For Quick Alerts
  ALLOW NOTIFICATIONS  
  For Daily Alerts

  'ವೇದ' ಸಿನಿಮಾದಲ್ಲಿ ವೀರ ಜುಂಜಪ್ಪನ ಕುರಿತು ಹಾಡು: ಯಾರು ಈ ಐತಿಹಾಸಿಕ ವ್ಯಕ್ತಿ?

  By ಚಿತ್ರದುರ್ಗ ಪ್ರತಿನಿಧಿ
  |

  ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ 'ವೇದ' ಚಿತ್ರ ರಾಜ್ಯದಾದ್ಯಂತ ತೆರೆಕಾಣಲು ಸಿದ್ದವಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಗುರುವಾರ (ಡಿಸೆಂಬರ್ 15) ಚಿತ್ರದುರ್ಗದಲ್ಲಿ ಚಿತ್ರದ ಹಾಡೊಂದು ಬಿಡುಗಡೆಯಾಗಲಿದ್ದು, ನಂತರ ಡಿಸೆಂಬರ್ 23ರಂದು ಚಿತ್ರ ರಾಜ್ಯದಾದ್ಯಂತ ತೆರೆಮೇಲೆ ಪ್ರದರ್ಶನಗೊಳ್ಳಲಿದೆ.

  ಹಾಡಿನ ಬಿಡುಗಡೆ ಸಮಾರಂಭವನ್ನು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಈ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ 'ವೇದ' ಚಿತ್ರದಲ್ಲಿ ಬುಡುಕಟ್ಟು ಕಾಡುಗೊಲ್ಲ ಸಮುದಾಯ ಕಾಲಾವಿದರೊಬ್ಬರು ಹಾಡಿರುವ ಹಾಡನ್ನು ಚಿತ್ರದ ನಾಯಕ ನಟ ಶಿವರಾಜ್ ಕುಮಾರ್ ಸೇರಿದಂತೆ ಮತ್ತಿತರರು ಬಿಡುಗಡೆ ಮಾಡಲಿರುವುದು ವಿಶೇಷ.

  ವೀರ ಜುಂಜಪ್ಪನ ಕುರಿತಾದ ಹಾಡು

  ವೀರ ಜುಂಜಪ್ಪನ ಕುರಿತಾದ ಹಾಡು

  ಬುಡಕಟ್ಟು ಸಮುದಾಯದಲ್ಲಿ ಕಂಡುಬರುವ ಸಾಂಸ್ಕೃತಿಕ ವೀರ ಜುಂಜಪ್ಪ ಕಾಡುಗೊಲ್ಲರ ಮಹಾನ್ ನಾಯಕ. ಈ ಮಹಾನ್ ಪುರುಷನ ಬಗ್ಗೆ ಜುಂಜಪ್ಪನ ಮಹಾಕಾವ್ಯವಿದೆ. ಚಿತ್ರದುರ್ಗ ಹಾಗೂ ತುಮಕೂರು ಭಾಗದ ಜನಪದ ಸೊಗಡು ಕುರಿತಂತೆ ಈ ಹಾಡಿನ ವಿಶೇಷತೆಯಾಗಿದ್ದು, ಈ ಹಾಡು ವೇದ ಚಿತ್ರದ ಪ್ರಮುಖ ಭಾಗವಾಗಿದೆ.

  ಬುಡಕಟ್ಟು ಜನಾಂಗದ ಮೋಹನ್‌ ಗಾಯನ

  ಬುಡಕಟ್ಟು ಜನಾಂಗದ ಮೋಹನ್‌ ಗಾಯನ

  ಜುಂಜಪ್ಪನ ಹಾಡನ್ನು ಸ್ಥಳೀಯ ಗಾಯಕ ಮೋಹನ್ ಕುಮಾರ್ ಅವರು ಹಾಡಿದ್ದಾರೆ. ಈ ಹಾಡಿನ ಚಿತ್ರೀಕರಣವನ್ನು ನಾಲ್ಕು ದಿನಗಳ ಕಾಲ ರಾಮನಗರ ಬಳಿ ಇರುವ ಕುಟರಲ್ ಬೆಟ್ಟ ಹಾಗೂ ಬೆಂಗಳೂರಿನಲ್ಲಿ ಹಾಡಿನ ದೃಶ್ಯವನ್ನು ಚಿತ್ರಿಕರಿಸಲಾಗಿದ್ದು, ಈ ಹಾಡು ಮೂರರಿಂದ ನಾಲ್ಕು ನಿಮಿಷ ಹಾಡಿದ್ದಾರೆ. ಈ ವೇದ ಚಿತ್ರ ಸಾಮಾಜಿಕ ಸಂದೇಶವನ್ನು ಒಳಗೊಂಡಿದೆ. ಇನ್ನು ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಸಿನಿ ತಾರೆಯರು ಆಗಮಿಸಲಿದ್ದಾರೆ.

  ತುಮಕೂರಿನ ಸಣ್ಣ ಹಳ್ಳಿಯ ಗಾಯಕ

  ತುಮಕೂರಿನ ಸಣ್ಣ ಹಳ್ಳಿಯ ಗಾಯಕ

  ತುಮಕೂರು ಜಿಲ್ಲೆಯ ಬೆಳ್ಳಾವಿಯವರಾದ ಮೋಹನ್ ಜಾನಪದ ಮೋಹನ್ ಕುಮಾರ್ ಎಂದೇ ಜನಪ್ರಿಯರು. ಬುಡುಕಟ್ಟು ಕಾಡುಗೊಲ್ಲ ಸಮುದಾಯ ಯುವ ಪ್ರತಿಭೆ ಇವರಾಗಿದ್ದು, ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಸಹ ತನ್ನ ಕಲೆಯನ್ನು ಪ್ರದರ್ಶಿಸಿದ್ದಾರೆ. ಮೋಹನ್ ಕುಮಾರ್ ಅವರು ಜುಂಜಪ್ಪ, ಯತ್ತಪ್ಪ ಜಂಪಣ್ಣ, ಕಾಟಪ್ಪ, ಕ್ಯಾತೇಲಿಂಗ, ಕರಡಿಬುಳ್ಳಪ್ಪ, ಚಿತ್ರಲಿಂಗ, ಕರಿಯೊಬೆನಹಳ್ಳಿ ಮಾರಕ್ಕ, ಭರಮಗಿರಿ ಈರಣ್ಣ ಹೀಗೆ ಇನ್ನಿತರ ದೇವರೆಗಳ ಮೇಲೆ ಹಾಡುಗಳನ್ನು ಹಾಡುತ್ತಾರೆ. ಇವರಿಗೆ ರಾಜ್ಯದ ಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ.

  ಹೋಮ್ ಬ್ಯಾನರ್‌ನ ಮೊದಲ ಸಿನಿಮಾ

  ಹೋಮ್ ಬ್ಯಾನರ್‌ನ ಮೊದಲ ಸಿನಿಮಾ

  ಇದೀಗ ಶಿವರಾಜ್ ಕುಮಾರ್ ಅಭಿನಯದ ವೇದ ಚಿತ್ರದಲ್ಲಿ ಜುಂಜಪ್ಪನ ಹಾಡು ಹಾಡಲು ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ನನಗೆ ಹಾಡಲು ಅವಕಾಶ ಮಾಡಿ ಕೊಟ್ಟ ಚಿತ್ರದ ನಿರ್ದೇಶಕ ಹರ್ಷ ಸರ್ ಹಾಗೂ ಶಿವಣ್ಣ ಸರ್ ಮತ್ತು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು ಎನ್ನುತ್ತಾರೆ ಗಾಯಕ ಮೋಹನ್ ಕುಮಾರ್. 'ವೇದ' ಸಿನಿಮಾವು ಶಿವಣ್ಣ ನಟನೆಯ 125ನೇ ಸಿನಿಮಾ ಆಗಿದ್ದು, ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವು ಶಿವರಾಜ್ ಕುಮಾರ್ ಅವರ ಹೋಮ್‌ ಬ್ಯಾನರ್‌ನ ಮೊದಲ ಸಿನಿಮಾ ಆಗಿದೆ.

  English summary
  Shiva Rajkumar's 125th movie Vedha's special song about Veera Junjappa releasing on December 15.
  Wednesday, December 14, 2022, 9:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X