»   » ಅರುವತ್ತಾರಕ್ಕೆ ಅಡಿಯಿಟ್ಟ ಗಾನ ಕೋಗಿಲೆ ಎಸ್ಪಿಬಿ

ಅರುವತ್ತಾರಕ್ಕೆ ಅಡಿಯಿಟ್ಟ ಗಾನ ಕೋಗಿಲೆ ಎಸ್ಪಿಬಿ

Posted By:
Subscribe to Filmibeat Kannada
Singer SP Balasubramaniam
ಬಹುಭಾಷಾ ಗಾಯಕ, ನಟ, ನಿರ್ಮಾಪಕ ಪದ್ಮಶ್ರೀ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ(ಎಸ್ ಪಿ ಬಾಲಸುಬ್ರಹ್ಮಣ್ಯಂ) ಅವರಿಗೆ ಇಂದು (ಜೂ 4) ಜನುಮ ದಿನದ ಸಂಭ್ರಮ. ಎಸ್ಪಿಬಿ ಎಂದೇ ಖ್ಯಾತರಾಗಿರುವ ಅವರು ಇಂದು ಅರುವತ್ತಾರನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ.

ವಯಸ್ಸು ಅರುವತ್ತಾರಾದರೂ ಅವರ ಕಂಠದಲ್ಲಿ ಇನ್ನೂ ಹರೆಯದ ಉತ್ಸಾಹ ಧುಮ್ಮಿಕ್ಕುತ್ತಿದೆ. ಅತ್ತ ಕ್ಲಾಸ್ ಇತ್ತ ಮಾಸ್ ಗೀತೆಗಳನ್ನು ಇಷ್ಟಪಡುವ ಕೇಳುಗರ ಮೆಚ್ಚಿನ ಗಾಯಕ ಎಸ್ಪಿಬಿ. ಅವರ ಕಂಠಸಿರಿಯಲ್ಲಿ ಎಂಥಹದ್ದೋ ಮಾಂತ್ರಿಕ ಶಕ್ತಿ ಅಡಗಿದೆ. ಇದುವರೆಗೂ ಅವರು ಹಾಡಿದ ಹಾಡುಗಳು 50,000ಕ್ಕೂ ಅಧಿಕ.

ಅವರು ಹಾಡಿದ ಹಾಡುಗಳು ಎಷ್ಟೋ ಮಂದಿಗೆ ಸಾಂತ್ವನ ನೀಡಿವೆ, ಪ್ರೇಮ ಚಿಗುರಿಸಿವೆ, ಅನುರಾಗ ಅರಳಿಸಿವೆ, ಮನ ಮಿಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಎಸ್ಪಿಬಿ ಅವರಿಗೆ ಜನುಮ ದಿನದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇವೆಲ್ಲಕ್ಕೂ ಎಸ್ಪಿಬಿ ಪರವಾಗಿ ಅವರ ಪುತ್ರ ಎಸ್ ಪಿ ಬಿ ಚರಣ್ ತುಂಬ ಕಳಕಳಿಯಿಂದ ಉತ್ತರ ನೀಡುತ್ತಿದ್ದಾರೆ.

ಕನ್ನಡದಲ್ಲಿ ಎಸ್ಪಿಬಿ ಅಭಿನಯದ ಚಿತ್ರಗಳು ಹೀಗಿವೆ..ಬಾಳೊಂದು ಚದುರಂಗ,ಮುದ್ದಿನ ಮಾವ,ಭಾರತ್ 2000,ಕಲ್ಯಾನೋತ್ಸವ,ಮಾಂಗಲ್ಯಂ ತಂತು ನಾನೇನ,ತಿರುಗುಬಾಣ,ಸಂದರ್ಭ,ಮಹಾ ಎಡಬಿಡಂಗಿ. ಎಸ್ಪಿಬಿ ಎದೆ ತುಂಬಿ, ತನು ತುಂಬಿ, ಮನ ತುಂಬಿ ಹೀಗೆ ಹಾಡುತ್ತಲೇ ಇದ್ದಾರೆ...ಎಲ್ಲ ಕೇಳುತ್ತಲೇ ಇರಲಿ.

ಎಸ್ಪಿಬಿ ಹಾಗೂ ಮತ್ತೊಬ್ಬ ಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿ ಹಾಡಿರುವ ಯುಗಳಗೀತೆಗಳನ್ನು ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತವೆ. ಅವರಿಬ್ಬರ ಕಂಠಸಿರಿಯಲ್ಲಿ ಮೂಡಿಬಂದ ಹಾಡುಗಳು ಕೇಳುಗರನ್ನು ಪರವಶಗೊಳಿಸುತ್ತಲೇ ಇವೆ.

ಕನ್ನಡ, ತಮಿಳು, ತೆಲುಗು, ಮಳಯಾಳಂ, ಹಿಂದಿ, ಒರಿಯಾ, ಅಸ್ಸಾಮಿ, ಪಂಜಾಬಿ, ಬೆಂಗಾಲಿ ಮತ್ತು ತುಳು ಹೀಗೆ ಹಲವಾರು ಭಾಷೆಗಳಲ್ಲಿ ಹಾಡಿರುವ ಎಸ್ಪಿಬಿ ಜಗತ್ತಿನಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ. (ಅತಿಹೆಚ್ಚು ಗೀತೆಗಳನ್ನು ಹಾಡಿದ ಖ್ಯಾತಿ ಲತಾ ಮಂಗೇಶ್ಕರ್ ಅವರಿಗೆ ಸಲ್ಲುತ್ತದೆ).

ಎಸ್ಪಿಬಿ ಅವರ ಮತ್ತೊಂದು ದಾಖಲೆ ಎಂದರೆ ಒಂದೇ ಒಂದ ದಿನದಲ್ಲಿ ಕನ್ನಡದ ಅತಿಹೆಚ್ಚು ಅಂದರೆ 17 ಹಾಡುಗಳಿಗೆ ಹಿನ್ನೆಲೆ ಗಾಯನ ಮಾಡಿರುವುದು ವಿಶೇಷ. ಬಸವಶ್ರೀ ಪ್ರಶಸ್ತಿ, ಗಾನಯೋಗಿ ಪಂಚಾಕ್ಷರಿ ಗವಾಯಿ, ಪದ್ಮಶ್ರೀ ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಎಸ್ಪಿಬಿ ಅವರಿಗೆ ಸಂದಿವೆ. ಎಸ್ಪಿಬಿ ಮತ್ತು ಎಸ್ ಜಾನಕಿ ಹಾಡಿರುವ 'ಪ್ರೇಮಲೋಕ' ಚಿತ್ರದ ಈ ಗೀತೆ ನಿಮಗಾಗಿ. ಸಂಗೀತ ಸಾಹಿತ್ಯ ಹಂಸಲೇಖ.

ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತೀಯ?
ನಿನ್ನ ಪ್ರೀತಿ ಮಾಡ್ತಿನಿ ಮನಸು ಹೃದಯ ಕೊಡ್ತೀಯ?
ಮನಸೀನ ಆಸೆ ಹೇಳಲೇನೂ....!?
ಮುದ್ದಾದ ಗೊಂಬೆ ನೀನು! ಮುತ್ತಂತ ಹೆಣ್ಣು ನೀನು! ನಾನಿನಗೆ ಜೋಡಿ ಅಲ್ಲವೇನು? ಅ ಅ ಅ ಅ ಅಹ್
ಚೆಲುವ ಒಂದು ಹೇಳ್ತಿನಿ ಇಲ್ಲ ಅಂದೇ ಕೆಳ್ತೀಯ?

ಹೆಣ್ಣು: ನಿನ್ನ ಪ್ರೀತಿ ಮಾಡ್ತೀನಿ ಹೇಳೋ ಕೆಲ್ಸ ಮಾಡ್ತೀಯ?
ನಿಜವಾದ ಗಂಡೆ ಆದ್ರೆ ನೀನೂ....
ಹೆಣ್ಣನ ಗೆಲ್ಲೊ ನೀನು... ಮನಸನ್ನ ಕದಿಯೋ ನೀನು.. ಆಮೇಲೆ ಪ್ರೀತಿ ಅಲ್ಲವೆನೂ.....?

ಗಂಡು:ನಿನ್ನ ಪ್ರೀತಿ ಗೆಲ್ಲೋಕೆ ಪ್ರಾಣವನ್ನೆ ಕೊಡ್ತೀನಿ

ಹೆಣ್ಣು: ಹೌದಾ!?.. ಹೈದಾ ..ಪರ್ವಾಗಿಲ್ವೇ

ಗಂಡು: ನಿನ್ನ ಮನಸು ಕದಿಯೋಕೆ ಏಳು ಜನ್ಮ ಕಾಯ್ತೀನಿ
ಹೆಣ್ಣು: ಹೌದಾ! ಹಾಗಂತ್ಯ?.. ಪರ್ವಾಗಿಲ್ವೆ

ಗಂಡು: ಪ್ರೀತಿಗಾಗಿ ಲೋಕವನ್ನೆ ಜಯಿಸಬಲ್ಲೆ ನಾ
ಜಾನಕಿ: ಹೌದ ವೀರ ಜೋಕುಮಾರ ಮಾತು ನಿಜವೆನಾ? ಆಹಹ

ಗಂಡು: ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತಿಯ?

ಹೆಣ್ಣು: ನಿನ್ನ ಪ್ರೀತಿ ಮಾಡ್ತಿನಿ ಹೇಳೊ ಕೆಲಸ ಮಾಡ್ತಿಯ?
ಧೈರ್ಯ ಇಲ್ಲದವರಲ್ಲಿ ಹೇಗೆ ಮನಸು ನೀಡಲೋ?

ಗಂಡು: ಹೌದಾ?.. ಅಯ್ಯೋ! ಮುಂದೇನ್ ಗತಿ!?
ಹೆಣ್ಣು: ಶೌರ್ಯ ಇಲ್ಲದವರನ್ನು ಹೇಗೆ ಪ್ರೀತಿ ಮಾಡಲೋ?

ಗಂಡು: ಆಯ್ಯಯ್ಯೊ.. ಹೌದಾ!? ಇನ್ನೇನ್ ಗತಿ!?
ಹೆಣ್ಣು: ವೀರನಂಥ ಶೂರನಂಥ ಪ್ರೇಮಿ ನನ್ನವನು!
ನಿನ್ನ ಹಾಗೆ ಹೇಡಿ ಅಲ್ಲ ನನ್ನ ಮನ್ಮಥನೂ. ಓ ಹೊ..

ಗಂಡು: ಚೆಲುವೆ ಒಂದು ಕೇಳ್ತಿನಿ ಇಲ್ಲ ಅಂದೇ ಕೊಡ್ತೀಯ?
ನಿನ್ನ ಪ್ರೀತಿ ಮಾಡ್ತೀನಿ ಮನಸು ಹೃದಯ ಕೊಡ್ತೀಯ?

ಹೆಣ್ಣು: ನಿಜವಾದ ಗಂದೆ ಆದ್ರೆ ನೀನೂ
ಹೆಣ್ಣನ ಗೆಲ್ಲೋ ನೀನು.. ಮನಸನ್ನ ಕದಿಯೋ ನೀನು. ಆಮೆಲೆ ಪ್ರೀತಿ ಅಲ್ಲವೆನೂ? (ಒನ್‍ಇಂಡಿಯಾ ಕನ್ನಡ)

English summary
Renowned playback singer, actor, music director, voice actor and film producer SP Balasubramaniam celebrates 66th birthday on 04th June, 2012. His fans who include the biggest celebs have been showering birthday wishes on him via social networking sites.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada