»   » 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿಂಪಲ್ ಗೀತೆ ಓದಿ

'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿಂಪಲ್ ಗೀತೆ ಓದಿ

Posted By:
Subscribe to Filmibeat Kannada
Simple Aagi Ondu Love Story Song Lyrics
ಬಹುನೀರೀಕ್ಷಿತ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಸಿಂಪಲ್ ಗೀತೆಗಳು ಹಾಗೂ ಅದರ ಸಾಹಿತ್ಯ ಬಿಡದೆ ಕಾಡುತ್ತಿದೆ. ಹೊಸಬ ಭರತ್ ಹೆಣೆದಿರುವ ಟ್ಯೂನ್ ಗಳಿಗೆ ಜೀವ ತುಂಬಿರುವ ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾ ಅವರ ಮಗಳು ಸೌಮ್ಯ ರಾವ್ ಹಾಡಿರುವ 'ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ' ಹಾಗೂ ಸೋನು ನಿಗಮ್ ದನಿಯಲ್ಲಿ ಬಂದಿರುವ 'ಬಾನಲಿ ಬದಲಾಗೋ ಬಣ್ಣವೇ ಭಾವನೆ..' ಹಾಡುಗಳು ಸರಳ ಸಾಹಿತ್ಯ, ಸಂಯೋಜನೆಯಿಂದ ಎಲ್ಲರ ಮನ ಗೆಲ್ಲುತ್ತಿದೆ.

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಇತರೆ ಹಾಡುಗಳು ಕೂಡಾ ಸೂಪರ್ . ರಕ್ಷಿತ್ ಶೆಟ್ಟಿ, ಶ್ವೇತ ಶ್ರೀವಾಸ್ತವ್ ಅಭಿನಯದ ಈ ಚಿತ್ರ ಫೆ.28ಕ್ಕೆ ತೆರೆ ಕಾಣುವ ಎಲ್ಲಾ ಸಾಧ್ಯತೆಗಳಿದೆ. ಚಿತ್ರ ನಿರ್ಮಿಸಿ ನಿರ್ದೇಶಿಸಿರುವ ಸುನಿಲ್ ಕುಮಾರ್, ಸಾಹಿತ್ಯ ಬರೆದಿರುವ ಸಿದ್ದು ಕೋಡಿಪುರ, ಸಂಗೀತ ನಿರ್ದೇಶಕ ಭರತ್ ಸೇರಿದಂತೆ ಬರೀ ಯುವ ಪ್ರತಿಭೆಗಳೇ ಸೇರಿ ಮಾಡಿರುವ ಈ ಚಿತ್ರ ಹೇಗಿರುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.. ಸದ್ಯಕ್ಕೆ ಕರಗಿದ ಬಾನಿನಲ್ಲಿ ಮೂಡಿ ಬಾ.. ಗೀತ ಸಾಹಿತ್ಯ ಇಲ್ಲಿದೆ ಓದ್ಕೊಳ್ಳಿ

ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ

ಬಾಡಿದ ಈ ಮನ.. ಬಯಸೋ ಹುಡುಗ ನೀನಾ
ಅರಳುವ ಈ ಮನ ಮೊಗ್ಗಾದೆ ನಾ

ಕಾಡೋ ಮಳೆಯನು ಮಳೆಯ ನೆನಪನು ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು ಒಲವ ಕನಸನು ಕನಸ ಉಡುಪನು ತೊಡಿಸು ಬಾ (ಕರಗಿದ)

ನೆರಳಿನ ನೆನಪನೇ ಹೋಲುವ ಗೆಳೆಯನೇ
ಬೆಳಗಿದೆ ಬದುಕನೇ ಮೂಡಿಸಿ ಕಲ್ಪನೆ
ನೀರ ಒಳಗೆ ಅಳುವ ಮೀನು ನಾ
ಹನಿಯ ಒರೆಸೋ ಬೆರಳು ನೀನೆ ನಾ
ನಡುಗಿ ಬಾಡೋ ಹೂವು ನಾನಾದೆ
ಮೆಲ್ಲ ಒಳಗೆ ನುಸುಳಿ ನೀ ಬಂದೆ
ಹಗಲ ಶಶಿಯೂ ನೀನಾದೆಯ

ಕಾಡೋ ಮಳೆಯನು ಮಳೆಯ ನೆನಪನು ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು ಒಲವ ಕನಸನು ಕನಸ ಉಡುಪನು ತೊಡಿಸು ಬಾ (ಕರಗಿದ)

ಚದುರಿದ ಮೋಡವ ಕೂಡಿಸೋ ಬಿಂದುವೆ
ನನ್ನಯಾ ನೀರವ ತೊರೆಯಲು ಸಾಧ್ಯವೆ
ಸುರಿವ ಮಳೆಯ ಪರಿವೆ ನನಗಿಲ್ಲ
ನಿನ್ನ ಹೊರತು ಬೇರೆ ಸೊಗಸಿಲ್ಲ
ಸರಿದ ಸೂರ್ಯಕಿರಣ ಬೀರೋಲ್ಲ
ನಿನ್ನ ಹೊಳಪ ಮೀರೋ ಮಿನುಗಿಲ್ಲ
ಇರುಳ ದೀಪ ನೀನಾದೆಯ

ಕಳೆದ ದಿನವನು ಪಡೆದ ನೋವನು ಕಾಡೋ ಮಳೆಯನು ಮರೆಸು ಬಾ
ಸಿಗುವ ನಗುವನು ನಾಳೆ ಕನಸನು ಕನಸ ಉಡುಪನು ತೊಡಿಸು ಬಾ (ಕರಗಿದ)

English summary
Karagida Banani..Simple Aagi Ondu Love Story movie Song Lyric singer, Sowmy Rao.. Lyrics penned by Siddu Kodipura, Music by BHarath BJ. Movie Starring Rakshith Shetty, Shwetha, produced and directed by Sunil Kumar
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada