»   » ಹದಿನೈದು ವರ್ಷಗಳ ಬಳಿಕ ಬಾಲಿವುಡ್ ಗೆ ಎಸ್ಪಿಬಿ

ಹದಿನೈದು ವರ್ಷಗಳ ಬಳಿಕ ಬಾಲಿವುಡ್ ಗೆ ಎಸ್ಪಿಬಿ

Posted By:
Subscribe to Filmibeat Kannada
ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹದಿನೈದು ವರ್ಷಗಳ ಬಳಿಕ ಬಾಲಿವುಡ್ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಹದಿನೈದು ವರ್ಷಗಳಲ್ಲಿ ಬಾಲಿವುಡ್ ನಲ್ಲಿ ಸಾಕಷ್ಟು ಹೊಸ ಗಾನಸುಧೆ ಹರಿದಿದೆ. ಆದರೂ ತಮ್ಮದೇ ಆದಂತಹ ಕಂಠಸಿರಿಗೆ ಹೆಸರಾದವರು ಎಸ್ಪಿಬಿ.

ಈಗವರು ಕಿಂಗ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ತಮ್ಮ ಗಾನಸುಧೆಯನ್ನು ಹರಿಸುತ್ತಿದ್ದಾರೆ. ವಿಶಾಲ್ ಶೇಖರ್ ಅವರ ಸಂಗೀತ ಚಿತ್ರಕ್ಕಿದೆ. ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಟೈಟಲ್ ಸಾಂಗ್ ಎಸ್ಪಿಬಿ ಕಂಠಸಿರಿಯಲ್ಲಿ ಹೊರಹೊಮ್ಮಿದೆ.

ರೋಹಿತ್ ಶೆಟ್ಟಿ ನಿರ್ದೇಶಿಸುತ್ತಿರುವ ಈ ಚಿತ್ರದದಲ್ಲಿ ಶಾರುಖ್ ಗೆ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿ. ತಮಿಳು ಹುಡುಗಿಯಾಗಿ ದೀಪಿಕಾ ಚಿತ್ರದಲ್ಲಿ ಕಾಣಿಸಲಿದ್ದಾರೆ. ಶಾರುಖ್ ಪತ್ನಿ ಗೌರಿ ಖಾನ್ ಅವರು ರೆಡ್ ಚಿಲ್ಲಿ ಎಂಟರ್ ಟೇನ್ ಮೆಂಟ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರ ಆಕ್ಷನ್ ಕಾಮಿಡಿ ಪ್ರಧಾನವಾಗಿದೆ.

ಆರಂಭದಲ್ಲಿ ಅಮಿತಾಬ್ ಭಟ್ಟಾಚಾರ್ಯ ಬರೆದಿರುವ ಟೈಟಲ್ ಟ್ರ್ಯಾಕ್ ಹಾಡಲು ಎಸ್ಪಿಬಿ ಒಪ್ಪಿರಲಿಲ್ಲವಂತೆ. ಬಳಿಕ ಚಿತ್ರದ ಕಥೆ ಹಾಗೂ ತಾರಾಗಣದ ಮೇಲಿನ ಪ್ರೀತಿ ವಿಶ್ವಾಸಕ್ಕೆ ಮಣಿದು ಈ ಹಾಡನ್ನು ಅವರು ಹಾಡಿದ್ದಾರೆ. 2007ರಲ್ಲಿ ತೆರೆಕಂಡ ಓಂ ಶಾಂತಿ ಓಂ ಚಿತ್ರದ ಬಳಿಕ ದೀಪಿಕಾ ಮತ್ತು ಶಾರುಖ್ ಮತ್ತೆ ಜೊತೆಯಾಗಿ ಅಭಿನಯಿಸುತ್ತಿರುವ ಚಿತ್ರವಿದು. (ಏಜೆನ್ಸೀಸ್)

English summary
The legendary singer S. P. Balasubrahmanyam recorded the title track for the film Chennai Express, marking his return to Bollywood for playback post fifteen years. He claimed the song celebrates the spirit of togetherness.
Please Wait while comments are loading...