»   » ಹಿತವಾಗಿದೆ ಈ ಹಾಡು ನನಗೆ , ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ

ಹಿತವಾಗಿದೆ ಈ ಹಾಡು ನನಗೆ , ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ

Posted By:
Subscribe to Filmibeat Kannada

ಮುಂಗಾರು ಮಳೆ -2 "ಸರಿಯಾಗಿ ನೆನಪಿದೆ" ಜಯಂತ್ ಕಾಯ್ಕಿಣಿ ಯವರ ಸಾಹಿತ್ಯ - ನನ್ನ ಧಾಟಿಯಲ್ಲಿ ಜಯಂತ್ ಕಾಯ್ಕಿಣಿಯವರಿಗೆ ಬರೆದಿರುವೆ. ನನ್ನ ಗುರುಗಳಾದ ಜಯಂತ್ ಕಾಯ್ಕಿಣಿಯವರಿಗೆ ತಲುಪಿಸಿ ಎಂದು ಹರ್ಷವರ್ಧನ್ ಎಂಎಸ್ ಅವರು ಬರೆದಿರುವ ಸಾಲುಗಳು ಇಲ್ಲಿವೆ.

ಈ ಗೀತೆಯ ಮೇಕಿಂಗ್ ಹಾಗೂ ಸಾಹಿತ್ಯ ಇರುವ ವಿಡಿಯೋ ಝಾಂಕರ್ ಮ್ಯೂಸಿಕ್ ನಲ್ಲಿ ಲಭ್ಯ, ಇದನ್ನು ಗಣೇಶ್ ಕೂಡಾ ಹಂಚಿಕೊಂಡಿದ್ದಾರೆ. ಆದರೆ, ಅನೇಕ ಬಾರಿ ಗೀತ ಸಾಹಿತ್ಯ ರಚನೆಗಾರರ ಹೆಸರು ನಾಪತ್ತೆಯಾಗಿರುತ್ತದೆ. ವಿಡಿಯೋ ಮೇಕಿಂಗ್ ಇರಲಿ, ಆಡಿಯೋ ಕವರ್ ಇರಲಿ.[ಆಡಿಯೋ ವಿಮರ್ಶೆ: ಹಾಡುಗಳ ವರ್ಷಧಾರೆ 'ಮುಂಗಾರು ಮಳೆ']

ಇಂಥ ಸಂದರ್ಭದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಅವರನ್ನು ಮಾನಸ ಗುರುಗಳಾಗಿ ಸ್ವೀಕರಿಸಿರುವ ಅನೇಕ ಯುವ ಪ್ರತಿಭೆಗಳು ಈ ಗೀತೆಯ ಮೂಲಕ ಕಾಯ್ಕಿಣಿ ಅವರಿಗೆ ಗುರು ಕಾಣಿಕೆ ನೀಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ['ಸರಿಯಾಗಿ ನೆನಪಿದೆ' ಹಾಡಿನ ಧಾಟಿಯಲ್ಲಿ ಅಭಿಮಾನಿಯ ಪ್ರಯತ್ನ]

ಹರ್ಷವರ್ಧನ್ ಅವರು ಈ ಚಿತ್ರದ ಹಾಡಿನ ಸಾಹಿತ್ಯಕ್ಕಿಂತ ಗುರುಗಳಿಗೆ ನಮನ ಎನ್ನಬಹುದು.

Sariyaagi Nenapide Nanage- Mungaru Male 2 Song lyrics -fan Harshavardhan M S

ಹಿತವಾಗಿದೆ ಈ ಹಾಡು ನನಗೆ
ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ
ಸ್ವರಗಳ ಪ್ರತಿ ಹೆಜ್ಜೆಯಲ್ಲು ಹೊಸ ಬೆಳವಣಿಗೆ
ಪದಗಳ ಚಿಲುಮೆಗೆ
ಬಣ್ಣವ ಬೆರಸುತಾ
ಒಲವಾಗುವುದು ಇನ್ನು ಖಚಿತ
ಹಿತವಾಗಿದೆ ಈ ಹಾಡು ನನಗೆ
ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ
ಮಾತಲ್ಲಿದೆ ಬೆಲ್ಲದ ಅಚ್ಚು
ನೀವೇ ನನ್ನ ಭಾಷೆಯ ನಂಟು
ಮನದಲ್ಲಿದೆ ಸಾಹಿತ್ಯದ ಹುಚ್ಚು
ನೀವೇ ನನ್ನ ಕಾವ್ಯದ ನಿಘಂಟು
ಹೃದಯದಲ್ಲಿದೆ ಎಲ್ಲಾ ವಿಷಯ
ಬರಹದಲ್ಲಿ ಹರಿಯುತಿಹುದು ಕನ್ನಡದ ಜಲಾಶಯ
ಬರೆಯುವ ಪ್ರತಿ ಅಕ್ಷರವು ನಿಮ್ಮನ್ನೇ ನೆನೆಯುತಾ
ಬಲವಾಗುವುದು ಇನ್ನು ಖಚಿತ
ಹಿತವಾಗಿದೆ ಈ ಹಾಡು ನನಗೆ
ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ
ನಿಮ್ಮ ಯೋಚನೆಗೆ ಜೊತೆಯಾಗಿದೆ
ಇಳಿಸಂಜೆಯ ಅಳವಡಿಕೆ
ನಿಮ್ಮ ಭೇಟಿಯಾಗದ ನನ್ನ ಜೀವನ
ಕನಸಲ್ಲೇ ಕೊನೆಯಾದ ಕನವರಿಕೆ
ಈ ಹೃದಯಕ್ಕೆ ಬೇಕಿದೆ ಸಂಗಮ
ಹುಸಿಯಾದರೆ ಇನ್ನಿಲ್ಲ ಸಂಭ್ರಮ
ಮುಗಿಲಿನ ಮನೆಯಲಿ ಇಬ್ಬನಿ ಸಜ್ಜಾಗುತಾ
ಸಂಗೀತದ ಮಳೆಯಾಗುವುದು ಇನ್ನು ಖಚಿತ
ಹಿತವಾಗಿದೆ ಈ ಹಾಡು ನನಗೆ ,
ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ .‌‌‌..
-ಹೃದಯದಿಂದ ಹರ್ಷ

English summary
Sariyaagi Nenapide Nanage song originally penned by Jayanth Kaikini and music composed by Arjun Janya for Mungaru Male 2 already attracted cine lovers in Kannada Film industry. Here is the song lyrics from the fan Harshavardhan M S.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada