For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಬಳಿಕ ಹೊಸ ಹಾಡು: ನಂಬರ್ 1 ಟ್ರೆಂಡಿಂಗ್‌ನಲ್ಲಿ ಮಂಗ್ಲಿ

  |

  ರಾಬರ್ಟ್ ಚಿತ್ರದ 'ಕಣ್ಣೇ ಅದಿರಿಂಧಿ....' ಹಾಡಿನ ಮೂಲಕ ತೆಲುಗು ಗಾಯಕಿ ಮಂಗ್ಲಿ ಸೌತ್ ಇಂಡಿಯಾದ ಹೊಸ ಕ್ರಶ್ ಎನಿಸಿಕೊಂಡಿದ್ದಾರೆ. ಅದರಲ್ಲೂ ರಾಬರ್ಟ್ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮದ ವೇದಿಕೆ ಮೇಲೆ ಹಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

  Recommended Video

  ವೈರಲ್ ಆಯ್ತು ರಾಬರ್ಟ್ ತೆಲುಗು ಗಾಯಕಿ ಮಂಗ್ಲಿಯ ಮತ್ತೊಂದು ಹಾಡು | Mangli Songs | Mangli Shivarathi Songs

  ಸ್ಯಾಂಡಲ್ ವುಡ್ ಇಂಡಸ್ಟ್ರಿಗೂ 'ಮಂಗ್ಲಿ' ಎಂಬ ಹೆಸರು ಬಹಳ ಹತ್ತಿರವಾಗಿಬಿಟ್ಟಿದೆ. ಆಂಧ್ರ-ತೆಲಂಗಾಣದಲ್ಲಿ ಇಷ್ಟು ದೊಡ್ಡ ಯಶಸ್ಸು ಸಿಕ್ಕಿದ್ಯೋ ಇಲ್ವೋ ಕರ್ನಾಟಕದಲ್ಲಿ ಮಾತ್ರ ನಿರೀಕ್ಷೆಗೂ ಮೀರಿದ ಸಕ್ಸಸ್ ಪಡೆದುಕೊಂಡಿದ್ದಾರೆ.

  ಎಲ್ಲೆಲ್ಲೂ 'ಮಂಗ್ಲಿ' ಗಾನ: ತೆಲುಗು ಗಾಯಕಿಗೆ ಅದೃಷ್ಟ ತಂದುಕೊಟ್ಟ ರಾಬರ್ಟ್ಎಲ್ಲೆಲ್ಲೂ 'ಮಂಗ್ಲಿ' ಗಾನ: ತೆಲುಗು ಗಾಯಕಿಗೆ ಅದೃಷ್ಟ ತಂದುಕೊಟ್ಟ ರಾಬರ್ಟ್

  ಕನ್ನಡದ ಹಾಡಿಗಿಂತ ತೆಲುಗು ಭಾಷೆಯ ಹಾಡು ಅತಿ ಹೆಚ್ಚು ಮೆಚ್ಚುಗೆ ಗಳಿಸಿಕೊಂಡಿದೆ. ಇದೀಗ, ರಾಬರ್ಟ್ ಹಾಡಿನ ಯಶಸ್ಸಿನ ಬೆನ್ನಲ್ಲೆ ಮತ್ತೊಂದು ಹೊಸ ಹಾಡು ರಿಲೀಸ್ ಮಾಡಿದ್ದಾರೆ ಗಾಯಕಿ ಮಂಗ್ಲಿ.

  ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನ ಕುರಿತು ಭಕ್ತಿ ಗೀತೆಯೊಂದು ರಚಿಸಿದ್ದು, ತಮ್ಮದೇ ಯ್ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಮಾರ್ಚ್ 8 ರಂದು ಈ ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ.

  ಇದುವರೆಗೂ 8.8 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. 38 ಸಾವಿರ ಮಂದಿ ಇಷ್ಟಪಟ್ಟಿದ್ದು, 1.4 ಸಾವಿರ ಜನರು ಡಿಸ್‌ಲೈಕ್ ಮಾಡಿದ್ದಾರೆ.

  ಕಣ್ಣೇ ಅದಿರಿಂಧಿ ಹಾಡು ಕೇಳಿ ಇಷ್ಟ ಪಟ್ಟಿದ್ದ ಸ್ಯಾಂಡಲ್‌ವುಡ್ ಮಂದಿ ಈಗ ಮಂಗ್ಲಿಯ ಹೊಸ ಹಾಡನ್ನು ಕೇಳಿ ಮೆಚ್ಚಿಕೊಳ್ಳುತ್ತಿದ್ದಾರೆ.

  ಅಂದ್ಹಾಗೆ, ಈ ಹಾಡಿಗೆ ಗೊರಟಿ ವೆಂಕಣ್ಣ ಸಾಹಿತ್ಯ ರಚಿಸಿದ್ದಾರೆ. ದಾಮು ರೆಡ್ಡಿ ನಿರ್ದೇಶಿಸಿದ್ದಾರೆ. ತಿರುಪತಿ ಛಾಯಾಗ್ರಹಣವಿದ್ದು, ಮದೀನ್ ಎಸ್‌ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  English summary
  Shivaratri special 2021: Telugu Singer Mangli released New Song On Lord Shiva.
  Wednesday, March 10, 2021, 7:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X