For Quick Alerts
  ALLOW NOTIFICATIONS  
  For Daily Alerts

  ಪುನೀತ್, ಎಸ್‌ಪಿಬಿ ಸ್ಮರಣಾರ್ಥ ದುಬೈನಲ್ಲಿ ಸಂಗೀತ ಸಂಜೆ

  By ಫಿಲ್ಮಿಬೀಟ್ ಕನ್ನಡ
  |

  ಪುನೀತ್ ಸ್ಮರಣಾರ್ಥ ಈಗಾಗಲೇ ಹಲವು ಕಾರ್ಯಕ್ರಮಗಳು ನಡೆದಿವೆ, ನಡೆಯುತ್ತಲೇ ಇವೆ. ಇದೀಗ ದುಬೈನಲ್ಲಿ ಅಪ್ಪು ಸ್ಮರಣಾರ್ಥ ಸಂಗೀತ ರಸಸಂಜೆ ಆಯೋಜಿಸಲಾಗಿದೆ.

  ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಸ್ವರ ಮಾಂತ್ರಿಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರ ಸ್ಮರಣಾರ್ಥ ವಿಜಯ್ ಪ್ರಕಾಶ್ ಸಂಗೀತ ಸಂಜೆ ಕಾರ್ಯಕ್ರಮ 'ನೀನೇ ರಾಜಕುಮಾರ' ದುಬೈನಲ್ಲಿ 2022 ಫೆಬ್ರವರಿ 19 ರಂದು ಸಂಜೆ 6 ಗಂಟೆಗೆ ಸರಿಯಾಗಿ ಅಲ್ ನಸರ್ ಲೀಸರ್ ಲ್ಯಾಂಡ್‌ನಲ್ಲಿ ನಡೆಯಲಿದ್ದು. ಪೂರ್ವ ಸಿದ್ಧತೆಗಳು ಭರದಿಂದ ಸಾಗಿದೆ.

  ಕೋವಿಡ್ ಸಂಕಷ್ಟಗಳ ನಂತರ ನಡೆಯುತ್ತಿರುವ ಪ್ರಥಮ ಕನ್ನಡ ಸಂಗೀತ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಮತ್ತು ಅನುರಾಧ ಭಟ್, ಮೇಘನಾ ಭಟ್, ದುಬೈ ಉದ್ಯಮಿ, ಗಾಯಕ ಹರೀಶ್ ಶೇರಿಗಾರ್ ಹಾಗೂ ಹತ್ತಕ್ಕೂ ಹೆಚ್ಚು ಸಂಗೀತಗಾರರು ಭಾಗವಹಿಸಲಿದ್ದು, ಈ ಸಂಗೀತ ಕಾರ್ಯಕ್ರಮದ ನಿರೂಪಣೆಯನ್ನು ನಿರೂಪಕಿ ಅನುಪಮ ಭಟ್, ಆರ್ ಜೆ ಎರಾಲ್ ನಡೆಸಿಕೊಡಲಿದ್ದಾರೆ.

  ಕಾರ್ಯಕ್ರಮ ವೀಕ್ಷಿಸಲು ಟಿಕೆಟ್ ಅವಶ್ಯಕತೆ ಇದ್ದು ಇದಕ್ಕಾಗಿ ಆನ್‌ಲೈನ್ ಬುಕಿಂಗ್ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದಾರೆ.

  ಗಾಯಕ ವಿಜಯ ಪ್ರಕಾಶ್ ಪುನೀತ್ ಸ್ಮರಣಾರ್ಥ ಹಲವು ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ರಾಜ್ಯದಲ್ಲಿಯೂ ಹಲವು ಕಾರ್ಯಕ್ರಮಗಳನ್ನು ವಿಜಯ ಪ್ರಕಾಶ್ ಪುನೀತ್ ಸ್ಮರಣಾರ್ಥ ನಡೆಸಿಕೊಟ್ಟಿದ್ದಾರೆ.

  'ರಾಜಕುಮಾರ' ಸಿನಿಮಾದ 'ನೀನೇ ರಾಜಕುಮಾರ' ಹಾಡು ಹಾಡಿರುವ ವಿಜಯ ಪ್ರಕಾಶ್ ಇದೊಂದೆ ಅಲ್ಲದೆ ಅಪ್ಪು ಅಭಿನಯದ ಹಲವು ಹಾಡುಗಳನ್ನು ಹಾಡಿದ್ದಾರೆ.

  English summary
  Singing program in memory of Puneeth Rajkumar and SPB in Dubai on February 19.
  Wednesday, February 16, 2022, 14:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X