For Quick Alerts
  ALLOW NOTIFICATIONS  
  For Daily Alerts

  ಹೂ ಅಂತೀಯಾ ಮಾಮ, ಊ ಹೂ ಅಂತಿಯಾ? ಕೇಳುತ್ತಿರುವುದು ಸಮಂತಾ

  |

  ಸಮಂತಾ ನಟನೆಯ ಹೊಸ ಹಾಡು ಅಭಿಮಾನಿಗಳಿಗೆ ಶಾಕ್ ನೀಡುವಂತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾದಲ್ಲಿ ಮೊದಲ ಬಾರಿಗೆ ಸಮಂತಾ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದು, ಹಾಡಿನ ಲಿರಿಕಲ್ ವಿಡಿಯೋ ಇದೀಗ ಬಿಡುಗಡೆ ಆಗಿದೆ.

  'ಹೂ ಅಂಟಾವ, ಮಾಮ ಊ ಹೂ ಅಂಟಾವ' ಎಂಬ ಮಾದಕ ಸಾಹಿತ್ಯವುಳ್ಳ ಹಾಡಿನ ಲಿರಿಕಲ್ ವಿಡಿಯೋ ಇಂದು ಬಿಡುಗಡೆ ಆಗಿದ್ದು ಹಾಡಿನ ವಿಡಿಯೋನಲ್ಲಿ ಸಮಂತಾರ ಮಾದಕ ಚಿತ್ರಗಳನ್ನು ಸಹ ನೀಡಲಾಗಿದೆ.

  ಸಮಂತಾ ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೆಚ್ಚು ಮಾದಕವಾಗಿ ಕಾಣಿಸಿಕೊಳ್ಳುವುದಿಲ್ಲ. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿಯ ಒಂದು ದೃಶ್ಯದಲ್ಲಿ ಒಳ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರಾದರೂ ಅದು ಆಕ್ಷನ್ ದೃಶ್ಯ ಹಾಗಾಗಿ ಅದರ ಪರಿಣಾಮವೂ ಬೇರೆಯದ್ದೇ ರೀತಿಯದ್ದು, ಆದರೆ 'ಪುಷ್ಪ' ಸಿನಿಮಾದ ಹಾಡಿನಲ್ಲಿ ಉದ್ದೇಶಪೂರ್ವಕವಾಗಿ ಮಾದಕವಾಗಿ, ಗ್ಲಾಮರಸ್ ಲುಕ್‌ನಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ.

  ಹಾಟ್ ಆಗಿ ಕಾಣುತ್ತಿದ್ದಾರೆ ಸಮಂತಾ

  ಹಾಟ್ ಆಗಿ ಕಾಣುತ್ತಿದ್ದಾರೆ ಸಮಂತಾ

  ಹಾಡಿನ ಲಿರಿಕಲ್ ವಿಡಿಯೋದಲ್ಲಿ ಸಮಂತಾರ ಕೆಲವು ಚಿತ್ರಗಳನ್ನು ನೀಡಲಾಗಿದ್ದು ಕಪ್ಪು ಬಣ್ಣದ ರವಿಕೆ, ನೀಲಿ ಬಣ್ಣದ ತುಂಡು ಲಂಗ ತೊಟ್ಟು ಬಹಳ ಹಾಟ್ ಆಗಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಮಂತಾರ ಈ ಲುಕ್ ನೋಡಿ ಅಭಿಮಾನಿಗಳು ಹುಬ್ಬೇರಿಸುವುದಂತೂ ಪಕ್ಕಾ.

  ದೇವಿಶ್ರೀ ಪ್ರಸಾದ್ ಸಂಗೀತ

  ದೇವಿಶ್ರೀ ಪ್ರಸಾದ್ ಸಂಗೀತ

  ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶಿಸಿರುವ ಹಾಡಿಗೆ ಇಂದ್ರವತಿ ಚೌಹಾಣ್ ಮಾದಕ ಕಂಠದಿಂದ ಇನ್ನಷ್ಟು ಗ್ಲಾಮರಸ್ ಲುಕ್ ತುಂಬಿದ್ದಾರೆ. ಇದು ಸಮಂತಾ ಕುಣಿಯುತ್ತಿರುವ ಮೊದಲ ಐಟಂ ಹಾಡು. ಈ ಒಂದು ಹಾಡಿಗಾಗಿ ಭಾರಿ ದೊಡ್ಡ ಸೆಟ್‌ ಅನ್ನು ಚಿತ್ರತಂಡ ಹಾಕಿದೆ. ಅಷ್ಟೆ ಅಲ್ಲದೆ ದೊಡ್ಡ ಮೊತ್ತದ ಸಂಭಾವನೆಯನ್ನು ಸಹ ಸಮಂತಾರಿಗೆ ನೀಡಲಾಗಿದೆ. ವಿಚ್ಛೇಧನದ ಬಳಿಕ ಸಾಕಷ್ಟು ಬೋಲ್ಡ್ ನಿರ್ಧಾರಗಳನ್ನು ವೃತ್ತಿ ಜೀವನದಲ್ಲಿ ತೆಗೆದುಕೊಳ್ಳುತ್ತಿದ್ದಾರೆ ಸಮಂತಾ. ಅದರಲ್ಲೊಂದು ಐಟಂ ಹಾಡಿನಲ್ಲಿ ನಟಿಸುವ ನಿರ್ಧಾರ.

  ನಾಯಕಿಯರು ಐಟಂ ಹಾಡಿನಲ್ಲಿ ನಟಿಸುವುದು ಹೊಸದಲ್ಲ

  ನಾಯಕಿಯರು ಐಟಂ ಹಾಡಿನಲ್ಲಿ ನಟಿಸುವುದು ಹೊಸದಲ್ಲ

  ನಾಯಕ ನಟಿಯರು ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳುವುದು ಹೊಸದೇನೂ ಅಲ್ಲ. ಬಾಲಿವುಡ್‌ನಲ್ಲಿ ಪ್ರಾರಂಭವಾದ ಈ ಸಂಪ್ರದಾಯ ದಕ್ಷಿಣ ಭಾರತ ಚಿತ್ರರಂಗಕ್ಕೂ ವ್ಯಾಪಿಸಿದೆ. ನಟಿ ತಮನ್ನಾ 'ಲವ ಕುಶ' ಸಿನಿಮಾದಲ್ಲಿ ಮಾಡಿದ್ದ ಐಟಂ ಡ್ಯಾನ್ಸ್ ಸಖತ್ ಹಿಟ್ ಆಗಿತ್ತು. ಇದೇ ತಮನ್ನಾ 'ಕೆಜಿಎಫ್' ಸಿನಿಮಾದಲ್ಲಿಯೂ ನರ್ತಿಸಿದ್ದಾರೆ. ಪ್ರಿಯಾಮಣಿ, ಕಾಜಲ್ ಅಗರ್ವಾಲ್, ಪೂಜಾ ಹೆಗ್ಡೆ ಅವರುಗಳು ಸಹ ಐಟಂ ಹಾಡಿಗೆ ನರ್ತಿಸಿದ್ದಾರೆ. ಐಟಂ ಹಾಡಿಗೆ ನರ್ತಿಸಲು ಬಹಳ ದೊಡ್ಡ ಮೊತ್ತದ ಸಂಭಾವನೆಯನ್ನೂ ಪಡೆಯುತ್ತಾರೆ.

  ಡಿಸೆಂಬರ್ 17ಕ್ಕೆ ಸಿನಿಮಾ ಬಿಡುಗಡೆ

  ಡಿಸೆಂಬರ್ 17ಕ್ಕೆ ಸಿನಿಮಾ ಬಿಡುಗಡೆ

  ಇನ್ನು 'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆ ಮಾಡುವ ಕುರಿತಾದ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ನಾಯಕ ನಟನಾಗಿ ಅಲ್ಲು ಅರ್ಜುನ್, ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಕನ್ನಡಿಗ ಡಾಲಿ ಧನಂಜಯ್ ವಿಲನ್ ಪಾತ್ರದಲ್ಲಿದ್ದಾರೆ. ಜೊತೆಗೆ ಹಾಸ್ಯನಟ ಸುನಿಲ್, ಮುಖ್ಯ ವಿಲನ್ ಆಗಿ ಮಲಯಾಳಂನ ಫಹಾದ್ ಫಾಸಿಲ್ ನಟಿಸಿದ್ದಾರೆ. ಸಿನಿಮಾವು ಡಿಸೆಂಬರ್ 17 ಕ್ಕೆ ಬಿಡಗುಡೆ ಆಗಲಿದೆ. ಸಿನಿಮಾದ ಐದು ಹಾಡುಗಳು ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು ಎಲ್ಲವೂ ಸೂಪರ್ ಹಿಟ್ ಆಗಿವೆ.

  English summary
  Samantha's Item song of Puhspa movie released on YouTube. This is Samantha's first Item song. Movie will release on December 17.
  Saturday, December 11, 2021, 8:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X