»   » ಮಧುರ ದನಿಯ ಗಾಯಕ ಸೋನು ನಿಗಮ್ ಗೆ ಬರ್ತ್ ಡೇ ವಿಷ್

ಮಧುರ ದನಿಯ ಗಾಯಕ ಸೋನು ನಿಗಮ್ ಗೆ ಬರ್ತ್ ಡೇ ವಿಷ್

Posted By:
Subscribe to Filmibeat Kannada

ಬಹುಭಾಷಾ ಸಿಂಗರ್ ಸೋನು ನಿಗಮ್ ವಾಯ್ಸ್ ಯಾರಿಗೆ ಪರಿಚಯ ಇಲ್ಲ ಹೇಳಿ, ಸಾಮಾನ್ಯವಾಗಿ ಸಂಗೀತ ಪ್ರಿಯರು ಅಂತೂ ತಮ್ಮ ನೆಚ್ಚಿನ ಗಾಯಕ-ಗಾಯಕಿ ಧ್ವನಿಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ.

ಅಂದಹಾಗೆ ಇಂದು (ಜುಲೈ30) ಖ್ಯಾತ ಬಹುಭಾಷಾ ಹಾಡುಗಾರ ಸೋನು ನಿಗಮ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ತಮ್ಮ ಆಪ್ತ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಇಂದು ಸರಸ್ವತಿ ಪುತ್ರ ಸೋನು ನಿಗಮ್ ತಮ್ಮ ಜನುಮ ದಿನವನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಳ್ಳುತ್ತಿದ್ದಾರೆ.

Singer Sonu Nigam, celebrates his 42nd birthday

ಸೋನು ನಿಗಮ್ ಜುಲೈ 30, 1973 ರಂದು ಹರಿಯಾಣದ ಫರೀದಾಬಾದ್ ನಲ್ಲಿ ಜನಿಸಿದರು. ಇವರು 4 ವರ್ಷದ ಮಗುವಿದ್ದಾಗಲೇ ತಂದೆ ಆಗಂ ಕುಮಾರ್ ನಿಗಮ್ ಜೊತೆಗೂಡಿ ಸಂಗೀತದಲ್ಲಿ ಆಸಕ್ತಿ ತೋರಿದ್ದರಿಂದ ಇಂದು ದೊಡ್ಡ ಮಟ್ಟಿಗೆ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸೋನು ನಿಗಮ್ 1990ರಲ್ಲಿ ಮೊದಲನೇ ಬಾರಿಗೆ ಹಿನ್ನಲೆ ಗಾಯಕರಾಗಿ ಹೊರಹೊಮ್ಮಿದ್ದು, 'ಜನಮ್' ಎಂಬ ಹಿಂದಿ ಚಿತ್ರದ ಮೂಲಕ. ಇತ್ತೀಚೆಗೆ ಹೆಚ್ಚಾಗಿ ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಫೇಮಸ್ ಆಗಿದ್ದಾರೆ.

Singer Sonu Nigam, celebrates his 42nd birthday

ಪಾಪ್, ಕ್ಲಾಸಿಕಲ್ ಸೇರಿದಂತೆ ಇನ್ನೂ ಅನೇಕ ರೀತಿಯ ಸಂಗೀತ ರಚನೆ ಮಾಡುವುದರಲ್ಲಿ ನಿಸ್ಸೀಮರಾಗಿರುವ ಸೋನು ನಿಗಮ್, 1996ರಲ್ಲಿ ಬಿಡುಗಡೆಗೊಂಡ ವಿಷ್ಣುವರ್ಧನ್ ಅವರ 'ಜೀವನದಿ' ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿ ಹಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

ಇದೀಗ ಸುಮಾರು 700ಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ಹಾಡಿ ಸಂಗೀತ ಪ್ರೀಯರ ಮನರಂಜಿಸಿದ ಹೆಗ್ಗಳಿಕೆ ಇವರದು. ಮಾತ್ರವಲ್ಲದೇ ಇವರ ಈ ಸಾಧನೆಗೆ ಕನ್ನಡದ ಜನತೆ 'ಕರ್ನಾಟಕದ ಗೋಲ್ಡನ್ ಸ್ಟಾರ್ ಸಂಗೀತಗಾರ' ಎಂಬ ಬಿರುದನ್ನು ದಯಪಾಲಿಸಿದೆ.

ವಿಶೇಷವಾಗಿ ಸೋನು ನಿಗಮ್ ಅವರಿಗೆ ಕನ್ನಡ ಹಾಡುಗಳನ್ನು ಹಾಡುವುದೆಂದರೆ ತುಂಬಾ ಇಷ್ಟವಂತೆ. ಅಲ್ಲದೇ ರಾಜಧಾನಿ ಬೆಂಗಳೂರನ್ನು ಅವರು ತಮ್ಮ ಎರಡನೇ ಹುಟ್ಟೂರು ಎಂದು ಹೇಳಿಕೊಳ್ಳುತ್ತಾರೆ.

ಇಷ್ಟೆಲ್ಲಾ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಹಾಡುಗಾರ ಕನ್ನಡದಲ್ಲಿ 'ನೀನೇ ಬರಿ ನೀನೇ' ಅನ್ನುವ ಆಲ್ಬಂ ಕೂಡ ಬಿಡುಗಡೆ ಮಾಡಿದ್ದಾರೆ. ಮಾತ್ರವಲ್ಲದೇ ತುಳು ಸಿನೆಮಾದ ಹಾಡೊಂದಕ್ಕೂ ದನಿಯಾಗಿದ್ದಾರೆ. ಒಟ್ಟಾರೆ ತುಂಬಾ ಸಂಗೀತ ಪ್ರಿಯರು ಕನ್ನಡದ ಈ ಹಾಡುಗಾರನ ಮೋಡಿಗೆ ಒಳಗಾಗಿದ್ದಾರೆ ಅಂದರೂ ತಪ್ಪಾಗ್ಲಿಕ್ಕಿಲ್ಲ.

ಅದೇನೆ ಇರಲಿ ಇದೀಗ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಹುಭಾಷಾ ಗಾನ ಕೋಗಿಲೆ 'ಗೋಲ್ಡನ್ ವಾಯ್ಸ್ ಆಫ್ ಇಂಡಿಯಾ' ಸೋನು ನಿಗಮ್ ಅವರಿಗೆ ನಮ್ಮ ಕಡೆಯಿಂದನೂ ಹ್ಯಾಪಿ ಬರ್ತ್ ಡೇ.

English summary
Famous singer Sonu Nigam celebrated his 42nd birthday Today (July 30) with his family and friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada