿ ನೀರಿರುತ್ತದೆ. ಹಾಗಂತ ಇದು ಕಣ್ಣೀರಧಾರೆ ಕಥೆ ಎಂದುಕೊಳ್ಳಬೇಡಿ ಎನ್ನುತ್ತಾರೆ ರವಿಮಾಮ. ಅತಿಥಿ ಪಾತ್ರದಲ್ಲಿ ಸುದೀಪ್ ಇದ್ದಾರೆ ಎಂಬುದು ಇನ್ನೊಂದು ವಿಶೇಷ. (ಏಜೆನ್ಸೀಸ್)

English summary
Crazy Star Ravichandran's much awaited movie Apoorva, directed by himself, movie audio rights sold to Lahari Audio company for a fancy price. Sources says, audio rights sold for Rs 72 lakh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada