»   » ಸತೀಶ್ ನೀನಾಸಂ 'ಟೈಗರ್ ಗಲ್ಲಿ'ಯಲ್ಲಿ ಹಾಡುಗಳು 'ಫುಲ್ಲು ಪವರ್ರು'

ಸತೀಶ್ ನೀನಾಸಂ 'ಟೈಗರ್ ಗಲ್ಲಿ'ಯಲ್ಲಿ ಹಾಡುಗಳು 'ಫುಲ್ಲು ಪವರ್ರು'

Posted By:
Subscribe to Filmibeat Kannada

'ಬ್ಯೂಟಿಫುಲ್ ಮನಸುಗಳು' ಚಿತ್ರದ ನಂತರ ನಟ ಸತೀಶ್ ನೀನಾಸಂ ಅಭಿನಯದ 'ಟೈಗರ್ ಗಲ್ಲಿ' ಸ್ಯಾಂಡಲ್ ವುಡ್ ಗಲ್ಲಿ ಗಲ್ಲಿಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಯಾವುದೇ ಚಿತ್ರದಲ್ಲಿ ಅಭಿನಯಿಸಿದರು ಹೆಚ್ಚಾಗಿ ಹಾಸ್ಯ ದೃಶ್ಯಗಳಿಂದ ಕನ್ನಡಿಗರನ್ನು ರಂಜಿಸುವ ಸತೀಶ್ ನೀನಾಸಂ 'ಟೈಗರ್ ಗಲ್ಲಿ' ಚಿತ್ರದಲ್ಲಿ ರಗಡ್ ಮತ್ತು ಮಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಈ ಚಿತ್ರದ ಹಾಡುಗಳನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಲಾಗಿದೆ.

'ಟೈಗರ್ ಗಲ್ಲಿ' ಚಿತ್ರದಲ್ಲಿ ಸತೀಶ್ ನೀನಾಸಂ ರವರ ಮಂಡ್ಯ ಶೈಲಿಯ ಭಾಷೆ ಬಳಕೆಯಲ್ಲಿ ಹಾಡುಗಳನ್ನು ರಚಿಸಲಾಗಿದ್ದು ಜ್ಯೂಕ್ ಬಾಕ್ಸ್ ನಲ್ಲಿ ಒಟ್ಟಾರೆ 9 ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳಲ್ಲಿ ವಿಜಯ್ ಪ್ರಕಾಶ್ ರವರು ಹಾಡಿರುವ 'ಫುಲ್ಲು ಪವರ್ರು' ಎಂಬ ಹಾಡು ಎಲ್ಲರಿಗೂ ನೆಚ್ಚಿನ ಹಾಡು. ಇದೇ ಹಾಡು ಸತೀಶ್ ನೀನಾಸಂ ರವರಿಗೂ ಫೇವರಿಟ್ ಆಗಿದ್ದು, ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

Sathish Ninasam Starrer 'Tiger Galli' movie Songs Released

ಸತೀಶ್ ನೀನಾಸಂ ಗೆ 'ಟೈಗರ್ ಗಲ್ಲಿ' ಚಿತ್ರದಲ್ಲಿ ಭಾವನಾ ರಾವ್ ರವರು ಜೊತೆಯಾಗಿ ನಟಿಸಿದ್ದಾರೆ. ಅಲ್ಲದೇ ರೋಶನಿ ಪ್ರಕಾಶ್, ವಿಶೇಷ ಪಾತ್ರದಲ್ಲಿ ಪೂಜಾ ಲೋಕೇಶ್ ಅವರು ಅಭಿನಯಿಸಿದ್ದಾರೆ.

ಟೈಗರ್ ಗಲ್ಲಿ ಚಿತ್ರವನ್ನು 'ಡೆಡ್ಲಿಸೋಮ' ನಿರ್ದೇಶಕರಾದ ರವಿ ಶ್ರೀವತ್ಸ ರವರು ಡೈರೆಕ್ಟ್ ಮಾಡಿದ್ದು, ಎಂ.ಎನ್.ಕುಮಾರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ರವರು ಸಂಗೀತ ಸಂಯೋಜನೆ ಮಾಡಿದ್ದಾರೆ. 'ಟೈಗರ್ ಗಲ್ಲಿ' ಚಿತ್ರದ ಮಧುರ ಹಾಡುಗಳನ್ನು ಕೇಳಲು ಕ್ಲಿಕ್ ಮಾಡಿ.

English summary
Kannada Actor Sathish Ninasam Starrer 'Tiger Galli' Songs Released. This movie is directed by Ravi Srivatsa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada