»   » 'ಕುಲದಲ್ಲಿ ಕೀಳ್ಯಾವುದೋ' ಹೊಸ ಹಾಡು ಕೇಳಿಲ್ಲ ಅಂದ್ರೆ, ಒಮ್ಮೆ ಕೇಳಿ.!

'ಕುಲದಲ್ಲಿ ಕೀಳ್ಯಾವುದೋ' ಹೊಸ ಹಾಡು ಕೇಳಿಲ್ಲ ಅಂದ್ರೆ, ಒಮ್ಮೆ ಕೇಳಿ.!

Posted By:
Subscribe to Filmibeat Kannada

ಡಾ ರಾಜ್ ಕುಮಾರ್ ಅವರ 'ಸತ್ಯ ಹರಿಶ್ಚಂದ್ರ' ಚಿತ್ರದ 'ಕುಲದಲ್ಲಿ ಕೀಳ್ಯಾವುದೋ' ಹಾಡನ್ನ ಮತ್ತೆ ಬಳಸಲಾಗುತ್ತಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇದೀಗ, ಈ ಎವರ್ ಗ್ರೀನ್ ಹಾಡು ಹೊಸ ರೂಪ ಪಡೆದು ರಿಲೀಸ್ ಆಗಿದೆ.

ಹೌದು, ಶರಣ್ ಅಭಿನಯದ 'ಸತ್ಯಹರಿಶ್ಚಂದ್ರ' ಚಿತ್ರದಲ್ಲಿ ಈ ಹಾಡನ್ನ ಬಳಸಲಾಗಿದ್ದು, ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಹಾಡಿಗೆ, ಸಾಹಿತ್ಯಕ್ಕೆ ಮತ್ತು ಸಂಗೀತಕ್ಕೆ ಯಾವುದೇ ಧಕ್ಕೆ ಬರದಂತೆ ಅದ್ಭುತವಾಗಿ ಮರು ಬಳಕೆ ಮಾಡಲಾಗಿದೆ.

revisited version of evergreen song "Kuladalli Keelyavudo"

1965ರಲ್ಲಿ ಮೂಡಿ ಬಂದಿದ್ದ ಈ ಹಾಡಿಗೆ ಹುಣುಸೂರು ಕೃಷ್ಣ ಮೂರ್ತಿ ಅವರು ಸಾಹಿತ್ಯ ಬರೆದಿದ್ದು, ಗಂಟಸಾಲ ಅವರು ಹಾಡಿದ್ದರು. ಈಗ ಅದೇ ಸಾಲುಗಳಿಗೆ ಗಾಯಕ ವಿಜಯ್ ಪ್ರಕಾಶ್ ದ್ವನಿಗೂಡಿಸಿದ್ದು, ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಸತ್ಯ ಹರಿಶ್ಚಂದ್ರ ಚಿತ್ರದ 'ಕುಲದಲ್ಲಿ ಕೀಳ್ಯಾವುದೋ' ಹಾಡು ಮತ್ತೆ ಬಳಕೆ!

ಅಂದ್ಹಾಗೆ, ಶರಣ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರವನ್ನ ಕೆ.ಮಂಜು ನಿರ್ಮಾಣ ಮಾಡಿದ್ದು, ದಯಾಳ್ ಪದ್ಮನಾಭನ್ ಆಕ್ಷನ್ ಕಟ್ ಹೇಳಿದ್ದಾರೆ. ಶರಣ್ ಗೆ ಜೋಡಿಯಾಗಿ ಸಂಚಿತಾ ಪಡುಕೊಣೆ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಚಿಕ್ಕಣ್ಣ, ಭಾವನ ರಾವ್, ಸಾಧುಕೋಕಿಲಾ, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

ಟ್ರೈಲರ್: ಕಾಮಿಡಿ, ಆಕ್ಷನ್, ಥ್ರಿಲ್, ಸೆಂಟಿಮೆಂಟ್ ಮಿಶ್ರಿತ 'ಸತ್ಯ ಹರಿಶ್ಚಂದ್ರ'

ಹಳೆ ಹಾಡು ಕೇಳಿ ಎಂಜಾಯ್ ಮಾಡಿರುವ ಸಂಗೀತ ಪ್ರೇಮಿಗಳು, ಹೊಸ ವರ್ಷನ್ ನಲ್ಲಿ ಈ ಹಾಡು ಹೇಗಿರುತ್ತೆ ಅಂತ ಒಮ್ಮೆ ನೋಡಿ. ಹಾಡು ಇಲ್ಲಿದೆ.

English summary
Yester year super-hit track titled "Kuladalli Keelyavudo" has been re-visited in director Dayal Padmanabhan's movie titled "Sathya Harishchandra"

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada