For Quick Alerts
  ALLOW NOTIFICATIONS  
  For Daily Alerts

  ಕಾಯ್ಕಿಣಿ ಬರೆದ ಸಾಲಿಗೆ ಅಭಿಮಾನಿಗಳಿಂದ ಪ್ರೀತಿ ಸಾಲುಗಳು

  By ಜೇಮ್ಸ್ ಮಾರ್ಟಿನ್
  |

  ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಮುಂಗಾರು ಮಳೆ 2 ಚಿತ್ರದ ಹಾಡುಗಳು ಸಿನಿರಸಿಕರನ್ನು ಸೆಳೆಯುತ್ತಿದೆ. ಅದರಲ್ಲೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ 'ಸರಿಯಾಗಿ ನೆನಪಿಗೆ ನನಗೆ..' ಸಾಲುಗಳು ಕಾಡುತ್ತಿವೆ.

  ಗೀತ ಸಾಹಿತ್ಯ ರಚನೆ ಕೃಷಿಯಲ್ಲಿ ತೊಡಗಿರುವ ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿರುವ ಕಾಯ್ಕಿಣಿ ಅವರಿಗೆ ಗುರು ನಮನ ಸಲ್ಲಿಸುವಂತೆ ಇದೇ ಹಾಡಿಗೆ ಸಾಹಿತ್ಯ ರಚಿಸಿ ಕಳಿಸುವಂತೆ ಓದುಗರಲ್ಲಿ ಕೇಳಿಕೊಳ್ಳಲಾಗಿತ್ತು. [ಮುಂಗಾರು ಮಳೆ 2 : 'ಸರಿಯಾಗಿ ನೆನಪಿದೆ' ಜಯಂತ್ ಸಾಹಿತ್ಯ |

  ಸರಿಯಾಗಿ ನೆನಪಿದೆ ನನಗೆ ಚಿತ್ರದ ವಿಡಿಯೋ ಕಮ್ ಸಾಹಿತ್ಯ ಇರುವ ಸಾಂಗ್ ಕೂಡಾ ಝಾಂಕರ್ ಮ್ಯೂಸಿಕ್ ನಲ್ಲಿ ಲಭ್ಯವಿದೆ. ನಾಡಿನ ಯುವ ಪ್ರತಿಭಾವಂತ ಕವಿಗಳು ಗೀತ ಸಾಹಿತ್ಯ ರಚನೆಗೆ ತೊಡಗಲು ಇದು ಸಹಕಾರಿಯಾಗಿದೆ. [ಆಡಿಯೋ ವಿಮರ್ಶೆ: ಹಾಡುಗಳ ವರ್ಷಧಾರೆ 'ಮುಂಗಾರು ಮಳೆ']

  ಅರ್ಜುನ್ ಜನ್ಯ ಅವರ ಟ್ಯೂನ್ ಹಾಗೂ ಕಾಯ್ಕಿಣಿ ಅವರ ಪ್ರೀತಿಯ ಸಾಲುಗಳಿಗೆ ಹೊಂದಬಲ್ಲ ಗೀತ ಸಾಹಿತ್ಯ ರಚಿಸಿ, ನಾಡಿನ ಮೂಲೆ ಮೂಲೆಗಳಿಂದ ಪ್ರತಿಭಾವಂತರು ಬರೆದು ಕಳಿಸಿರುವ 'ಸರಿಯಾಗಿ ನೆನಪಿದೆ ನನಗೆ' ಆವೃತ್ತಿ ಇಲ್ಲಿದೆ ಓದಿ ಆನಂದಿಸಿ, ಈ ಗೀತ ರಚನೆ ಆಹ್ವಾನ, ಸ್ವೀಕಾರ ಸಂಭ್ರಮ ಇಲ್ಲಿದೆ ಮುಗಿದಿದೆ.

  ಗೀತ ಸಾಹಿತ್ಯವಿರುವ ವಿಡಿಯೋ ಲಭ್ಯವಿದೆ

  ಗೀತ ಸಾಹಿತ್ಯವಿರುವ ವಿಡಿಯೋ ಲಭ್ಯವಿದೆ

  ಸರಿಯಾಗಿ ನೆನಪಿದೆ ನನಗೆ ಚಿತ್ರದ ವಿಡಿಯೋ ಕಮ್ ಸಾಹಿತ್ಯ ಇರುವ ಸಾಂಗ್ ಕೂಡಾ ಝಾಂಕರ್ ಮ್ಯೂಸಿಕ್ ನಲ್ಲಿ ಲಭ್ಯವಿದೆ.

  ಅಭಿ ಕನಸಿನ ಕವನ

  ಅಭಿ ಕನಸಿನ ಕವನ

  ಕುಶಲಾನ ವಿವರಿಸಿ ಬರಲು
  ನನಗಂತೂ ನಾಚಿಕೆ ಈಗಲೂ.,
  ಬಿಡದೇ ಸದಾ ಸಾಯಿಸುತಿರು
  ಕೊಡದೇ ಅರವಳಿಕೆ.,
  ಖುಷಿಯಲೇ ಬಿಡುವೆನೂ
  ನನ್ನಲ್ಲಿರೋ ಪ್ರಾಣವಾ
  ಹಠ ಮಾಡದೇನೇ ಆದೆ ವಿಲೀನ. . .


  ಒಮ್ಮೆ ದ್ವೇಷಿಸಿ , ಒಮ್ಮೆ ಪೋಷಿಸಿ
  ಭಾರವಾದಳು ಕೈಯ್ಯಾ ತೆಕ್ಕೆಗೆ
  ಪ್ರೀತಿ ರೀತಿಗೆ ಆದೇ ವಂಚಿತ
  ಕಂಡುಕೊಂಡೆನು ತಕ್ಕ ಮಟ್ಟಿಗೆ
  ಅದು ಏನಂತ ಗೊತ್ತಾಯ್ತು ಈಗೀಗ
  ತಿಳಿ ಮಾತಲ್ಲಿ ಹೇಳುವೇ ಬಾ ಬೇಗ
  ಗುಂಗಿನಾ ಅಮಲಲಿ ತೇಲುವ ವ್ಯಸನಿನಾ
  ಸರಿಯಾಗಿರದೇ ಮೋಹ ಮಲಿನಾ. . .

  ಬತ್ತಿ ಹೋದರೂ ಚೆಂದ ಸಾಗರ
  ಒಮ್ಮೆ ತುಂಬಲೇ ಕಣ್ಣ ನೀರಲಿ.,
  ಎಲ್ಲಾ ಧ್ಯಾನಕೂ ನೀನೇ ಕಾರಣ
  ಕಾಡ ಕತ್ತಲೆ ಕಂಡೆ ಮಿಂಚಲಿ.,
  ಸರಿಸಿ ನೋಡು ಒಂಚೂರು ಕಣ್ಣನ್ನು
  ಸರಿ ನೀ ಹೇಳು ಈ ಮೌನ ಯಾಕಿನ್ನು
  ಮಿತಿಯಲೇ ಇರುವೆನು ಗತಿಯನು ಬದಲಿಸು
  ನಾ ಸೇರುವೆನೇ ಸಣ್ಣಾ ಸುಳಿನಾ. . .

  ಸತೀಶ್ ಎ. ಎಸ್

  ಸತೀಶ್ ಎ. ಎಸ್

  ಕನಸಲ್ಲಿ ಕೆಣಕಿದೆ ನನಗೆ...
  ಇದಕೆಲ್ಲಾ ಕಾರಣ ಕಿರುನಗೆ...
  ಮನದಾ ಪ್ರತಿ ಹಾಳೆಯೊಳಗೂ ನಿನದೇ ಬರವಣಿಗೆ...
  ಕನಸಿನ ಒಲುಮೆಗೆ ಹೆಸರನು ಹುಡುಕುತಾ...
  ಅಲೆದಾಡುವುದು ಇನ್ನು ಖಚಿತಾ..

  ನಿನ್ನಲ್ಲೇ ಇದೆ‌ ಎಲ್ಲಾ ಉತ್ತರ
  ನೀನೆ ನನ್ನಯ ಪ್ರಶ್ನಾ ಪತ್ರಿಕೆ
  ಕಣ್ಣಾ ಮುಚ್ಚಲೂ ನೀನೆ ಕಾಣುವೆ..
  ನೀನೆ ದೀವಿಗೆ ನನ್ನ ಬಾಳಿಗೆ
  ಬರೆದೂ ನಾನು ಮುದ್ದಾದ ಅಧ್ಯಾಯ...
  ಕೂಗಿ ಹೇಳುವೆ ನಿನ್ನಸರೆ ಉಪಮೇಯ..
  ನನ್ನಯ ಪ್ರತಿನುಡಿ ನಿನ್ನನೇ ಜಪಿಸುತಾ...
  ಹಾಡಾಗುವುದು ಇನ್ನು ಖಚಿತಾ

  ನಿನ್ನ ನೋಟಕೆ ಸೋತು ಹೋಗಿದೆ..
  ಗೆಲುವೆ ಬೇಡದ ನನ್ನ ಹೃದಯವೂ...
  ನಿನ್ನ ಕಾಣದ ನನ್ನ ಜೀವಕೆ..
  ಊಹೆ ಮೀರಿದ ಅಂಧಕಾರವೂ...
  ಕಣ್ಣ ಕರೆಗೆ ನಾನಾದೆ ನಿನ್ನೋನು..
  ಕಣ್ಣಂಚಲ್ಲೇ ಉಳಿಬೇಡ ನೀನಿನ್ನೂ...
  ಕನಸಿನ ಮಡುವಲಿ ನೆನಪನೂ ಕೆದಕುತಾ...
  ಕಳೆದೋಗುವುದು ಇನ್ನು ಖಚಿತಾ.

  ಪವನ್ ಕುಮಾರ್. ಬಿ.ಎನ್, ಹೊಸಪೇಟೆ

  ಪವನ್ ಕುಮಾರ್. ಬಿ.ಎನ್, ಹೊಸಪೇಟೆ

  ನಯವಾಗಿ ಕೇಳಿದೆ ನನಗೆ
  ಬರುವೆಯ ನನ್ನಯ ತೋಳಿಗೆ
  ಮನದ ಪ್ರತಿ ಗೋಡೆಮೇಲು ನಿನದೆ ಚಿತ್ರಣ
  ನನ್ನಯ ನಡೆ ನುಡಿ ಮೂಡಿತು ಸಿಹಿ ನುಡಿ
  ನನ್ನ ಪ್ರೀತಿಯು ನಿನ್ನಗೀನ್ನು ಖಚಿತ

  ಬೆಂದು ಹೋಗಿದೆ ನನ್ನ ಯವ್ವನ
  ಕೊಡು ಇನ್ನು ಪ್ರೀತಿ ಲಸಿಕೆ
  ಪ್ರೀತಿ ಮಾಡುತ ಕಂಡು ಹೋಗಿದೆ
  ಕಾದು ಕುಳಿತಿದೆ ನನ್ನ ಒಲುಮೆ
  ಇನ್ನು ಮನಸಲಿ ಒಂತರಹ ಕಚಗುಳಿ
  ಇಟ್ಟಾಗ ಆಗುವುದೆ ಪ್ರೀತಿಯು
  ಕಣ್ಣಿನ ರೆಪ್ಪೆಯು ನಿನ್ನನೆ ನೋಡುತಾ
  ಪಿಸು ಮಾತುಗಳು ಇನ್ನು ಉಚಿತ

  ಈಗ ಕೊಟ್ಟಾಯ್ತು ನನ್ನ ಮನವರಿಕೆ
  ಯಾಕೋ ಸಿಗುತ್ತಿಲ್ಲ ಜವಾಬು
  ಸೆಳೆತಕ್ಕೀಗ ಸಿಕ್ಕಾಯತ್ತು ನಾನೇನೇ
  ಇದು ತುಂಬಾನೆ ಅತಿಯಾದ ಆಕರ್ಷಣೆ
  ನಿನಂತರಂಗವು ನಂದೆ ಆಸ್ತಿಯು
  ಅದು ಸಿಕ್ಕಾಗ ಬೇಕೇನು ಬೇರೆನು
  ಈ ಪ್ರೀತಿಯು ಒಂತರಹ ಐಲೈಲು
  ಇದರಲ್ಲಿ ನೀನಿನ್ನೂ ಶಾಮಿಲು
  ಎಲ್ಲೋ ಕೇಳಿದ ಮುದ್ದಾದ ಸ್ವರವೊಂದು
  ಅದು ನಿನ್ನದೇನೆ ಅನ್ನುವುದು ಖಚಿತ.

  ಹೊನ್ನಪ್ಪ ಬರಗೂರ

  ಹೊನ್ನಪ್ಪ ಬರಗೂರ

  ಹಿತವಾಗಿ ಕಾಡಿದೆ ಇರುಳು
  ಅತಿಯಾಗಿ ಬೇಡುತಾ ಕಿರುಬೆರಳು
  ಅರಳುವ ಮನದಾಸೆಯಲ್ಲಿಯೂ ನೀನೆ ನಿಂತಂತೆಯೇ
  ಬೆಳಕಿನ ಸವಿ ಸದ್ದಲಿ
  ಚಿಗುರಿರೊ ಈ ಓಲುಮೆಗೆ
  ನೀ ನೀಡುವೆಯಾ ಇನ್ನೂ ಸಲುಗೆ

  ನಿನ್ನ ಮೋಹಕೆ ಅಂತರಂಗವು
  ಸುದ್ದಿ ಇಲ್ಲದೆ ಸದ್ದು ಮಾಡಿದೆ
  ನನ್ನ ರಾಗಕೆ ನೀನೇ ಶಾಹಿರಿ
  ನಿನ್ನ ಬಿಟ್ಟರೆ ರಂಗಿರದು ಬಾಳಿಗೆ
  ನೀ ಇರೋವರೆಗೂ ಈ ಜೀವ ಜೀವಂತ
  ಕಾಡುವುದು ನನ್ನಲ್ಲೇ ನೀ ಬೇಕಂತ
  ಇರುಳಿನ ನೆಪದಲಿ ಕಾಯುತಾ ಬೆಸುಗೆಗೆ
  ಬೆಳಕಾಗುವೆನು ಇನ್ನೂ ಜೊತೆಗೆ

  ನೀನೆ ಅಂಬರ ನೀನೆ ಚಂದಿರ
  ಪುಟ್ಟ ಲೋಕಕೆ ನಿನದೆ ಅಬ್ಬರ
  ಮನೆಯಾ ಮುಂದಿನ ರಂಗವಲ್ಲಿಗೆ
  ಮನದ ಒಡತಿಯೇ ನೀನೇ ಕಾರಣ
  ನಿನ್ನ ಒಲವಲ್ಲಿ ಸಂಚರಿಸೋ ಸಂಚಾರಿ
  ಈ ಜನ್ಮಕ್ಕೆ ನಾ ನಿನಗೆ ಆಭಾರಿ
  ಬೆರಸುತಾ ಸವಿಜೇನನು
  ನಿನ್ನಯ ಅಮಲಿಗೆ
  ಸಿಹಿಯಾಗುವೆನು ನಿನ್ನ ಕಥೆಗೆ

  ನಾಗೇಶ್ ಪ್ರಸನ್ನ.ಎಸ್.

  ನಾಗೇಶ್ ಪ್ರಸನ್ನ.ಎಸ್.

  ನವಿರಾದ ಖುಶಿ ಇದು ಒಳಗೆ
  ಬೆಳಕನ್ನೆ ಕಾಣಲು ಎದುರಿಗೇ
  ಎದೆಯಾ ಪ್ರತಿ ಬಡಿತದಲ್ಲೂ
  ಬಿಡದಾ, ಚಡಪಡಿಕೆ
  ನೆನಪಿನಾ ಪುಟಗಳು ಕನಸಲೀ ಹಾಡಲೂ
  ಬಾಯಾರುತಿದೆ ನನ್ನಾ ಹೃದಯಾ

  ಮಾತೇ ಇಲ್ಲದಾ ನನ್ನಾ ಮೌನವು
  ಮಾಯವಾಗಿದೇ ನೀನು ತಾಕಲು,,,
  ನಿನ್ನಾ ನೋಡುತಾ ನನ್ನಾ ಧ್ಯಾನವು
  ಕಣ್ಣಾ ಅಂಚಲೇ ಈಗಾ ದಾಖಲು,,,
  ಪ್ರತಿ ಹೆಜ್ಜೆಗೂ ಏನೇನೋ ಅಂದಾಜು
  ಜೊತೆ ನೀನಿದ್ರೆ ಇನ್ನೇಕೆ ಆ ಗೋಜು
  ಒಲವಿನಾ ಒಗಟನು ಮರೆಯದೇ ಬಿಡಿಸಲೂ

  ಅಂದುಕೊಳ್ಳದೇ ಎಲ್ಲಾ ಕೊಳ್ಳುವೆ
  ನೀನೇ ನನ್ನಯಾ ಖಾಸಾ ಅಂಗಡಿ
  ಅಂದ ತೋರಲು ರೂಢಿಯಾಗಿದೇ
  ನನ್ನಾ ಜೇಬಲೀ ನಿನ್ನಾ ಕನ್ನಡಿ
  ನನ್ನ ಬೆನ್ನಿಂದೆ ಬಂದಾಗ ಗುಮ್ಮಯ್ಯ
  ನಿನ್ನ ತೋಳಲ್ಲಿ ಕಾಪಾಡು ದಮ್ಮಯ್ಯ
  ದಣಿದಿರೋ ಜೀವಕೇ ಅಮಲಿದು ಏರಲೂ
  ಹಾರಾಡುತಿದೆ ನನ್ನಾ ಹೃದಯಾ

  ಐರಾವತ ಸರೋದೆ

  ಐರಾವತ ಸರೋದೆ

  ಮಳೆಮೋಡ ನಡುಗಿದೆ ಚಳಿಗೆ
  ಮನವೀಗ ಸೋತಿದೆ ಇವಳಿಗೆ
  ಎದೆಯಾ ಕಿರು ಚಿತ್ರವಾಗಿದೆ
  ಇವಳಾ ಮುಗುಳುನಗೆ
  ಜೇಬಿನಾ ಗೋಡೆಗೇ ಹೃದಯದ ಒತ್ತಡ
  ಮರೆಯಾಗುತಿದೆ ಮನದಾ ದುಗುಡಾ

  ನೀನೆ ಕಟ್ಟಿದೆ ಸ್ವಪ್ನ ರಾಜ್ಯವು
  ಶೂನ್ಯವಾದರೆ ನಾನು ತ್ಯಾಜ್ಯವು
  ನಿನ್ನ ನೋಟದ ಪ್ರೀತಿ ಠಾಣೆಗೆ
  ಖೈದಿಯಾದೆನು ಪ್ರಶ್ನೆ ಮಾಡದೆ
  ಸರಿ ತಪ್ಪೇನು ಗೊತ್ತಿಲ್ಲ ಪ್ರೀತೀಲಿ
  ನೀ ಬೇಕೆಂಬ ಹಠವೊಂದೆ ನನ್ನಲ್ಲಿ
  ಸೂರ್ಯನ ನೆರಳಲಿ ಪ್ರೀತಿಯ ತಿಳಿಸಲು
  ಭಯವಾಗುತಿದೆ ಇದುವೇ ಮೊದಲು

  ಸಾರ್ವಕಾಲಿಕ ಪ್ರೀತಿಯೊಂದಿಗೆ
  ಕಾವಲಾಗುವೇ ನಿನ್ನ ಜೀವಕೆ
  ನಿನ್ನ ಸನ್ನೆಯೆ ಶಬ್ಧಕೋಶವು
  ಬೆಚ್ಚಿ ಬಿದ್ದಿದೆ ನನ್ನ ಶ್ವಾಸವು
  ತುಟಿ ರಸ್ತೇಲಿ ಸಂಚಾರವಾದಾಗ
  ಸಿಹಿ ಆಘಾತ ಮಾಮೂಲಿ ಆಗಾಗ
  ಮೌನದಾ ಬಿಸಿಲಿಗೆ ನುಡಿಗಳೇ ಒಣಗಲು
  ಬಿಸಿಯಾಗುತಿದೆ ಉಸಿರಾ ಕಡಲು

  ಪ್ರದೀಪ್ ಹೆಗ್ಡೆ

  ಪ್ರದೀಪ್ ಹೆಗ್ಡೆ

  ಮತ್ತೊಮ್ಮೆ ನೋಡಲು ನಿನ್ನಾ
  ಮನವೊಮ್ಮೆ ಹಾಡಿತು ಸರಿಗಮ..
  ನನ್ನಾ ಪ್ರತಿ ಉಸಿರಿನೊಳಗೂ
  ನಿನದೇ ನೆನಪುಗಳು,
  ಹೃದಯದಾ ಬಡಿತವು
  ಪ್ರತಿಕ್ಷಣ ಏರುತಾ
  ಹೆಚ್ಚಾಗಿಸಿದೆ ನನ್ನೀ ತುಡಿತ..

  ನನ್ನಲ್ಲೇ ಇರು ಎಲ್ಲೂ ಹೋಗದೇ
  ನೀನೇ ನನ್ನಯ ಏಳು ಅದ್ಭುತ
  ಯಾರೇ ಬಂದರೂ ನೀನೇ ಚೆಂದವು
  ನಿನ್ನ ಅಂದಕೇ ಸೋತು ಹೋದೆ ನಾ
  ನಿನಗಿಲ್ಲ ಇನ್ಯಾರೂ ಪರ್ಯಾಯ
  ನನಗಿನ್ನು ನೀನೇನೇ ಕಜ್ಜಾಯ,
  ನಿನ್ನಯಾ ನಸುನಗು
  ನನ್ನನು ಕಾಡುತಾ
  ಹೆಚ್ಚಾಗಿಸಿದೆ ನನ್ನೀ ತುಡಿತ..
  ಮತ್ತೊಮ್ಮೆ ನೋಡಲು ನಿನ್ನಾ
  ಮನವೊಮ್ಮೆ ಹಾಡಿತು ಸರಿಗಮ..

  ನನ್ನ ಕನಸಿನ ಪ್ರೇಮದೇವತೆ
  ನಾನೇ ನಿನ್ನಯ ಪ್ರೀತಿದಾಸನು
  ಕಣ್ಣ ನೋಟದಿ ಕೊಲ್ಲಬೇಡವೇ
  ಮೊಗದಲ್ಲೊಂದು ನಗುವ ಚೆಲ್ಲದೇ
  ನೀ ನಕ್ಕಾಗ ಬೇಕಿಲ್ಲಾ ಜಾಮೂನು
  ಕನಸಲ್ಲೆಲ್ಲ್ಲಾ ನಿಂದೇನೇ ಗೋದಾಮು,
  ಪ್ರತಿದಿನ ಖುಷಿಯಲಿ
  ನಿನ್ನನು ನೆನೆಯುತಾ
  ಹೆಚ್ಚಾಗಿಸಿದೆ ನನ್ನೀ ತುಡಿತ..
  ಮತ್ತೊಮ್ಮೆ ನೋಡಲು ನಿನ್ನಾ
  ಮನವೊಮ್ಮೆ ಹಾಡಿತು ಸರಿಗಮ....

  ವಿಜಯ್ ಕುಮಾರ್ ಸಜ್ಜನರ್

  ವಿಜಯ್ ಕುಮಾರ್ ಸಜ್ಜನರ್

  ಸಿಹಿಯಾದ ಕನಸಿದೆ ನಿನದೇ
  ಕಹಿಯಾದ ನೆನಪಿನ ಒಳಗೆ

  ನಿನ್ನ ಸ್ಪರ್ಶವು ನೂರು ಕೌತಕ
  ನಿನ್ನ ಸ್ವಪ್ನಕೆ ನಾನೇ ನಾಯಕ
  ಎಲ್ಲ ಪ್ರಶ್ನೆಗೂ ನೀನೆ ಉತ್ತರ
  ಪ್ರಶ್ನೆ ಮಾಡದೆ ಬಾರೇ ಹತ್ತಿರ
  ಸರಸಕ್ಕೀಗ ನೀನೇನೆ ಸಂದಾಯ
  ವಿರಹಕ್ಕೂ ಕೊಡಬೇಕೇ ಕಂದಾಯ
  ಮುಂಗುರುಳಿನ ಮೋಹವ
  ಮುನ್ನುಡಿಯಲೇ ಬರೆಯುತ
  ಕವಿಯಾಗುವೆನು ಇನ್ನೂ ಖಚಿತ...


  ನದಿಯಾಗಿ ಹರಿದಿದೆ ಕನಸು
  ಕಡಲಲ್ಲಿ ಕರಗಿದೆ ಮನಸು....

  ನನ್ನ ಮಾತಿಗೆ ನಿನ್ನ ಮೌನವು
  ಮುಗ್ಧವಾಗಿರೋ ಮುದ್ದು ಕಂಪನ
  ನನ್ನ ಹಾಡಿಗೆ ನಿನ್ನ ಗಾಯನ
  ಗೆದ್ದು ಸೋತಿದೆ ಹೃದಯ ಇಂಪನ
  ಈ ಬೆರಳಿಗೆ ನಿನ್ನ ಬೆರಳೇ ಸಂಗಾತಿ
  ನನ್ನ ನೆರಳಿಗೂ ನಿನ್ನ ನೆರಳೇ ಒಡನಾಡಿ
  ನನ್ನಯ ಬಿಂಬವ ನಿನ್ನಲ್ಲೇ ನೋಡುತ
  ಬೆರಗಾಗುವೆನು ಇನ್ನೂ ಖಚಿತ...

  ಹರ್ಷವರ್ದನ್

  ಹರ್ಷವರ್ದನ್

  ಹಿತವಾಗಿದೆ ಈ ಹಾಡು ನನಗೆ
  ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ
  ಸ್ವರಗಳ ಪ್ರತಿ ಹೆಜ್ಜೆಯಲ್ಲು ಹೊಸ ಬೆಳವಣಿಗೆ
  ಪದಗಳ ಚಿಲುಮೆಗೆ
  ಬಣ್ಣವ ಬೆರಸುತಾ
  ಒಲವಾಗುವುದು ಇನ್ನು ಖಚಿತ
  ಹಿತವಾಗಿದೆ ಈ ಹಾಡು ನನಗೆ
  ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ
  ಮಾತಲ್ಲಿದೆ ಬೆಲ್ಲದ ಅಚ್ಚು
  ನೀವೇ ನನ್ನ ಭಾಷೆಯ ನಂಟು
  ಮನದಲ್ಲಿದೆ ಸಾಹಿತ್ಯದ ಹುಚ್ಚು
  ನೀವೇ ನನ್ನ ಕಾವ್ಯದ ನಿಘಂಟು
  ಹೃದಯದಲ್ಲಿದೆ ಎಲ್ಲಾ ವಿಷಯ
  ಬರಹದಲ್ಲಿ ಹರಿಯುತಿಹುದು ಕನ್ನಡದ ಜಲಾಶಯ
  ಬರೆಯುವ ಪ್ರತಿ ಅಕ್ಷರವು ನಿಮ್ಮನ್ನೇ ನೆನೆಯುತಾ
  ಬಲವಾಗುವುದು ಇನ್ನು ಖಚಿತ
  ಹಿತವಾಗಿದೆ ಈ ಹಾಡು ನನಗೆ
  ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ
  ನಿಮ್ಮ ಯೋಚನೆಗೆ ಜೊತೆಯಾಗಿದೆ
  ಇಳಿಸಂಜೆಯ ಅಳವಡಿಕೆ
  ನಿಮ್ಮ ಭೇಟಿಯಾಗದ ನನ್ನ ಜೀವನ
  ಕನಸಲ್ಲೇ ಕೊನೆಯಾದ ಕನವರಿಕೆ
  ಈ ಹೃದಯಕ್ಕೆ ಬೇಕಿದೆ ಸಂಗಮ
  ಹುಸಿಯಾದರೆ ಇನ್ನಿಲ್ಲ ಸಂಭ್ರಮ
  ಮುಗಿಲಿನ ಮನೆಯಲಿ ಇಬ್ಬನಿ ಸಜ್ಜಾಗುತಾ
  ಸಂಗೀತದ ಮಳೆಯಾಗುವುದು ಇನ್ನು ಖಚಿತ
  ಹಿತವಾಗಿದೆ ಈ ಹಾಡು ನನಗೆ ,
  ಇದಕ್ಕೆಲ್ಲ ಕಾರಣ ನಿಮ್ಮ ಬರವಣಿಗೆ .‌‌‌..

  English summary
  Sariyaagi Nenapide Nanage song originally penned by Jayanth Kaikini and music composed by Arjun Janya for Mungaru Male 2 already attracted cine lovers in Kannada Film industry. Here is the song lyrics from the fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X