»   » ವೀರಪ್ಪನ್ ಗಾಗಿ ಬಂದೂಕಿನ ಜೊತೆ ಮೈಕ್ ಹಿಡಿದ ಶಿವಣ್ಣ

ವೀರಪ್ಪನ್ ಗಾಗಿ ಬಂದೂಕಿನ ಜೊತೆ ಮೈಕ್ ಹಿಡಿದ ಶಿವಣ್ಣ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬರೀ 'ನಾಟ್ಯಸಾರ್ವಭೌಮ' ಅಲ್ಲ, ಅಪ್ಪನಂತೆ ಗಾನಕೋಗಿಲೆ ಕೂಡಾ ಹೌದು ಅಂತ ಈಗಾಗಲೇ ಪ್ರೂವ್ ಮಾಡಿದ್ದಾರೆ. 'ಜನುಮದ ಜೋಡಿ', 'ಲಕ್ಷ್ಮಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಗಾನಸುಧೆ ಹರಿಸಿರುವ ಶಿವಣ್ಣ ಈಗ ಅಂತದ್ದೇ ಪ್ರಯತ್ನಕ್ಕೆ ಮತ್ತೊಮ್ಮೆ ಕೈಹಾಕಿದ್ದಾರೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್ 'ಚಿತ್ರದ ಟೈಟಲ್ ಟ್ರ್ಯಾಕ್ ಗೆ ಕರುನಾಡ ಚಕ್ರವರ್ತಿ ದನಿಯಾಗಲಿದ್ದಾರೆ. ಸಾಯಿ ಕಾರ್ತಿಕ್ ಹಾಗೂ ರವಿಶಂಕರ್ ಸಂಗೀತ ನಿರ್ದೇಶನದಲ್ಲಿ ಹೊರ ಹೊಮ್ಮಲಿರುವ ಪವರ್ ಫುಲ್ ಗಾನಕ್ಕೆ ಕಂಠದಾನ ಮಾಡಲಿದ್ದಾರೆ ಶಿವರಾಜ್ ಕುಮಾರ್. [ಕುತೂಹಲ ಹುಟ್ಟಿಸಿದ 'ಕಿಲ್ಲಿಂಗ್ ವೀರಪ್ಪನ್' ಪೋಸ್ಟರ್ ]

Shivarajkumar to sing for RGV's Killing Veerappan

ಮುದ್ದು ಮಗಳ ಮದುವೆ ತಯಾರಿಯಲ್ಲಿರುವ ಶಿವಣ್ಣ ಸದ್ಯದಲ್ಲೇ ಬಿಡುವು ಮಾಡಿಕೊಂಡು ಹಾಡು ಹಾಡಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಟ್ರೈಲರ್ ಭರ್ಜರಿ ಸದ್ದು ಮಾಡುತ್ತಿದೆ. ಅದರಂತೆ ಹಾಡುಗಳಿಗೂ ಧಮ್ ಇರಲಿ ಅನ್ನುವ ಕಾರಣಕ್ಕೆ ಟೈಟಲ್ ಸಾಂಗ್ ಗೆ ಶಿವಣ್ಣ ಧ್ವನಿ ಬೆಸ್ಟ್ ಅಂತ ವರ್ಮಾ ಈ ಪ್ಲಾನ್ ಮಾಡಿದ್ದಾರೆ. [ವೀರಪ್ಪನ್ ಕೊಲ್ಲೋಕೆ ಶಿವರಾಜ್ ಕುಮಾರ್ ಸಿದ್ಧ ]

Shivarajkumar to sing for RGV's Killing Veerappan

ಸದ್ಯಕ್ಕೆ ಶೂಟಿಂಗ್ ನಲ್ಲಿ ಬಿಜಿಯಾಗಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಶಿವಣ್ಣ ಗಾನಬಜಾನ ಇನ್ನು ಕೆಲವೇ ದಿನಗಳಲ್ಲಿ ನಿಮ್ಮೆದುರಿಗೆ ಬರಲಿದೆ. 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಇನ್ನಷ್ಟು ಮಾಹಿತಿಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

    English summary
    Kannada Actor Shivarajkumar will be singing the title track in Ram Gopal Varma's 'Killing Veerappan'. Sai Karthik and Ravishankar are composing music for the film.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada