»   » ಶಿವಣ್ಣ 'ವಜ್ರಕಾಯ' ಹಾಡುಗಳಿಗೂ ಬಂದ್ ಬಿಸಿ

ಶಿವಣ್ಣ 'ವಜ್ರಕಾಯ' ಹಾಡುಗಳಿಗೂ ಬಂದ್ ಬಿಸಿ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ವಜ್ರಕಾಯ'. 'ಭಜರಂಗಿ' ಸಿನಿಮಾ ನಂತರ ಎ.ಹರ್ಷ ಮತ್ತು ಶಿವಣ್ಣ ಒಂದಾಗಿರುವುದು 'ವಜ್ರಕಾಯ'ದಲ್ಲಿ. ಆದ್ದರಿಂದ ಸಿನಿಮಾದ ಬಗ್ಗೆ ಎಕ್ಸ್ ಪೆಕ್ಟೇಷನ್ಸ್ ಕೊಂಚ ಜಾಸ್ತಿ ಇದೆ.

ಇತ್ತೀಚೆಗಷ್ಟೇ ಇಟಲಿಯಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ವಜ್ರಕಾಯ' ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ. ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವುದಕ್ಕೆ ಓಡಾಡುತ್ತಿರುವ ನಿರ್ದೇಶಕ ಎ.ಹರ್ಷ ಇದೇ ವಾರ, ಅಂದ್ರೆ ಏಪ್ರಿಲ್ 18 ರಂದು ಆಡಿಯೋ ರಿಲೀಸ್ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು.


ಆದ್ರೆ, ಆಡಿಯೋ ಬಿಡುಗಡೆ ಸಮಾರಂಭ ಈಗ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣ 'ಕರ್ನಾಟಕ ಬಂದ್'. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯ 'ಮೇಕೆದಾಟು ಯೋಜನೆ'ಗೆ ಸಂಬಂಧಪಟ್ಟಂತೆ ತಮಿಳುನಾಡಿಗೆ ತಿರುಗೇಟು ನೀಡಲು ವಿವಿಧ ಕನ್ನಡ ಪರ ಸಂಘಟನೆಗಳು ಏಪ್ರಿಲ್ 18 ರಂದು 'ಕರ್ನಾಟಕ ಬಂದ್'ಗೆ ಕರೆ ನೀಡಿದೆ. ['ವಜ್ರಕಾಯ' ಚಿತ್ರದಲ್ಲಿ ಶಿವಣ್ಣನ ಕಮಾಲ್ ನೋಡಿದ್ದೀರಾ.. ]


vajrakaya

ಇದಕ್ಕೆ ಸಂಪೂರ್ಣ ಬೆಂಬಲ ಸೂಚಿಸುವುದಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಚಿತ್ರೀಕರಣ, ಪ್ರದರ್ಶನ ಮತ್ತು ಇಡೀ ಚಿತ್ರೋದ್ಯಮದ ಎಲ್ಲಾ ಕಾರ್ಯ ಚಟುವಟಿಕೆಗಳು ಏಪ್ರಿಲ್ 18 ರಂದು ಸ್ಥಗಿತವಾಗುವುದರಿಂದ 'ವಜ್ರಕಾಯ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಕೂಡ ಪೋಸ್ಟ್ ಪೋನ್ ಮಾಡಲಾಗಿದೆ.


ಏಪ್ರಿಲ್ 18 ರ ಬದಲು ಏಪ್ರಿಲ್ 21 ರಿಂದ ಮಾರುಕಟ್ಟೆಯಲ್ಲಿ 'ವಜ್ರಕಾಯ' ಆಡಿಯೋ ಲಭ್ಯವಾಗಲಿದೆ. ಆದ್ರೆ, ಅಫೀಶಿಯಲ್ ಆಡಿಯೋ ಬಿಡುಗಡೆ ಸಮಾರಂಭ ದಿನಾಂಕ ನಿಗದಿ ಮಾಡಿಲ್ಲ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ವೈಯುಕ್ತಿಕವಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. [ಕನ್ನಡದಲ್ಲಿ ಕೊಲವೆರಿಡಿ ಹಾಡು ಬಂದಿದೆ, ಹೆಡ್ ಸೆಟ್ ಹಾಕ್ಕೊಳ್ಳಿ]


ಕನ್ನಡ ನಾಡು-ನೆಲ-ಜಲದ ಬಗ್ಗೆ ಅಪ್ಪಾಜಿಯಂತೆ, ಶಿವಣ್ಣ ಕೂಡ ಅಪಾರ ಅಭಿಮಾನ ಹೊಂದಿದ್ದಾರೆ. ಹೀಗಾಗಿ 'ವಜ್ರಕಾಯ' ಆಡಿಯೋ ರಿಲೀಸ್ ನ ಮುಂದಕ್ಕೆ ತಳ್ಳಿದ್ದಾರೆ. ಅಂದ್ಹಾಗೆ 'ವಜ್ರಕಾಯ', ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ 50ನೇ ಚಿತ್ರ. (ಫಿಲ್ಮಿಬೀಟ್ ಕನ್ನಡ)

English summary
Hat-trick hero Shivarajkumar starrer 'Vajrakaya' audio release function was scheduled on this Saturday (April 18th). But due to Karnataka Bandh, Audio release function is postponed. Instead, Audio C.D's will be available in the market from April 21st.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada