»   » ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2'

ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2'

Posted By:
Subscribe to Filmibeat Kannada

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರದ ಟ್ರೈಲರ್ ಭಾರತೀಯ ಸಿನಿಮಾಗಳಲ್ಲೇ ಅತಿಹೆಚ್ಚು ವೀಕ್ಷಣೆ ಪಡೆದ ಮೊದಲ ಸಿನಿಮಾ ಟ್ರೈಲರ್.[ಅದ್ಭುತಗಳ ಅನಾವರಣ ಮಾಡಿದ 'ಬಾಹುಬಲಿ 2' ಟ್ರೈಲರ್]

ಕಟ್ಟಪ್ಪ ಬಾಹುಬಲಿ ಕೊಂದಿದ್ದು ಏಕೆ? ಎಂಬ ಸಸ್ಪೆನ್ಸ್ ಒಂದು ಕಡೆ ಆದ್ರೆ, ಇನ್ನೊಂದು ಕಡೆ ಮೊನ್ನೆಯಷ್ಟೇ ಬಿಡುಗಡೆ ಆದ 'ಬಾಹುಬಲಿ-ದಿ ಕನ್ ಕ್ಲೂಶನ್' ಟ್ರೈಲರ್ ನಲ್ಲಿರುವ ಮೇಕಿಂಗ್ ಝಲಕ್ ಸಿನಿಮಾದ ಬಗ್ಗೆ ಇದ್ದ ಕ್ರೇಜ್ ಅನ್ನು ಡಬಲ್ ಮಾಡಿದ್ದು, ಚಿತ್ರ ನೋಡಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

'ಬಾಹುಬಲಿ-2' ಚಿತ್ರ ಬಜೆಟ್, ಮೇಕಿಂಗ್, ಟ್ರೈಲರ್ ಎಲ್ಲಾ ವಿಭಾಗದಿಂದ ಹೊಸ ದಾಖಲೆ ಸೃಷ್ಟಿಸಿದ್ದು, ಹೊಸದಾಗಿ ದಾಖಲೆ ಬರೆಯಲು ಇನ್ನೇನಿದೆ ಎಂದು ಯೋಚಿಸುವಷ್ಟರಲ್ಲೇ, ಈಗ ತನ್ನ ಆಡಿಯೋ ರೈಟ್ಸ್ ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ.

ಲಹರಿ ಮ್ಯೂಸಿಕ್ ಗೆ ಬಾಹುಬಲಿ-2 ಆಡಿಯೋ ರೈಟ್ಸ್

'ಬಾಹುಬಲಿ' ಚಿತ್ರದ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡುವ ಮುನ್ಸೂಚನೆ ನೀಡಿರುವ 'ಬಾಹುಬಲಿ-2' ಚಿತ್ರದ ಆಡಿಯೋ ರೈಟ್ಸ್ ಬೆಂಗಳೂರಿನ ಲಹರಿ ಮ್ಯೂಸಿಕ್ ಸಂಸ್ಥೆಗೆ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

ದಾಖಲೆ ಬೆಲೆಗೆ ಮಾರಾಟವಾದ ಆಡಿಯೋ ರೈಟ್ಸ್

ಲಹರಿ ಮ್ಯೂಸಿಕ್ ಅತಿ ದೊಡ್ಡ ಮೊತ್ತಕ್ಕೆ ಆಡಿಯೋ ಹಕ್ಕನ್ನು ಖರೀದಿಸಿದ್ದು, 'ಬಾಹುಬಲಿ-2' ಆಡಿಯೋ ರೈಟ್ಸ್ ಗೆ 4.5೦ ಕೋಟಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

'ಬಾಹುಬಲಿ' ಚಿತ್ರದ ಆಡಿಯೋ ಹಕ್ಕು

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಮೊದಲ ಅವತರಣಿಕೆ ಆಡಿಯೋ ರೈಟ್ಸ್ ಅನ್ನು ಲಹರಿ ಸಂಸ್ಥೆಯೇ 3 ಕೋಟಿ ನೀಡಿ ಖರೀದಿಸಿತ್ತು.

ಲಹರಿ ಸಂಸ್ಥೆ ಖರೀದಿಸಿದ ಅತಿದೊಡ್ಡ ಮೊತ್ತದ ಆಡಿಯೋ ಹಕ್ಕುಗಳು

ಈ ಹಿಂದೆ ಲಹರಿ ಸಂಸ್ಥೆ 'ಪ್ರೇಮಲೋಕ' ಚಿತ್ರದ ಆಡಿಯೋ ಹಕ್ಕನ್ನು 1988 ರಲ್ಲಿ 4.50 ಲಕ್ಷಕ್ಕೆ, 1992 ರಲ್ಲಿ ದಳಪತಿ ಚಿತ್ರದ ಆಡಿಯೋ ಹಕ್ಕನ್ನು 75 ಲಕ್ಷಕ್ಕೆ ಖರೀದಿಸಿತ್ತು. ಆಗಿನ ಸಂದರ್ಭಕ್ಕೆ ಈ ಮೊತ್ತವೇ ಅತಿ ದೊಡ್ಡ ಮೊತ್ತವಾಗಿತ್ತು. ಆದರೆ ಪ್ರಸ್ತುತದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಖರೀದಿಸಿದ ಆಡಿಯೋ ಹಕ್ಕು 'ಬಾಹುಬಲಿ-2' ಚಿತ್ರದ್ದಾಗಿದೆ.

ಬಿಡುಗಡೆಗೂ ಮುನ್ನ ನಿರ್ಮಾಣ ವೆಚ್ಚ ಬಾಚಿದ 'ಬಾಹುಬಲಿ-2'

'ಬಾಹುಬಲಿ-2' ಚಿತ್ರದ ಬಜೆಟ್ 200 ಕೋಟಿ. ಆದರೆ ವರದಿಗಳ ಪ್ರಕಾರ ಚಿತ್ರ ಈಗಾಗಲೇ ತನ್ನ ಸ್ಯಾಟಲೈಟ್ ಮತ್ತು ವಿತರಣೆ ರೈಟ್ಸ್ ಅನ್ನು ಜಾಗತಿಕವಾಗಿ ಮಾರಾಟ ಮಾಡುವ ಮೂಲಕ 500 ಕೋಟಿ ಕಲೆಕ್ಷನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ.

'ಬಾಹುಬಲಿ-2' ಆಡಿಯೋ ರಿಲೀಸ್ ಯಾವಾಗ?

ಅಂದಹಾಗೆ 'ಬಾಹುಬಲಿ-2' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮಾರ್ಚ್ 26 ರಂದು ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನೆರವೇರಲಿದೆ.

ಸಿನಿಮಾ ರಿಲೀಸ್ ಯಾವಾಗ?

'ಬಾಹುಬಲಿ-2' ಚಿತ್ರ ಏಪ್ರಿಲ್ 28 ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶರ್ಮಾ, ತಮನ್ನಾ, ರಮ್ಯಾ ಕೃಷ್ಣ ಮುಂತಾದವರು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

English summary
According to industry sources, The Lahari Recording Company (LRC) paid a whopping Rs. 4.50 crore for SS Rajamouli's 'Baahubali 2' audio rights.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada