»   » ಬರ್ತಡೇ ಸ್ಪೆಷಲ್ - ಶ್ರೇಯಾ ಘೋಷಾಲ್ ಟಾಪ್ 10 ಹಾಡು

ಬರ್ತಡೇ ಸ್ಪೆಷಲ್ - ಶ್ರೇಯಾ ಘೋಷಾಲ್ ಟಾಪ್ 10 ಹಾಡು

Posted By:
Subscribe to Filmibeat Kannada

ಸುಮಧುರ ಕಂಠದಿಂದ ಕೇಳುಗರ ಮನಗೆದ್ದಿರುವ ಗಾಯಕಿ ಶ್ರೇಯಾ ಘೋಷಾಲ್. ಇಂಪಾದ ಕಂಠಸಿರಿಯಿಂದ ಎಲ್ಲರ ನೆಚ್ಚಿನ ಸಿಂಗರ್ ಆಗಿರುವ ಶ್ರೇಯಾಗಿಂದು ಹುಟ್ಟುಹಬ್ಬದ ಸಂಭ್ರಮ.

31 ನೇ ವಸಂತಕ್ಕೆ ಕಾಲಿಟ್ಟಿರುವ ಶ್ರೇಯಾ ಘೋಷಾಲ್, ಗಾನಲೋಕಕ್ಕೆ ಕಾಲಿಟ್ಟಿದ್ದು ಪುಟ್ಟ ಬಾಲಕಿಯಾಗಿರುವಾಗಲೇ. ಮೂಲತಃ ಬೆಂಗಾಲಿ ಆಗಿರುವ ಶ್ರೇಯಾ 'ಸ ರೆ ಗ ಮ ಪ' ಕಾರ್ಯಕ್ರಮದಲ್ಲಿ ಗುರುತಿಸಿಕೊಳ್ಳುವ ಮೂಲಕ ಬಾಲಿವುಡ್ ಗೆ ಅಡಿಯಿಟ್ಟರು.

16ನೇ ವಯಸಲ್ಲೇ 'ದೇವ್ ದಾಸ್' ಚಿತ್ರಕ್ಕೆ ಹಾಡು ಹಾಡಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಈ ಗಾನ ಕೋಗಿಲೆ, 'ಕೃಷ್ಣ ನೀ ಬೇಗನೆ ಬಾರೋ....' ಅಂತ ಕೃಷ್ಣನ ಜಪ ಮಾಡುತ್ತಾ 'ಪ್ಯಾರಿಸ್ ಪ್ರಣಯ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಶ್ರೇಯಾ ಘೋಷಾಲ್ ಹುಟ್ಟುಹಬ್ಬದ ಸಂಭ್ರಮದಲ್ಲಿ, ಕನ್ನಡದಲ್ಲಿ 'ಮೆಲೊಡಿ ಕ್ವೀನ್' ಹಾಡಿರುವ ಮನತಣಿಸುವ ಹಾಡುಗಳ ಗುಚ್ಛ ಇಲ್ಲಿವೆ. ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ

'ಸ ರೆ ಗ ಮ ಪ' ಕಾರ್ಯಕ್ರಮದಲ್ಲಿ ಶ್ರೇಯಾ ಹಾಡುವುದನ್ನ ನೋಡಿ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಾಯಿ ಇಂಪ್ರೆಸ್ ಆಗಿದ್ದರು. ಇದನ್ನ ತಿಳಿದ ಬನ್ಸಾಲಿ, ಶ್ರೇಯಾ ಫೋನ್ ನಂಬರ್ ಪತ್ತೆ ಹಚ್ಚಿ ತಮ್ಮ ಮುಂದಿನ ಚಿತ್ರ 'ದೇವ್ ದಾಸ್' ನಲ್ಲಿ ಹಾಡು ಹಾಡುವುದಕ್ಕೆ ಬುಲಾವ್ ನೀಡೇ ಬಿಟ್ಟರು. 'ದೇವ್ ದಾಸ್' ಚಿತ್ರದ ಐದು ಹಾಡುಗಳಿಗೆ ದನಿಯಾದ ಶ್ರೇಯಾ, 'ರಾಷ್ಟ್ರ ಪ್ರಶಸ್ತಿ'ಯನ್ನ ಮುಡಿಗೇರಿಸಿಕೊಂಡರು. ಇಲ್ಲಿಂದಲೇ ಆಕೆ ಯಶಸ್ಸಿನ ಏಣಿ ಹತ್ತೋಕೆ ಶುರುಮಾಡಿದ್ದು. ಶ್ರೇಯಾ ಗಾನ ಸುಧೆಯನ್ನ ಕೇಳಿದ್ದ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ 'ಪ್ಯಾರಿಸ್ ಪ್ರಣಯ' ಚಿತ್ರದ ಮೂಲಕ ಶ್ರೇಯಾರನ್ನ ಕನ್ನಡಕ್ಕೆ ಕರೆತಂದರು. [ಗಾಯಕಿ ಶ್ರೇಯಾಗೆ ಇಂದು ಉಲ್ಲಾಸದ ಹೂ ಮಳೆ]

ಸುಶಿಕ್ಷಿತ ಬ್ರಾಹ್ಮಣರ ಹುಡುಗಿ ಶ್ರೇಯಾ

ಬಂಗಾಳದ ಬೆಹ್ರಾಮ್ ಪುರದ ಸುಶಿಕ್ಷಿತ ಬ್ರಾಹ್ಮಣ ಪರಿವಾರದಲ್ಲಿ ಹುಟ್ಟಿದಾಕೆ ಶ್ರೇಯಾ ಘೋಷಾಲ್. ತಂದೆ ಬಿಸ್ವಜಿತ್ ಘೋಷಾಲ್ ಪರಮಾಣು ವಿಜ್ಞಾನಿ, ತಾಯಿ ಸ್ನಾತಕ್ಕೋತ್ತರ ಪದವೀಧರೆ. ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಶ್ರೇಯಾ 'ಸ ರೆ ಗ ಮ ಪ' ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಜಯ ಸಾಧಿಸಿದ್ದಾರೆ. [ಹೊಸ ಬಾಳಿನ ಹೊಸಿಲಲಿ ಗಾಯಕಿ ಶ್ರೇಯಾ ಘೋಷಾಲ್]

ಐಶ್ವರ್ಯ ರೈ ಅಂದ್ರೆ ಪಂಚಪ್ರಾಣ

ಚಿಕ್ಕ ವಯಸ್ಸಿನಿಂದಲೂ ಶ್ರೇಯಾ ಘೋಷಾಲ್ ಗೆ ಐಶ್ವರ್ಯ ರೈ ಅಂದ್ರೆ ಪಂಚಪ್ರಾಣ. ಐಶೂ ಸಿನಿಮಾಗಳನ್ನ ಬಿಡದೆ ನೋಡುತ್ತಿದ್ದ ಶ್ರೇಯಾ, 'ದೇವ್ ದಾಸ್' ಚಿತ್ರದಲ್ಲಿ ಪಾರೂ ಹಾಡುಗಳನ್ನ ಹಾಡುವ ಅವಕಾಶ ಸಿಕ್ಕಾಗ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದರಂತೆ. ಅಲ್ಲದೇ, ಶೂಟಿಂಗ್ ಕೂಡ ತೆರಳಿದ್ದ ಶ್ರೇಯಾ, ಐಶ್ವರ್ಯ ಜೊತೆ ಮಾತನಾಡಿ ಅದೇ ಜೋಷ್ ನಲ್ಲಿ ಹಾಡು ಹಾಡಿದ್ದರಂತೆ. [ಗಾಯಕಿ ಶ್ರೇಯಾಗೆ ಇಂದು ಉಲ್ಲಾಸದ ಹೂ ಮಳೆ]

ಪ್ರಶಸ್ತಿಗಳ ಸರಮಾಲೆ ಶ್ರೇಯಾ ಕೊರಳಿಗೆ

ವೃತ್ತಿ ಬದುಕಿನಲ್ಲಿ ಹಲವಾರು ಸೂಪರ್ ಹಿಟ್ ಹಾಡುಗಳನ್ನ ನೀಡಿರುವ ಶ್ರೇಯಾ ಘೋಷಾಲ್ ಗಳಿಸಿರುವ ಪ್ರಶಸ್ತಿಗಳು ಒಂದೆರಡಲ್ಲ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿರುವ ಖ್ಯಾತಿ ಶ್ರೇಯಾಗೆ ಸಲ್ಲಬೇಕು. ಜೊತೆಗೆ ಕೇರಳಾ ಮತ್ತು ತಮಿಳು ನಾಡು ಸರ್ಕಾರದ ರಾಜ್ಯ ಪ್ರಶಸ್ತಿಯನ್ನೂ ಶ್ರೇಯಾ ಮುಡಿಗೇರಿಸಿಕೊಂಡಿದ್ದಾರೆ. [ಬೆಂಗಳೂರಿನಲ್ಲಿ ಶ್ರೇಯಾ ಆಹಾ ಎಂಥ ಆ ಕ್ಷಣ!]

ಎಲ್ಲಾ ಭಾಷೆಗಳನ್ನೂ ಹಿಂದಿಯಲ್ಲಿ ಬರೆದು ಹಾಡುತ್ತಾರೆ..!

ಶ್ರೇಯಾ ಘೋಷಾಲ್ ಬರೀ ಬಾಲಿವುಡ್ ಸಿಂಗರ್ ಮಾತ್ರ ಅಲ್ಲ. ಕನ್ನಡ, ತೆಲುಗು, ತಮಿಳು, ಗುಜರಾತಿ, ಮರಾಠಿ, ಪಂಜಾಬಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಹಾಡು ಹಾಡಿದ್ದಾರೆ. ಆದ್ರೆ, ಆ ಎಲ್ಲಾ ಭಾಷೆಗಳು ಶ್ರೇಯಾಗೆ ಕರಗತವಾಗಿದೆಯಾ? ಖಂಡಿತ ಇಲ್ಲ. ಯಾವುದೇ ಭಾಷೆ ಆಗಲಿ, ಎಲ್ಲವನ್ನೂ ಹಿಂದಿಯಲ್ಲಿ ಬರೆದುಕೊಂಡು, ಉಚ್ಚಾರಣೆಯನ್ನ ಸ್ಪಷ್ಟವಾಗಿ ಆಲಿಸಿ ನಂತ್ರ ಹಾಡುತ್ತಾರಂತೆ ಶ್ರೇಯಾ.

ಶ್ರೇಯಾ ಘೋಷಾಲ್ ಗೆ ಸ್ಪೂರ್ತಿ ಯಾರು?

ಗಾಯಕರ ಪೈಕಿ ಶ್ರೇಯಾ ಘೋಷಾಲ್ ಗೆ ಲತಾ ಮಂಗೇಶ್ಕರ್, ಆಶಾ ಬೋಸ್ಲೆ, ಕೆ.ಎಸ್.ಚಿತ್ರಾ ಪಂಚಪ್ರಾಣವಂತೆ. ಗಾಯನದಲ್ಲಿ ಪ್ರಖ್ಯಾತ ಗಾಯಕಿ ಗೀತಾ ದತ್ ಶ್ರೇಯಾ ಗೆ ಸ್ಪೂರ್ತಿ. ಇನ್ನೂ ಸಂಗೀತ ನಿರ್ದೇಶಕರ ಪೈಕಿ ಶ್ರೇಯಾಗೆ ಮದನ್ ಮೋಹನ್ ಮತ್ತು ಆರ್.ಡಿ.ಬರ್ಮನ್ ಫೇವರಿಟ್.

ಡಬಲ್ ಮೀನಿಂಗ್ ಸಾಂಗ್ ಹಾಡಲ್ಲ..!

ಐಟಂ ಸಾಂಗ್ ಗಳಿಗೆ ಹಾಡುವುದಕ್ಕೆ ಕೊಂಚ ಮುಜುಗರ ಪಡುವ ಶ್ರೇಯಾ, ಡಬಲ್ ಮೀನಿಂಗ್ ಸಾಹಿತ್ಯ ಇದ್ದರಂತೂ ಒಪ್ಪಿಕೊಳ್ಳುವುದೇ ಇಲ್ಲ. 'ಅಗ್ನಿಪತ್' ಚಿತ್ರದ 'ಚಿಕ್ನಿ ಚಮೇಲಿ' ಹಾಡಿನಲ್ಲೂ ಅಂತಹ ಕೆಲ ಸಾಲುಗಳು ತೆಗೆದ ಮೇಲೆ ಶ್ರೇಯಾ ಹಾಡುವುದಕ್ಕೆ ಮುಂದೆ ಬಂದರಂತೆ.

ನೆಚ್ಚಿನ ಗೆಳೆಯನ ಕೈಹಿಡಿದ ಶ್ರೇಯಾ

ತಮ್ಮ ದೀರ್ಘ ಕಾಲದ ಗೆಳೆಯ ಉದ್ಯಮಿ ಶೈಲಾದಿತ್ಯ ಮುಖ್ಯೋಪಾಧ್ಯಾಯ ಅವರನ್ನ ಇತ್ತೀಚೆಗಷ್ಟೇ ಶ್ರೇಯಾ ಕೈಹಿಡಿದರು.

ಫೇಸ್ ಬುಕ್ ನಲ್ಲಿ ಹೆಚ್ಚು ಜನಪ್ರಿಯ..!

ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಲೈಕ್ಸ್ ಪಡೆದಿರುವ ಸೆಲೆಬ್ರಿಟಿಗಳ ಪೈಕಿ ಶ್ರೇಯಾ ಘೋಷಾಲ್ ಕೂಡ ಒಬ್ಬರು. ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡುಲ್ಕರ್, ದೀಪಿಕಾ ಪಡುಕೋಣೆ ನಂತ್ರ 24.195 ಮಿಲಿಯನ್ ಗೂ ಹೆಚ್ಚು ಲೈಕ್ಸ್ ದಾಖಲಿಸಿದ್ದಾರೆ ಈ ಮೆಲೊಡಿ ಕ್ವೀನ್.

'ಶ್ರೇಯಾ ಘೋಷಾಲ್ ಡೇ'

State of Ohio, U.S ನಲ್ಲಿ ಪ್ರತಿ ಜೂನ್ 26 ನೇ ತಾರೀಖು 'ಶ್ರೇಯಾ ಘೋಷಾಲ್ ಡೇ'ನ ಆಚರಿಸಲಾಗುತ್ತೆ. 2010 ರಲ್ಲಿ ಮೊದಲು ಈ ದಿನಾಚರಣೆಯನ್ನ ಶ್ರೇಯಾ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣದಲ್ಲಿ ಆಚರಿಸಿದ್ದರು. ವಿಶ್ವದಾದ್ಯಂತ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರುವ ಶ್ರೇಯಾಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

English summary
Bollywood's Melody Queen Shreya Ghoshal turns 31st today (March 12th). On this occasion, here are the top 10 Super Hit songs sung by Shreya Ghoshal in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada