»   » ಬಿಡುಗಡೆಗೆ ಮುನ್ನವೇ ದಾಖಲೆ ಬರೆದ 'ಸಿದ್ದಾರ್ಥ'

ಬಿಡುಗಡೆಗೆ ಮುನ್ನವೇ ದಾಖಲೆ ಬರೆದ 'ಸಿದ್ದಾರ್ಥ'

Posted By:
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ ಸಿದ್ದಾರ್ಥ ಚಿತ್ರ ಬಿಡುಗಡೆಗೂ ಮುನ್ನವೇ ದಾಖಲೆಗೆ ಕಾರಣವಾಗಿದೆ. ಈ ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ದಾಖಲೆ ಬೆಲೆಗೆ ಕೊಂಡುಕೊಂಡಿದೆ.

ಸರಿಸುಮಾರು ರು.50 ಲಕ್ಷಕ್ಕೆ ಲಹರಿ ಸಂಸ್ಥೆ ಸಿದ್ದಾರ್ಥ ಚಿತ್ರದ ಆಡಿಯೋ ಹಕ್ಕುಗಳನ್ನು ಕೊಂಡುಕೊಂಡಿದೆ ಎನ್ನುತ್ತವೆ ಮೂಲಗಳು. ಇನ್ನೊಂದು ವಿಶೇಷ ಎಂದರೆ ಹದಿನೈದು ವರ್ಷಗಳ ಬಳಿಕ ವಜ್ರೇಶ್ವರಿ ಲಾಂಛನದ ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಪಡೆದುಕೊಳ್ಳುತ್ತಿರುವುದು.

ರಾಜ್ ಕುಟುಂಬದ ಕುಡಿಯ ಆಡಿಯೋ ಹಕ್ಕುಗಳನ್ನು ತೆಗೆದುಕೊಂಡಿರುವುದಕ್ಕೆ ಬಹಳ ಹೆಮ್ಮೆ ಅನ್ನಿಸುತ್ತಿದೆ. ಚಿತ್ರದ ಹಾಡುಗಳು ಸೊಗಸಾಗಿ ಮೂಡಿಬಂದಿದ್ದು ಖಂಡಿತ ಪ್ರೇಕ್ಷಕರಿಗೆ ಇಷ್ಟವಾಗುತ್ತವೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಲಹರಿ ವೇಲು.

Record price for Vinay Rajkumar Siddhartha audio rights

ಸೆಪ್ಟೆಂಬರ್ ತಿಂಗಳಲ್ಲಿ ಅದ್ದೂರಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಸದ್ಯಕ್ಕೆ 'ಸಿದ್ದಾರ್ಥ' ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಭರದಿಂದ ಸಾಗಿದೆ. ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಡಾ.ರಾಜ್ ಕುಮಾರ್ ಅರ್ಪಿಸಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸುತ್ತಿರುವ ಚಿತ್ರ.

ಈಗಾಗಲೇ ಬಹುತೇಕ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಹಲವೊಂದು ಸನ್ನಿವೇಶಗಳು ಹಾಗೂ ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಹೈದರಾಬಾದ್ ಚಿತ್ರೀಕರಣದ ನಂತರ ಚಿತ್ರತಂಡವು ಚಿತ್ರೀಕರಣಕ್ಕಾಗಿ ಗೋವಾಕ್ಕೆ ಪ್ರಯಾಣ ಬೆಳೆಸಲಿದೆ ಎಂದು ನಟ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.

ಚಿತ್ರಕ್ಕೆ ರಘು ಸಮರ್ಥ ಸಂಭಾಷಣೆ, ಸಾಹಿತ್ಯ ಜಯಂತ್ ಕಾಯ್ಕಿಣಿ, ಎಂ.ವಿ.ಕೃಷ್ಣಕುಮಾರ್ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ಮೋಹನ್ ಪಂಡಿತ್ ಕಲೆ, ಸಚಿನ್ ಸಂಕಲನ, ರವಿವರ್ಮ ಸಾಹಸ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆ, ಅನಂತಮೂರ್ತಿ ನಿರ್ದೇಶನ ಸಹಕಾರವಿದ್ದು, ಚಿತ್ರಕಥೆ ಮತ್ತು ನಿರ್ದೇಶನ ಪ್ರಕಾಶ್ ಜಯರಾಮ್.

ಚಿತ್ರದ ಪಾತ್ರವರ್ಗದಲ್ಲಿ ಅಪೂರ್ವ ಅರೋರ, ಆಶಿಷ್ ವಿದ್ಯಾರ್ಥಿ, ಅಶ್ವಿನಿಗೌಡ, ಅಚ್ಯುತಕುಮಾರ್, ಸಾಧುಕೋಕಿಲ, ಅಶೋಕ್, ಸುಧಾರಾಣಿ, ನಿಕ್ಕಿ, ಗುರುನಂದನ್, ನಯನ, ದೀಪಿಕಾ, ಉಮೇಶ್, ಅಲೋಕ್, ಜೀವನ್, ವಿನೋದ್, ಮಣಿಶೆಟ್ಟಿ ಮುಂತಾದವರು ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada Matinee Idol late Dr. Rajkumar's Grandson Vinay Rajkumar (Vinay Raj) movie Siddhartha created new record. Reports suggest that the audio rights alone have been sold for a whopping Rs 50 lakh to Lahari audio company. The movie directed by Milana fame Prakash and music by V Harikrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada