»   » ವಿಜಿ...ಪರ್ವಾಗಿಲ್ವ ಪಾರಕ್ಕ ಸಾಂಗ್ ಮಸ್ತ್ ಗುರೂ

ವಿಜಿ...ಪರ್ವಾಗಿಲ್ವ ಪಾರಕ್ಕ ಸಾಂಗ್ ಮಸ್ತ್ ಗುರೂ

Posted By:
Subscribe to Filmibeat Kannada
Duniya Vijay
ವೃತ್ತಿ ಜೀವನದಲ್ಲಿ ದ್ವಿಪಾತ್ರವನ್ನು ಪೋಷಿಸುತ್ತಿದ್ದೇನೆ. ಚಿತ್ರಕ್ಕೆ ರಜನಿ ಸಾರ್ ಅವರ ಹೆಸರನ್ನು ಬಳಸಿಕೊಂಡಿದ್ದೇವೆ. ಆದರೆ ಎಲ್ಲೂ ಅವರ ಅನುಕರಣೆ ಇರಲ್ಲ. ರಜನಿಕಾಂತ್ ಅವರ ಅತಿದೊಡ್ಡ ಅಭಿಮಾನು ನಾನು. ಅವರ ಹೆಸರಿನ ಶೀರ್ಷಿಕೆಯಲ್ಲಿ ಅಭಿನಯಿಸುತ್ತಿರುವುದು ನನಗೆ ನಿಜಕ್ಕೂ ಖುಷಿ ಕೊಡುತ್ತಿದೆ ಎಂದಿದ್ದಾರೆ ನಾಯಕ ನಟ ದುನಿಯಾ ವಿಜಯ್.

ವಿಜಿ ಚಿತ್ರದ ಪರ್ವಾಗಿಲ್ಲ ಪಾರಕ್ಕ ಹಾಡು ಪಡ್ಡೆಗಳ ನಿತ್ಯ ಸುಪ್ರಭಾತವಾಗಿ ಹಿಟ್ ಆಗಿದೆ. ಅರ್ಜುನ್ ಜನ್ಯ ಮತ್ತೊಮ್ಮೆ ಮಸ್ತ್ ಮ್ಯೂಸಿಕ್ ಕೊಟ್ಟಿದ್ದಾರೆ. ಚಂದನ್ ಶೆಟ್ಟಿ ಹಾಗೂ ಸುಮಾ ಶಾಸ್ತ್ರಿ ಅವರ ದನಿಯಲ್ಲಿ ಬಂದಿರುವ ಈ ಹಾಡಿನ ಸಾಹಿತ್ಯ ಇಲ್ಲಿದೆ.. ತುಂಬಾ ಹಮ್ಮಿಂಗ್ ಇರೋದನ್ನು ಬಿಡಲಾಗಿದೆ. ವಸೀ ಡಬ್ಬಲ್ ಮೀನಿಂಗ್ ಸಾಹಿತ್ಯ ಕಂಡು ಬಂದರೆ ಅಡ್ಜೆಸ್ಟ್ ಮಾಡ್ಕೊಳ್ಳಿ

ವಾಹ್ವ್ ವಾಹ್ವ್ ...ಜುಂಬ ಒರೆ...

ಗಂಡು: ಪರ್ವಾಗಿಲ್ಲ ಪಾರಕ್ಕ
ಕ್ವಾಣೆ ವಳಕ್ ಬಾರಕ್ಕ
ಕೈ ಚೂರು ಚಾಚಕ್ಕ ...ಕೂತ್ಕೋ ನನ್ಪಕ್ಕ

ಹೆಣ್ಣು: ಉಳ್ಳೀ ಕಾಳುರ್ದಿವ್ನಿ, ಮೆಣಸೇ ಕಾಯರ್ದಿವ್ನಿ
ಇಟ್ನೆಸ್ರೂದು ಮಡ್ಕೆ ಮಡಗಿವ್ನಿ


ಗಂಡು: ಊಟಗೀಟ ಬೇಡ ಕಣೆ ಪಾರಕ್ಕ..
ನೀ ಮಲಗೋ ಕೋಣೆ ಎತ್ಲಗೈತೆ ಹೇಳಕ್ಕ

ವಾಹ್ವ್ ವಾಹ್ವ್ ರಿಪೀಟ್

ಪರ್ವಾಗಿಲ್ಲ(ಪಲ್ಲವಿ)

ಹರ್ದೊಗಿರೋ ಚೆಡ್ಡಿಗೆ ವಲ್ಗೆ ಹಾಕ್ಕೊಡ್ತೀನಿ ಬಾರೋ
ಸೂಜಿ ದಾರ ಬೇಡ ಕಣೋ ಹಂಗೆ ಬೆಳ್ಚಾಗ್ತೀನಿ ಬಾರೋ

ಪರ್ವಾಗಿಲ್ಲ ಪಪ್ಪಪ್ ಪಾರಕ್ಕ..


ನಾಟಿ ಮಾಡೋರ್ಗೆಲ್ಲ
ನಾಟಿ ಕೋಳಿ ಸಾರು
ಮಾಟ್ಕೊಂಡೆಡ್ತೀನಿ
ಕಬ್ಬು ಕಡಿಯೋರ್ಗೆಲ್ಲ
ಕೊಬ್ಬಿದ್ ಕುರಿ ಸಾರು
ಬೇಯ್ಸಾಕ್ತೀನಿ

ಮಾರಕ್ಕನ್ ಹಟ್ಟಿಗೆ ಬಂದೋರ್ಗೆಲ್ಲ ಹೋಳ್ಗೆ
ಬೆಳಗೆದ್ದು ಹೋಗೊದು ಕೂಳಿಗೆ ರಾತ್ರಿ ಬರೋದು ಇಲ್ಲಿಗೆ

ಹೊಳ್ಗೆ ಗೀಳ್ಗೆ ಬೇಡ ಕಣೆ ಪಾರಕ್ಕ
ಗಂಡ ಬಂದ್ರೆ ಎಸ್ಕೇಪ್ ಆಗೋದು ಹೆಂಗಕ್ಕ

ವಾಹ್ ವಾಹ್ವ್ ಒಹ್ಹೊ..

ಪಪ್ಪಪ್ ಪಾರಕ್ಕ(ಪಲ್ಲವಿ)

ಕಟ್ಕೊಂಡ್ ಗಂಡ ಬಿಟ್ಟೋದ್ರೂನೂ
ನಂಗೆ ಆಗಿದ್ದು ನಷ್ಟ ಏನು
ಪಕ್ಕ ಪುಟ್ಟಿಯಾದರೂನೂ
ಜೀವನ ಜೋರಾಗ್ ಮಾಡ್ತಾ ಇಲ್ವೇನು

ಪರ್ವಾಗಿಲ್ಲ
ಕಟ್ಟೆ ಮೇಲೆ ಕೂಂತೋರ್ಗೆಲ್ಲ
ಕಡ್ಲೇಬೀಜ ಕಟ್ಟೊಳ್ ನಾನು
ಪುಂಡರಿಗೆಲ್ಲ ಕನ್ಸಲ್ಲಿ ಕಾಡೋ ಹಿರೋಯಿನ್ನು

ಪಾರಕ್ಕನ್ ಕಾಲ್ಗೆ ಬಿದ್ದೆ ಬಿಡಿ ಮೆಲ್ಲಗೆ

ಎಲೆಕ್ಷನ್ ನಿಲ್ಲದೆ ರಾಣಿಯಾಗವ್ಲೆ ಊರಿಗೆ

ಪಕ್ಷ ಗಿಕ್ಷ ಕಟ್ಟೊಡು ಬೇಡ್ವೆ ಪಾರಕ್ಕ
ನನ್ ವೋಟು ನಿಂಗೆ ಒತ್ತುತ್ತೀವಿ ಬಾರಕ್ಕ

ವಾಹ್ವ್ ವಾಹ್ಬ್..

ಪರ್ವಾಗಿಲ್ಲ(ಪಲ್ಲವಿ)

ಹೆಚ್ಚಿನ ಮಾಹಿತಿ ಸಾಹಿತ್ಯ ಬಗ್ಗೆ ಚರ್ಚೆಗೆ ಯುವ ಸಾಹಿತಿ ಹೃದಯಶಿವ ಅವರ ಬ್ಲಾಗಿಗೆ ತಪ್ಪದೆ ಭೇಟಿ ನೀಡಿ.. ಪದದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ಅಡ್ಜೆಸ್ಟ್ ಮಾಡ್ಕೊಳ್ಳಿ

English summary
Song Lyrics of Rajani kantha movie staring Duniya Vijay and Aidranta rai, Parvagilla Parakka song sung by Chandan Shetty and Suma Shasthri
Please Wait while comments are loading...