twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಹಾಡಿನೊಂದಿಗೆ ಬಂದ 'ಮಂಗ್ಲಿ': ಈ ಬಾರಿ ವಿವಾದಕ್ಕೆ ಆಸ್ಪದವಿಲ್ಲ

    |

    ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ತೆಲುಗು ವರ್ಷನ್‌ನಲ್ಲಿ 'ಕಣ್ಣೆ ಅದಿರಿಂಧಿ' ಎಂದು ಹಾಡಿ ಕರ್ನಾಟಕದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಗಾಯಕಿ ಮಂಗ್ಲಿ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.

    ತೆಲುಗು ರಾಜ್ಯಗಳಲ್ಲಿ ಯಾವುದೇ ಹಬ್ಬ ಬಂದರೂ ಅದಕ್ಕೆ ಸಂಬಂಧಿಸಿದ ಹಾಡೊಂದನ್ನು ಗಾಯಕಿ ಮಂಗ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡುತ್ತಾರೆ. ಈ ಪರಿಪಾಟವನ್ನು ಬಹಳ ಸಮಯದಿಂದ ಪಾಲಿಸಿಕೊಂಡು ಬಂದಿದ್ದಾರೆ ಮಂಗ್ಲಿ.

    'ಬೋನಾಲ ಪಾಟ', 'ಸಂಕ್ರಾಂತಿ ಪಾಟ', 'ಉಗಾದಿ ಪಾಟ' ಹೀಗೆ ಹಲವು ಹಬ್ಬಗಳಿಗೆ ಮಂಗ್ಲಿ ಆ ಹಬ್ಬದ ಕುರಿತಾದ ವಿಡಿಯೋ ಹಾಡನ್ನು ಬಿಡುಗಡೆ ಮಾಡುತ್ತಾರೆ. ವಿಡಿಯೋದಲ್ಲಿ ಮಂಗ್ಲಿಯೇ ನರ್ತಿಸಿರುತ್ತಾರೆ, ಹಿನ್ನೆಯಲ್ಲಿ ಅವರೇ ಹಾಡಿರುತ್ತಾರೆ. ಗ್ರಾಮ್ಯ ತೆಲುಗು ಭಾಷೆಯ ಈ ಹಾಡುಗಳು ಬಹಳ ಹಿಟ್ ಆಗುತ್ತವೆ. ಇದೀಗ ಗಣೇಶ ಹಬ್ಬಕ್ಕೆ ಹೊಸದೊಂದು ಹಾಡಿನೊಂದಿಗೆ ಮಂಗ್ಲಿ ಬಂದಿದ್ದಾರೆ.

    ''ಮಣ್ಣಿನಲ್ಲಿ ನಿನ್ನನ್ನು ಮಾಡಿ, ಸಣ್ಣ ಗುಡಿ ಕಟ್ಟಿ, ಅಡವಿಗೆ ಹೋಗಿ ಹೂ-ಹಣ್ಣು ಕೊಯ್ದುಕೊಂಡು ಬಂದು. ಹೂವಿನ ಮಾಲೆ ತೊಡಿಸಿ, ನೈವೇದ್ಯ ಇಟ್ಟು ಕೈ ಮುಗಿದು ನಿನ್ನ ಮುಂದೆ ಬಸ್ಕಿ ಹೊಡೆದಿದ್ದೇವೆ'' ಎಂಬ ಸಾಲುಗಳನ್ನು ಹೊಂದಿರುವ ಹಾಡನ್ನು ಗ್ರಾಮ್ಯ ತೆಲುಗು ಭಾಷೆಯಲ್ಲಿ ಸೊಗಸಾಗಿ ಹಾಡಿದ್ದಾರೆ. ಅದಕ್ಕೆ ತಕ್ಕಂತೆ ವಿಡಿಯೋವನ್ನು ಸಹ ಚಿತ್ರೀಕರಿಸಿಕೊಟ್ಟಿದ್ದಾರೆ ಕೊಟ್ಟಿದ್ದಾರೆ ಮಂಗ್ಲಿ ಮತ್ತು ತಂಡ.

    ಸುಂದರವಾಗಿ ಚಿತ್ರೀಕರಿಸಿರುವ ವಿಡಿಯೋ

    ಸುಂದರವಾಗಿ ಚಿತ್ರೀಕರಿಸಿರುವ ವಿಡಿಯೋ

    ವಿಡಿಯೋದಲ್ಲಿ ಮಂಗ್ಲಿ, ಮಕ್ಕಳೊಂದಿಗೆ ಸೇರಿ ಸಣ್ಣ ಗುಡಿ ಗಟ್ಟಿ, ತಳಿರು-ತೋರಣ ಕಟ್ಟಿ, ಬಾಳೆ ಕಂಬ ಕಟ್ಟಿ ಗಣೇಶನ ಪೂಜೆ ಮಾಡುತ್ತಿದ್ದಾರೆ. ಹಾಡಿನಲ್ಲಿ ಕುಣಿತವೂ ಇದ್ದು, ಕೆಲವು ನೃತ್ಯಗಾರರ ಜೊತೆ ಮಂಗ್ಲಿ ಚೊಕ್ಕವಾಗಿ ಹಾಡಿಗೆ ನರ್ತಿಸುತ್ತಾ ವಿನಾಯಕನ ಗುಣಗಾನ ಮಾಡಿದ್ದಾರೆ. ಯಾವುದೊ ಹಳ್ಳಿಯಲ್ಲಿ ಹಾಡಿನ ವಿಡಿಯೋದ ಚಿತ್ರೀಕರಣ ಮಾಡಲಾಗಿದೆ. ಹಾಡಿನ ವಿಡಿಯೋ ಸರಳವಾಗಿ, ಸುಂದರವಾಗಿ ಇದೆ. ಬಿಡುಗಡೆ ಆದ 24 ಗಂಟೆಗಳ ಒಳಗೆ 21 ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋವನ್ನು ವೀಕ್ಷಿಸಲಾಗಿದೆ. 55 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ವಿಡಿಯೋಕ್ಕೆ ಬಂದಿವೆ.

    ನಿರ್ದೇಶನ ಧಾಮು ರೆಡ್ಡಿ, ನಿರ್ಮಾಣ ಸತೀಶ್ ಧಾಮು

    ನಿರ್ದೇಶನ ಧಾಮು ರೆಡ್ಡಿ, ನಿರ್ಮಾಣ ಸತೀಶ್ ಧಾಮು

    ಮಂಗ್ಲಿಯ ಈ ಗಣಪತಿಯ ಹಾಡನ್ನು ಧಾಮು ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಹಾಡಿಗೆ ರಾಗ ಸಂಯೋಜನೆ, ಸಂಗೀತ ನೀಡಿರುವುದು ಸುರೇಶ್ ಬೊಬ್ಬಿಲಿ, ಸಾಹಿತ್ಯ ಬರೆದಿರುವುದು ಲಕ್ಷ್ಮಣ್, ಕ್ಯಾಮೆರಾ ಕೆಲಸ ಕಮ್ಲಿ ಎಂಬುವರದ್ದು, ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವುದು ಉದಯ್ ಕಿರಣ್, ಸಂಕಲನ ಮಾಡಿರುವುದು ಉದಯ್ ಕುಂಬಂ. ನಿರ್ಮಾಣ ಮಾಡಿರುವುದು ಸತೀಶ್ ಧಾಮ. ಮಾಯುಕ್ ಮತ್ತು ವಾಗ್ದೇವಿ ಹೆಸರಿನ ಮಕ್ಕಳು ಸಹ ಹಾಡಿನಲ್ಲಿ ಧ್ವನಿ ಸೇರಿಸಿದ್ದಾರೆ. ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದ್ದು ಬಹಳ ಒಳ್ಳೆಯ ಪ್ರತಿಕ್ರಿಯೆಗಳು ವೀಕ್ಷಕರಿಂದ ಲಭ್ಯವಾಗಿದೆ.

    'ಬೋನಂ ಪಾಟ' ಹಾಡಿನ ಬಗ್ಗೆ ಆಕ್ಷೇಪಣೆ ಎತ್ತಿದ್ದರು

    'ಬೋನಂ ಪಾಟ' ಹಾಡಿನ ಬಗ್ಗೆ ಆಕ್ಷೇಪಣೆ ಎತ್ತಿದ್ದರು

    ಕೆಲವು ದಿನಗಳ ಹಿಂದೆ ಮಂಗ್ಲಿ 'ಬೋನಾಲ ಪಾಟ' ಹೆಸರಿನ ಹಾಡೊಂದನ್ನು ಬೋನಾಲ ಹಬ್ಬಕ್ಕೆಂದು ಬಿಡುಗಡೆ ಮಾಡಿದ್ದರು. ಆದರೆ ಈ ಹಾಡಿನ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. 'ಮರದ ಕೆಳಗೆ ಸಂಬಂಧಿಗಳ ಹಾಗೆ ಕುಳಿತಿದ್ದೀಯ', 'ನಾವು ಹರಕೆಗಳನ್ನು ಮಾಡಿ ಪೂಜಿಸಿದರೂ ನೀನು ವರವನ್ನು ಕೊಡುತ್ತಿಲ್ಲ', 'ಬೊಂಬೆಯಂತೆ ಅಲುಗದೇ ಇದ್ದೀಯ', 'ನಿನ್ನ ಕರ್ತವ್ಯ ಮರೆತಿದ್ದೀಯ' ಎಂಬಿತ್ಯಾದಿ ಸಾಲುಗಳು ಹಾಡಿನಲ್ಲಿದ್ದವು. ಇದು ಕೆಲವರ ಆಕ್ಷೇಪಕ್ಕೆ ಕಾರಣವಾಗಿದ್ದವು.

    ದೂರು ನೀಡಿದ್ದ ಬಿಜೆಪಿ ಕಾರ್ಪೊರೇಟರ್

    ದೂರು ನೀಡಿದ್ದ ಬಿಜೆಪಿ ಕಾರ್ಪೊರೇಟರ್

    ಮಂಗ್ಲಿಯ 'ಬೋನಂ ಪಾಟ' ಹಾಡಿನ ವಿರುದ್ಧ ತೆಲಂಗಾಣ, ರಚ್ಚಕೊಂಡದ ಮಲ್ಕಜ್‌ಗಿರಿ ಬಿಜೆಪಿ ಕಾರ್ಪೊರೇಟರ್, ರಚ್ಚಕೊಂಡ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮಂಗ್ಲಿ ವಿರುದ್ಧ ದೂರು ನೀಡಿದ್ದರು. ''ಮಂಗ್ಲಿ ಬಿಡುಗಡೆ ಮಾಡಿರುವ ಹಾಡಿನಲ್ಲಿ ಹಿಂದು ದೇವತೆಯನ್ನು ಬೈದಿದ್ದಾರೆ. ಆ ಹಾಡು ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಹಾಗಾಗಿ ಈ ಕೂಡಲೇ ಮಂಗ್ಲಿ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಒತ್ತಾಯಿಸಿದ್ದರು. ಆದರೆ ಮಂಗ್ಲಿ ವಿರುದ್ಧ ಯಾವುದೇ ಕ್ರಮವನ್ನು ಪೊಲೀಸರು ಜರುಗಿಸಲಿಲ್ಲ.

    English summary
    Singer Mangli released new song about Ganesha on YouTube. Mangli releases new songs for every festival.
    Saturday, September 11, 2021, 8:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X