Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವೇದ' ಶಿವಣ್ಣನ 'ಪುಷ್ಪ' ಜಪ: ಹಾಡು ನೋಡಿ 'ಜನುಮದ ಜೋಡಿ' ನೆನಪಾಯ್ತು ಎಂದ ಫ್ಯಾನ್ಸ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ವೇದ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರದ ಒಂದೊಂದೇ ಸಾಂಗ್ ರಿಲೀಸ್ ಮಾಡಿ ನಿರ್ದೇಶಕ ಎ. ಹರ್ಷ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಇದೀಗ ಸ್ವತಃ ಶಿವಣ್ಣ ಹಾಡಿರುವ 'ಪುಷ್ಪ ಪುಷ್ಪ' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
'ವೇದ' ಎ. ಹರ್ಷ ಹಾಗೂ ಶಿವಣ್ಣನ ಕಾಂಬಿನೇಷನ್‌ನಲ್ಲಿ ಬರ್ತಿರೋ 4ನೇ ಸಿನಿಮಾ. ಟೈಟಲ್‌ನಿಂದಲೇ ಭಾರೀ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಪೋಸ್ಟರ್, ಟೀಸರ್‌ಗಳು ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದೆ. ಗೀತಾ ಪಿಕ್ಷರ್ಸ್ ಬ್ಯಾನರ್‌ನಲ್ಲಿ ಗೀತಾ ಶಿವರಾಜ್‌ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸಂಸ್ಥೆ ಸಾಥ್ ಸಿಕ್ಕಿದೆ. ಅಂದಹಾಗೆ ಇದು ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ನಟನೆಯ 125ನೇ ಸಿನಿಮಾ ಎನ್ನುವುದು ವಿಶೇಷ.
ರಕ್ಷಿತಾ
ಪ್ರೇಮ್
ಸಲಹೆ
ಮೇರೆಗೆ
ಕೊರಗಜ್ಜನ
ಸನ್ನಿಧಿಗೆ
ಭೇಟಿ
ನೀಡಿದ
ಶಿವಣ್ಣ:
ಎಲ್ಲ
ದೈವ
ಇಚ್ಛೆ
ಎಂದ
ಸೆಂಚುರಿಸ್ಟಾರ್!
'ಗಿಲ್ಲಕ್ಕೋ ಶಿವ' ಸೂಪರ್ ಹಿಟ್ ಆದಮೇಲೆ 'ಪುಷ್ಪ ಪುಷ್ಪ' ಸಾಂಗ್ ಸದ್ದು ಮಾಡಲು ಶುರು ಮಾಡಿದೆ. ಅರ್ಜುನ್ ಜನ್ಯಾ ಹಾಕಿರುವ ಟ್ಯೂನ್‌ಗೆ ವಿ. ನಾಗೇಂದ್ರ ಪ್ರಸಾದ್ ಸಾಲುಗಳನ್ನು ಪೋಣಿಸಿದ್ದಾರೆ. ಬಹಳ ದಿನಗಳ ನಂತರ ಶಿವಣ್ಣ ವಾಯ್ಸ್‌ನಲ್ಲಿ ಈ ಸಾಂಗ್ ಮೂಡಿ ಬಂದಿದೆ.

'ಪುಷ್ಪ' ಹಿಂದೆ ಬಿದ್ದ ಶಿವ
ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಗಾನವಿ ಲಕ್ಷ್ಮಣ್ ಮಿಂಚಿದ್ದಾರೆ. ಆಕೆಯ ಹೆಸರು ಪುಷ್ಪ. ಹಾಗಾಗಿ ಶಿವ 'ಪುಷ್ಪ' ಹಿಂದೆ ಬಿದ್ದು ಕಾಡುವ ಸನ್ನಿವೇಶದಲ್ಲಿ ಈ ಹಾಡು ಮೂಡಿ ಬಂದಿದೆ. ಬಹಳ ಸೊಗಸಾಗಿ ಅದನ್ನು ಚಿತ್ರತಂಡ ಕಟ್ಟಿಕೊಟ್ಟಿದೆ. ಒಂದಷ್ಟು ವಿಷ್ಯುವಲ್ಸ್ ಜೊತೆಗೆ ಮೇಕಿಂಗ್ ಮಿಕ್ಸ್ ಮಾಡಿ ಈ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಮಾಡಿದೆ ಚಿತ್ರತಂಡ. ಛಾಯಾಗ್ರಾಹಕ ಸ್ವಾಮಿ ಗೌಡ ಬಹಳ ಸುಂದರವಾಗಿ ಹಾಡನ್ನು ಸೆರೆಹಿಡಿದಿರುವುದು ಗೊತ್ತಾಗುತ್ತಿದೆ. ಶಿವಣ್ಣನ ಎನರ್ಜಿ ನೋಡಿ ಫ್ಯಾನ್ಸ್ ಮತ್ತೊಮ್ಮೆ ಬಹುಪರಾಕ್ ಹೇಳುತ್ತಿದ್ದಾರೆ.

60- 70ರ ದಶಕದ 'ವೇದ' ಕಥೆ
'ವೇದ' ಚಿತ್ರದಲ್ಲಿ 60- 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. ಆ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮಿಸಿದೆ. ರವಿ ಸಂತೆಹಕ್ಲು ನಿರ್ದೇಶನದಲ್ಲಿ ಸಾಕಷ್ಟು ಸೆಟ್‌ಗಳನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಕಾಸ್ಟ್ಯೂಮ್, ಬ್ಯಾಕ್‌ಡ್ರಾಪ್ ಎನ್ನವನ್ನು ಕಥೆ ತಕ್ಕಂತೆ ತೋರಿಸಲಾಗಿದೆ. ಇನ್ನು ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಕೂಡ ಒಂದೊಳ್ಳೆ ಪಾತ್ರ ಮಾಡಿದ್ದಾರೆ. 'ಪುಷ್ಪ ಪುಷ್ಪ' ಹಾಡಿನಲ್ಲಿ ಶಿವಣ್ಣನಿಗೆ ಅವರು ಸಾಥ್ ಕೊಟ್ಟಿದ್ದಾರೆ.

ಇದು ಫ್ಯಾಂಟಸಿ ಕಥೆ ಅಲ್ಲ
ಒಂದೊಳ್ಳೆ ಸಂದೇಶವನ್ನು 'ವೇದ' ಸಿನಿಮಾ ಹೊತ್ತು ಬರ್ತಿದೆ. ಬೆಂಗಳೂರು, ಮೈಸೂರು ಹಾಗೂ ಕೇರಳದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ ಇದು ಫ್ಯಾಂಟಸಿ ಕಥೆ ಅಲ್ಲ. ದಶಕಗಳ ಹಿಂದೆ ಒಂದು ಹಳ್ಳಿಯಲ್ಲಿ ನಡೆದ ಕಥೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆಗಳ ಸುತ್ತಾ ಕಥೆ ಸುತ್ತುತ್ತದೆ ಎಂದು ಚಿತ್ರತಂಡ ಹೇಳಿದೆ.

ಡಿಸೆಂಬರ್ 23ಕ್ಕೆ ಸಿನಿಮಾ ತೆರೆಗೆ
'ವೇದ' ಚಿತ್ರವನ್ನು ತೆಲುಗು, ತಮಿಳಿನಲ್ಲೂ ಡಬ್ ಮಾಡುವ ಕೆಲಸ ನಡೀತಿದೆ. ಡಿಸೆಂಬರ್ 23ಕ್ಕೆ ರಾಜ್ಯದ್ಯಂತ 300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಅದೇ ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲೂ ಏಕಕಾಲಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಡಿಸೆಂಬರ್ 15ಕ್ಕೆ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನೆರವೇರಲಿದೆ.