»   » ವಾಟ್ಸಾಪ್ ಮೂಲಕ 'ಶಬರಿಮಲೆ ಯಾತ್ರೆ' ಆಡಿಯೋ

ವಾಟ್ಸಾಪ್ ಮೂಲಕ 'ಶಬರಿಮಲೆ ಯಾತ್ರೆ' ಆಡಿಯೋ

Posted By:
Subscribe to Filmibeat Kannada

ಸಾಮಾನ್ಯವಾಗಿ ಆಡಿಯೋ ಬಿಡುಗಡೆ ಸಮಾರಂಭ ಎಂದರೆ ಯಾವುದೋ ಪಂಚತಾರಾ ಹೋಟೆಲ್ ನಲ್ಲೋ ಅಥವಾ ಇನ್ಯಾವುದೋ ಮೈದಾನದಲ್ಲಿ ಬೃಹತ್ ವೇದಿಕೆ ಹಾಕಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಇದ್ಯಾವುದರ ಗೋಜಿಗೆ ಹೋಗದೆ ಸಿಂಪಲ್ಲಾಗಿ ವಾಟ್ಸಾಫ್ ಮೂಲಕ ಆಡಿಯೋ ಬಿಡುಗಡೆ ಮಾಡಲಾಗಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಮಹಿಮೆಯನ್ನು ಸಾರುವ ಕಥೆ ಹೊಂದಿರುವ 'ಶಬರಿಮಲೆ ಯಾತ್ರೆ' ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜಯನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಾಟ್ಸ್ ಆಪ್ ಮೂಲಕ ಚಿತ್ರದ ಹಾಡುಗಳನ್ನು ಭಕ್ತಾಧಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.

shabari-male-yatre-audio-on-whatsapp

ಚಿತ್ರ ತಂಡ ಪ್ರಕಟಿಸುವ ನಿಗದಿತ ಮೊಬೈಲ್ ನಂಬರ್ ಗೆ ಕರೆ ಮಾಡಿದರೆ ಈ ಚಿತ್ರದ ಹಾಡುಗಳನ್ನು ಕಳುಹಿಸಿಕೊಡಲಾಗುವುದು. ಸಾಯಿರಾಮ್ ಶಾಂತಕುಮಾರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗಂಧರ್ವರಾಯರಾವುತ್ ಸಂಗೀತ ಮತ್ತು ಸಾಹಿತ್ಯ ಜಿ.ರೇಣುಕುಮಾರ್ ಛಾಯಾಗ್ರಹಣವಿದೆ.

ಸಂಜೀವರೆಡ್ಡಿ ಸಂಕಲನ, ಅಕ್ಷಯ್ ಕುಮಾರ್ ಸಹ ನಿರ್ಮಾಪಕರಾಗಿದ್ದು ಮುಂದಿನ ತಿಂಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಎನ್.ಎಸ್.ಕುಮಾರ್ ತಿಳಿಸಿದ್ದಾರೆ. ಚಿತ್ರದಲ್ಲಿ ಅನಿರುದ್ಧ್, ಕುಶಾಲ್, ಅಕ್ಷಯ್ ಕುಮಾರ್ ಶೂಟಿಂಗ್ ಕೃಷ್ಣ, ಗುರುಪ್ರಸಾದ್, ಅಮರನಾಥ್ ಆರಾಧ್ಯ, ವಿವೇಕ್ ಇನ್ನು ಮುಂತಾದವರಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada movie 'Shabari Male Yatre' team recently release audio of the movie on Whatsapp tool. Gandharvaraya Ravut scores the music, the movie lead Aniruddh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada